ಹೈದರಾಬಾದ್: ಬಿರು ಬೇಸಿಗೆ ಆವರಿಸಿದ್ದು, ನಿರ್ಜಲೀಕರಣ ಅಪಾಯದಿಂದ ತಪ್ಪಿಸಿಕೊಳ್ಳಲು ಅಗತ್ಯವಾದ ನೀರು ಸೇವನೆ ಅವಶ್ಯವಾಗಿದೆ. ನೀರಿನ ಅವಶ್ಯಕತೆ ಪ್ರತಿಯೊಬ್ಬರಿಗೂ ಬದಲಾಗುವುದರಿಂದ ಇದಕ್ಕೆ ಇಷ್ಟೇ ನೀರು ಸೇವನೆ ಎಂಬ ನಿರ್ದಿಷ್ಟ ಉತ್ತರವಿಲ್ಲ. ಇದರಿಂದ ಪ್ರತಿಯೊಬ್ಬರಿಗೂ ದಿನಕ್ಕೆ ಎಷ್ಟು ಪ್ರಮಾಣದ ನೀರು ಸೇವಿಸಬೇಕು ಎಂಬ ಪ್ರಶ್ನೆ ಕಾಡುತ್ತದೆ. ವರದಿ ಅನುಸಾರ ಬಹುತೇಕ ಮಂದಿಗೆ ದಿನಕ್ಕೆ ಆರು ಗ್ಲಾಸ್ನ ನೀರಿನ ಅವಶ್ಯಕತೆ ಇದೆ.
ಸಾಮಾನ್ಯವಾಗಿ ಆರೋಗ್ಯಯುತ ಜನರು ದಿನಕ್ಕೆ ಆರು ಪ್ಲೇನ್ ಗ್ಲಾಸ್ ನೀರು ಸೇವಿಸುತ್ತಾರೆ. ಆದರೆ, ಈ ಸಂಖ್ಯೆಯು ನೀರಿನ ಹೊರತಾಗಿ ಸೇವಿಸುವ ಪಾನೀಯ ಮತ್ತು ಆಹಾರದ ಆಧಾರದ ಮೇಲೆ ಬದಲಾಗುತ್ತದೆ. ಅಷ್ಟೇ ಅಲ್ಲದೇ, ಕೆಲವರು ಆರೋಗ್ಯ ಪರಿಸ್ಥಿತಿ, ಚಿಕಿತ್ಸೆ, ಚಟುವಟಿಕೆ ಮಟ್ಟ ಮತ್ತು ತಾಪಮಾನಕ್ಕೆ ಅನುಗುಣವಾಗಿಯೂ ಬದಲಾಗುತ್ತದೆ.
ನೀರು ಕುಡಿಯುವುದರಿಂದ ಪ್ರಯೋಜನ:ದೇಹದ ಕಾರ್ಯಚಾರಣೆಯನ್ನು ಸರಿಯಾಗಿಟ್ಟುಕೊಳ್ಳಲು ನೀರು ಸಹಾಯ ಮಾಡುತ್ತದೆ. ಹಾರ್ವಡ್ ಮೆಡಿಕಲ್ ಸ್ಕೂಲ್ ಸ್ಪೆಷನ್ ಹೆಲ್ತ್ ವರದಿ ಅನುಸಾರ, ಆರು ವಾರದ ಆರೋಗ್ಯಯುತ ನೀರಿನ ಸೇವನೆ ಪ್ಲಾನ್, ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸುವುದು, ಮೂತ್ರಕೋಶದಿಂದ ಬ್ಯಾಕ್ಟೀರಿಯಾವನ್ನು ಹೊರ ಹಾಕುವುದು. ಜೀರ್ಣಕ್ರಿಯೆಗೆ ಸಹಾಯ, ಮಲಬದ್ಧತೆ ತಡೆ, ರಕ್ತದೊತ್ತಡ ಸಾಮಾನ್ಯಗೊಳಿಸುವಿಕೆ, ಕೀಲುಗಳನ್ನು ಸರಾಗಗೊಳಿಸುವಿಕೆ, ಅಂಗಗಳು ಮತ್ತು ಅಂಗಾಂಶಗಳನ್ನು ರಕ್ಷಿಸುವಿಕೆ, ದೇಹದ ಉಷ್ಣತೆಯನ್ನು ನಿಯಂತ್ರಣ ಎಲೆಕ್ಟ್ರೋಲೈಟ್ (ಸೋಡಿಯಂ) ಸಮತೋಲನದಂತಹ ಪ್ರಮುಖ ಕೆಲಸವನ್ನು ಮಾಡುತ್ತದೆ.
ವ್ಯಕ್ತಿಯೊಬ್ಬರಿಗೆ ಎಷ್ಟು ನೀರು ಬೇಕು?ಆರೋಗ್ಯಯುತ ಪುರುಷನಿಗೆ ಪ್ರತಿನಿತ್ಯ ಸರಾಸರಿ 15.5 ಗ್ಲಾಸ್ ಮತ್ತು ಮಹಿಳೆಗೆ 11.5 ಗ್ಲಾಸ್ ನೀರಿನ ಅವಶ್ಯಕತೆ ಇದೆ. ಅಂದರೆ ವ್ಯಕ್ತಿಯೊಬ್ಬನಿಗೆ 6 ಪ್ಲೇನ್ ಗ್ಲಾಸ್ನ ನೀರು ಅವಶ್ಯಕತೆ ಇದ್ದು, ಇದು ಅವರು ಸೇವಿಸುವ ಟೀ, ಕಾಫಿ, ಹಣ್ಣಿನ ಜ್ಯೂಸ್ ಮತ್ತು ತರಕಾರಿ ಮೇಲೆ ಅವಲಂಬಿತವಾಗಿದೆ.
ಇತರೆ ಕಾರಣದಿಂದ ಬರೀ ನೀರು ಸೇವನೆ:ಚಟುವಟಿಕೆ, ವ್ಯಾಯಾಮದಿಂದ ಬೆವರಿನ ಮೂಲಕ ನೀರಿನ ನಷ್ಟಕ್ಕೆ ಒಳಗಾಗುವವರು ಹೆಚ್ಚಿನ ನೀರು ಸೇವಿಸುವುದು ಅವಶ್ಯಕ. ಮ್ಯಾರಾಥಾನ್ನಂತಹ ಚಟುವಟಿಕೆಯಲ್ಲಿ ಭಾಗಿಯಾಗುವವರು ಕೂಡ ನೀರು ಮತ್ತು ಸೋಡಿಯಂ ನಷ್ಟಕ್ಕೆ ಗುರಿಯಾಗುತ್ತಾರೆ. ಅವರು ಹೆಚ್ಚಿನ ನೀರು ಸೇವಿಸುವುದು ಅವಶ್ಯ.
ತಾಪಮಾನ ಕೂಡ ನೀರಿನ ಸೇವನೆ ಮೇಲೆ ಪ್ರಭಾವ ಬೀರುತ್ತದೆ. ಅದರ ಅನುಸಾರವಾಗಿ ಕೂಡ ದೇಹಕ್ಕೆ ನೀರಿನ ಪೂರೈಕೆ ಮಾಡಬೇಕು. ಹೊರಗಿನ ತಾಪಮಾನ ಹೆಚ್ಚಳದಂತೆ ಬಾಯಾರಿಕೆಯೂ ಹೆಚ್ಚುತ್ತದೆ.
ಒಟ್ಟಾರೆ ಆರೋಗ್ಯ ಮತ್ತು ಚಿಕಿತ್ಸೆಯು ಕೂಡ ನೀರಿನ ಸೇವನೆ ಹೆಚ್ಚಿಸುತ್ತದೆ. ಥೈರಾಯ್ಡ್ ಅಥವಾ ಮೂತ್ರಪಿಂಡ, ಯಕೃತ್ ಅಥವಾ ಹೃದಯಾಘಾತದಂತಹ ಸಮಸ್ಯೆ ಹೊಂದಿರುವವರು ಕೂಡ ನೀರಿನ ಸೇವನೆ ಮಟ್ಟವನ್ನು ಹೆಚ್ಚಿಸಬೇಕು.