ಹೈದರಾಬಾದ್: ಜಾಗತಿಕವಾಗಿ ಹೋಲಿಕೆ ಮಾಡಿದಾಗ ಭಾರತದಲ್ಲಿ ಕ್ಷಯರೋಗದ ಪ್ರಮಾಣವು ಶೇ 16ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಸ್ಟಾಪ್ ಟಿಬಿ ಪಾರ್ಟನರ್ಶಿಪ್ ಬೋರ್ಡ್ನಲ್ಲಿ ಈ ಕುರಿತು ಮಾತನಾಡಿರುವ ಅವರು, ಭಾರತದಲ್ಲಿ ಟಿಬಿ ಪ್ರಕರಣಗಳು 2015 ರಲ್ಲಿ 1 ಮಿಲಿಯನ್ ನಿಂದ 2023 ರಲ್ಲಿ 0.26 ಮಿಲಿಯನ್ ಕಡಿಮೆ ಆಗಿದೆ ಎಂದರು. ಜಾಗತಿಕವಾಗಿ 2030ಕ್ಕೆ ಟಿಬಿ ಮುಕ್ತ ಭಾರತದ ಗುರಿ ಹೊಂದಿದ್ದು, ದೇಶ 2025ರ ಹೊತ್ತಿಗೆ ಭಾರತ ಟಿವಿ ಮುಕ್ತವಾಗಲಿದೆ ಎಂದರು
ಟಿಬಿ ದಶಕಗಳಿಂದ ಜಾಗತಿಕ ಆರೋಗ್ಯ ಸಮಸ್ಯೆಯಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಉಂಟಾದ ಅಡ್ಡಿಯಿಂದ ಎರಡು ವರ್ಷದ ಸವಾಲನ್ನು ಕ್ಷಯರೋಗ ಹೊಂದಿತ್ತು. ಜಾಗತಿಕವಾಗಿ ಇದೀಗ 8.7ರಷ್ಟು ಟಿಬಿ ಪ್ರಕರಣ ಕಡಿಮೆಯಾಗಿದ್ದು, ಭಾರತದಲ್ಲಿ ಇದು ದುಪ್ಪಟ್ಟು ಪ್ರಮಾಣದಲ್ಲಿ ಶೇ 16ರಷ್ಟು ಕಡಿಮೆಯಾಗಿದೆ.
2025ರ ಟಿಬಿ ಮುಕ್ತ ಭಾರತದ ಗುರಿಗೆ ಇನ್ನು ಎರಡು ವರ್ಷ ಉಳಿದಿದೆ. ನಮ್ಮ ಗುರಿಯು ರೋಗ ತಡೆಗಟ್ಟುವಿಕೆ ಮತ್ತು ಟಿಬಿ ಪತ್ತೆ ಮತ್ತು ಸೇವೆಗಳನ್ನು ನೀಡುವುದಾಗಿದೆ. ನಮ್ಮ ನಿರಂತರ ಪ್ರಯತ್ನದಿಂದಾಗಿ ಭಾರತದಲ್ಲಿ ಟಿಬಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಭಾರತದ ಸಾರಥ್ಯದಲ್ಲಿ ನಡೆದ 20 ಶೃಂಗಸಭೆಯಲ್ಲೂ ಡಿಜಿಟಲ್ ಪರಿಹಾರಗಳನ್ನು ಬಳಸಿಕೊಂಡು ಆರೋಗ್ಯ ಸೇವೆಗಳ ಪರಿಣಾಮಕಾರಿತ್ವ ಮತ್ತು ವ್ಯಾಪ್ತಿಯನ್ನು ಸುಧಾರಿಸುವ ಕುರಿತು ಗಮನ ಹರಿಸಲಾಗಿದೆ. ಔಷಧೀಯ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಕಾರವನ್ನು ಬಲಪಡಿಸುವುದು. ಒಂದು ಆರೋಗ್ಯ ಮತ್ತು ಆಂಟಿಮೈಕ್ರೊಬಿಯಲ್ ಪ್ರತಿರೋಧದ ಮೇಲೆ ಕೇಂದ್ರೀಕರಿಸುವುದು ಭಾರತ ಮತ್ತು ವಿಶ್ವದ ಮುಂದಿರುವ ಅಂಶಗಳಾಗಿವೆ.