ಕರ್ನಾಟಕ

karnataka

ETV Bharat / health

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಹೊಟ್ಟೆ ಜ್ವರ ಪ್ರಕರಣ: ಈ ಲಕ್ಷಣ ಕಂಡರೆ ಬೇಡ ನಿರ್ಲಕ್ಷ್ಯ - ಹೊಟ್ಟೆ ಜ್ವರ ಪ್ರಕರಣ

ಹದಿಹರೆಯದವರು, ಹಿರಿಯ ವಯಸ್ಕರು ಮತ್ತು ದುರ್ಬಲ ಪ್ರತಿರೋಧಕ ವ್ಯವಸ್ಥೆ ಹೊಂದಿರುವವರಲ್ಲಿ ಹೊಟ್ಟೆ ಜ್ವರ ಹೆಚ್ಚಿನ ಹಾನಿ ಮಾಡಲಿದೆ.

stomach flu cases rising in National Capital
stomach flu cases rising in National Capital

By IANS

Published : Feb 27, 2024, 10:24 AM IST

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಹೊಟ್ಟೆ ಜ್ವರದ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡು ಬರುತ್ತಿದೆ ಎಂದು ವೈದ್ಯರುಗಳು ತಿಳಿಸಿದ್ದಾರೆ. ಹೊಟ್ಟೆ ಜ್ವರವನ್ನು ಗ್ಯಾಸ್ಟ್ರೋ ಎಂಟರೈಟಿಸ್ ಎಂದು ಕೂಡ ಕರೆಯಲಾಗುತ್ತದೆ. ಇದು ನೊರೊವೈರಸ್, ರೋಟವೈರಸ್ ಮತ್ತು ಎಂಟ್ರೊವೈರಸ್​​ ಸೇರಿದಂತೆ ಅನೇಕ ವೈರಸ್​​ಗಳಿಂದ ಬರುವ ಸಾಮಾನ್ಯ ಅನಾರೋಗ್ಯವಾಗಿದೆ. ಈ ವೈರಸ್‌ಗಳು ಹೆಚ್ಚು ಸಾಂಕ್ರಾಮಿಕವಾಗಿದ್ದು, ಕಲುಷಿತ ಆಹಾರ ಅಥವಾ ನೀರು, ಸೋಂಕಿತ ವ್ಯಕ್ತಿಯ ಸಂಪರ್ಕ ಮತ್ತು ಕಳಪೆ ಶುಚಿತ್ವದಿಂದ ಸುಲಭವಾಗಿ ಹರಡುತ್ತದೆ.

ಇತ್ತೀಚಿನ ದಿನದಲ್ಲಿ ಇಂತಹ ಹೊಟ್ಟೆ ಜ್ವರದ ಪ್ರಕರಣಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಅವರಲ್ಲಿ ಜ್ವರ, ಅತಿಸಾರ, ವೈರಲ್​ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂತಹ ಪ್ರಕರಣದಲ್ಲಿ ಶೇ 20 ರಿಂದ 30ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ವೈಶಾಲಿಯ ಮಾಕ್ಸ್​ ಆಸ್ಪತ್ರೆಯ ಇಂಟರ್ನಲ್​ ಮೆಡಿಸಿನ್​ನ ಹಿರಿಯ ಕನ್ಸಲಟಂಟ್​ ಡಾ ವಂದನಾ ಗಾರ್ಗ್​​ ತಿಳಿಸಿದ್ದಾರೆ.

ಈ ಜ್ವರದ ಪ್ರಮುಖ ಲಕ್ಷಣ ಎಂದರೆ, ಹೊಟ್ಟೆ ನೋವು, ಅತಿಸಾರ ಮತ್ತು ವಾಂತಿ ಆಗಿದೆ. ಇವು ಸ್ವಯಂ ನಿಯಂತ್ರಣಗೊಳ್ಳುವ ಹಿನ್ನೆಲೆ ಆ್ಯಂಟಿಬಯೋಟಿಕ್​​​ ಅನ್ನು ಬಳಕೆ ಮಾಡದಂತೆ ವೈದ್ಯರು ರೋಗಿಗಳಿಗೆ ಸಲಹೆ ನೀಡಿದ್ದಾರೆ.

ಕೆಲವು ನಿರ್ದಿಷ್ಟ ಸಮುದಾಯದಲ್ಲಿ ಈ ಹೊಟ್ಟೆ ಜ್ವರವೂ ಸಾಮಾನ್ಯವಾಗಿದೆ. ಇವು ಸ್ವಯಂ ಮಿತಿ ಹೊಂದಿದ್ದು, ಕೆಲವು ದಿನಗಳ ಬಳಕೆ ಅದೇ ಶಮನವಾಗುತ್ತದೆ. ಈ ಹೊಟ್ಟೆ ಜ್ವರದ ವೈರಸ್​​ಗೆ ಆ್ಯಂಟಿ ಬಯೋಟಿಕ್​ಗಳು ಹೆಚ್ಚು ಪರಿಣಾಮಕಾರಿಯಲ್ಲ. ಈ ಹಿನ್ನೆಲೆ ಬ್ಯಾಕ್ಟೀರಿಯಾ ಸೋಂಕು ಇಲ್ಲದೇ ಇದರ ಬಳಕೆಗೆ ಮುಂದಾಗಬಾರದು. ಪ್ರಸ್ತುತ ಈ ರೀತಿ ಪ್ರಕರಣಗಳು ದಿನದಲ್ಲಿ ಸರಾಸರಿ 6 -7 ದಾಖಲಾಗುತ್ತಿದೆ ಎಂದು ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್ನಲ್​​ ಮೆಡಿಸಿನ್​ ನಿರ್ದೇಶಕ ಡಾ ರಾಜೀವ್​ ಗುಪ್ತಾ ತಿಳಿಸಿದ್ದಾರೆ.

ಹದಿಹರೆಯದವರು, ಹಿರಿಯ ವಯಸ್ಕರು ಮತ್ತು ದುರ್ಬಲ ಪ್ರತಿರೋಧಕ ವ್ಯವಸ್ಥೆ ಹೊಂದಿರುವವರಲ್ಲಿ ಈ ಹೊಟ್ಟೆ ಜ್ವರ ನಿರ್ಜಲೀಕರಣ ಮತ್ತು ಅಪೌಷ್ಟಿಕತೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ವ್ಯಕ್ತಿಗಳು ಇತ್ತೀಚಿನ ಪ್ರಯಾಣದ ಇತಿಹಾಸ ಹೊಂದಿರುವವರು ಸಹ ಅಪಾಯದಲ್ಲಿದ್ದಾರೆ ಎಂದು ಡಾ. ವಂದನಾ ತಿಳಿಸಿದರು. ಈ ವೈರಸ್‌ಗಳು ಹರಡುವುದನ್ನು ತಡೆಗಟ್ಟಲು ಉತ್ತಮ ಆರೋಗ್ಯಯುತ ಆಹಾರ ಅಭ್ಯಾಸವನ್ನು ರೂಢಿಸಿಕೊಳ್ಳುವುದು. ಕೈ ತೊಳೆಯುವುದು. ಜನಸಂದಣಿ ಇರುವ ಪ್ರದೇಶಗಳಿಗೆ ಭೇಟಿ ನೀಡದಿರುವುದು. ಮಾಸ್ಕ್​ ಧರಿಸುವುದು. ಅನಾರೋಗ್ಯ ವ್ಯಕ್ತಿ ಸಂಪರ್ಕಕ್ಕೆ ಬಾರದಂತೆ ಪ್ರಮುಖ ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಅಪರೂಪದ ಮಿದುಳಿನ ರೋಗ ಹರಡುತ್ತಿರುವ ಬಸವನ ಹುಳು; ಸಂಶೋಧನೆಯಲ್ಲಿ ಬಹಿರಂಗ

ABOUT THE AUTHOR

...view details