ನಿಮ್ಮ ನಾಲಿಗೆಯ ಬಣ್ಣ ನಿಮ್ಮ ಆರೋಗ್ಯದ ಬಗ್ಗೆ ಪ್ರಮುಖ ಸುಳಿವು ನೀಡುತ್ತದೆ. ಆರೋಗ್ಯವಂತ ವ್ಯಕ್ತಿಯ ನಾಲಿಗೆ ಸಾಮಾನ್ಯವಾಗಿ ತಿಳಿ ಗುಲಾಬಿ ಬಣ್ಣದಲ್ಲಿ ಕಾಣುತ್ತದೆ. ಕೆರಾಟಿನ್ನ ತಿಳಿ ಬಿಳಿ ಪದರ ಹೊಂದಿರಬಹುದು. ಕೆರಾಟಿನ್ನ ಈ ಪದರವು ರಕ್ಷಣಾತ್ಮಕ ಪ್ರೋಟೀನ್ ಆಗಿದ್ದು, ಅದು ತಿನ್ನುವ ಸಮಯದಲ್ಲಿ ನಾಲಿಗೆಗೆ ಹಾನಿಯಾಗದಂತೆ ತಡೆಯುತ್ತದೆ.
ಸಾಮಾನ್ಯ ನಾಲಿಗೆ ನಯವಾಗಿರಬೇಕು, ಚಪ್ಪಟೆಯಾಗಿರಬೇಕು ಮತ್ತು ಪಾಪಿಲ್ಲೆ ಎಂಬ ಸಣ್ಣ ಉಬ್ಬುಗಳಿಂದ ಮುಚ್ಚಿರಬೇಕಾಗಿರುತ್ತದೆ. ಇವುಗಳು ರುಚಿ ಗ್ರಹಿಕೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಆಹಾರವನ್ನು ಸುಲಭವಾಗಿ ನುಂಗಲು ಮತ್ತು ಆಹಾರದ ತಾಪಮಾನ ಮತ್ತು ಸ್ಪರ್ಶವನ್ನು ಗ್ರಹಿಸುತ್ತವೆ. ನಿಮ್ಮ ನಾಲಿಗೆ ಸಾಮಾನ್ಯವಾಗಿ ಇರುವುದಕ್ಕಿಂತ ವಿಭಿನ್ನವಾಗಿ ಕಂಡುಬಂದರೆ, ಅದು ಆರೋಗ್ಯದ ಸಮಸ್ಯೆಯ ಸಂಕೇತವನ್ನು ಸೂಚಿಸುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ನಾಲಿಗೆಯ ಮೇಲೆ ದಪ್ಪ ಬಿಳಿ ಚುಕ್ಕೆಗಳು: ಇವುಗಳು ಥ್ರಷ್ ಎಂಬ ಯೀಸ್ಟ್ ಸೋಂಕಿನ ಸಂಕೇತವಾಗಿರಬಹುದು. ಈ ರೀತಿಯ ಲಕ್ಷಣಗಳಿಂದ ಮಧುಮೇಹ, ಎಚ್ಐವಿ ಸೇರಿದಂತೆ ವಿವಿಧ ರೋಗಗಳ ಕುರಿತು ತಿಳಿಸುತ್ತದೆ. ಬಿಳಿ ಚುಕ್ಕೆಗಳು ಕೆಲವೊಮ್ಮೆ ಬಾಯಿ ಕ್ಯಾನ್ಸರ್‌ನ ಸಂಕೇತವೂ ಆಗಿರಬಹುದು.
ಕಂದು ಅಥವಾ ಕಪ್ಪು ನಾಲಿಗೆ:ಕಂದು ಅಥವಾ ಕಪ್ಪು ನಾಲಿಗೆಯ ಸಂಕೇತವು ಅಲ್ಲಿ ಪಾಪಿಲ್ಲೆಗಳು ಉದ್ದವಾಗುತ್ತವೆ ಮತ್ತು ಬ್ಯಾಕ್ಟೀರಿಯಾ ಮತ್ತು ವರ್ಣದ್ರವ್ಯವನ್ನು ಹಿಡಿಯುತ್ತವೆ. ಈ ಸ್ಥಿತಿಯು ಬಾಯಿಯ ಅನೈರ್ಮಲ್ಯ, ಕಾಫಿ ಅಥವಾ ಕಪ್ಪು ಚಹಾದ ಅತಿಯಾದ ಸೇವನೆ, ಧೂಮಪಾನ ಮತ್ತು ಕೆಲವು ಔಷಧಿಗಳಿಂದ ಕಂದು ಅಥವಾ ಕಪ್ಪು ನಾಲಿಗೆ ಕಾಣಿಸುತ್ತದೆ.