ಕರ್ನಾಟಕ

karnataka

ETV Bharat / health

ಭಾರತದ 12.5 ಮಿಲಿಯನ್​ ಮಕ್ಕಳಲ್ಲಿ, ಜಾಗತಿಕವಾಗಿ 8ರಲ್ಲಿ ಒಬ್ಬರಿಗೆ ಸ್ಥೂಲಕಾಯ ಸಮಸ್ಯೆ: ವರದಿ - 8ರಲ್ಲಿ ಒಬ್ಬರಲ್ಲಿ ಸ್ಥೂಲಕಾಯ

ಸ್ಥೂಲಕಾಯವೂ ಅನೇಕ ರೋಗಗಳಿಗೆ ರಹದಾರಿಯಾಗಿದೆ. ಈ ಹಿನ್ನಲೆ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕಿದೆ. 2022 ರಲ್ಲಿ ಭಾರತದಲ್ಲಿ 5 ರಿಂದ 19 ವರ್ಷದೊಳಗಿನ ಸುಮಾರು 12.5 ಮಿಲಿಯನ್ ಮಕ್ಕಳು ಬೊಜ್ಜು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

one-billion-people-worldwide-are-living-with-obesity
one-billion-people-worldwide-are-living-with-obesity

By ETV Bharat Karnataka Team

Published : Mar 1, 2024, 1:43 PM IST

ಜಿನೀವಾ:ಎಂಟರಲ್ಲಿ ಓರ್ವ ಅಥವಾ ಜಗತ್ತಿನಲ್ಲಿ ಒಂದು ಬಿಲಿಯನ್​ ಮಂದಿ ಸ್ಥೂಲಕಾಯ (ಬೊಜ್ಜು) ಸಮಸ್ಯೆಗೆ ಒಳಗಾಗಿದ್ದಾರೆ. ಇದು ಅವರನ್ನು ಹೃದಯ ರೋಗ, ಮಧುಮೇಹ ಮತ್ತು ಕ್ಯಾನ್ಸರ್​ನಂತಹ ಸಮಸ್ಯೆಗೆ ತುತ್ತು ಮಾಡುತ್ತದೆ ಎಂದು ಲ್ಯಾನ್ಸೆಟ್​​ ಬಿಡುಗಡೆ ಮಾಡಿದ ಹೊಸ ವರದಿ ತಿಳಿಸಿದೆ.

ಅಧ್ಯಯನವೂ ತೋರಿಸುವಂತೆ ಕಳೆದ ಮೂರು ದಶಕಗಳಿಂದ ಜಗತ್ತಿನಾದ್ಯಂತ ವಯಸ್ಕರ ಸ್ಥೂಲಕಾಯದ ಸಮಸ್ಯೆ ದುಪ್ಪಟ್ಟಾಗಿದೆ. ಅಷ್ಟೇ ಅಲ್ಲದೇ, ಈ ಸಮಸ್ಯೆಯು 5 ರಿಂದ 19 ವರ್ಷದ ಮಕ್ಕಳನ್ನು ಕಾಡುತ್ತಿದ್ದು, ಇವರಲ್ಲಿ ಈ ಪರಿಸ್ಥಿತಿ ನಾಲ್ಕು ಪಟ್ಟು ಹೆಚ್ಚಾಗಿದೆ. 2022ರಲ್ಲಿ ಜಗತ್ತಿನಲ್ಲಿ ಶೇ 43ರಷ್ಟು ಮಂದಿ ಅಧಿಕ ತೂಕವುಳ್ಳವರಿದ್ದಾರೆ. ಯೌವನದ ಆರಂಭದ ದಿನದಲ್ಲಿಯೇ ಈ ಸ್ಥೂಲಕಾಯ ನಿರ್ವಹಣೆ ಮತ್ತು ತಡೆಗಟ್ಟವುದು ಅಗತ್ಯವಾಗಿದೆ. ಇದಕ್ಕೆ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಮತ್ತು ಆರೈಕೆ ಅಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಮುಖ್ಯಸ್ಥರಾದ ಟೆಡ್ರೊಸ್​ ಅದೊನಮ್​ ಗೇಬ್ರಿಯಸೆಸ್ ತಿಳಿಸಿದ್ದಾರೆ.

ಇದನ್ನೂ ಓದಿ: ತೂಕ ನಿರ್ವಹಣೆಗೆ ಸಹಾಯ ಮಾಡುವ ಸ್ನ್ಯಾಕ್ಸ್​​ಗಳಿವು; ಇದರಿಂದ ಆರೋಗ್ಯ ಕೂಡ ವೃದ್ಧಿ!

ಅಷ್ಟೇ ಅಲ್ಲ 2022 ರಲ್ಲಿ ಭಾರತದಲ್ಲಿ 5 ರಿಂದ 19 ವರ್ಷದೊಳಗಿನ ಸುಮಾರು 12.5 ಮಿಲಿಯನ್ ಮಕ್ಕಳು ಅಧಿಕ ತೂಕ ಹೊಂದಿದ್ದಾರೆ. ಅದರಲ್ಲಿ 7.3 ಮಿಲಿಯನ್ ಹುಡುಗರು ದಪ್ಪವಾಗಿದ್ರೆ, 5.2 ಮಿಲಿಯನ್ ಹುಡುಗಿಯರು ಬೊಜ್ಜಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ವರದಿಯಲ್ಲಿ ಉಲ್ಲೇಖವಾಗಿದೆ.

1990 ರ ದಶಕದಿಂದಲೂ ಕಡಿಮೆ ತೂಕದ ಜನರ ಸಂಖ್ಯೆಯು ಕಡಿಮೆಯಾಗುತ್ತಿದೆ ಮತ್ತು ಬೊಜ್ಜು ಹೆಚ್ಚಿನ ದೇಶಗಳಲ್ಲಿ ಅಪೌಷ್ಟಿಕತೆಯ ಸಾಮಾನ್ಯ ರೂಪವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸ್ಥೂಲಕಾಯತೆ ಮತ್ತು ಕಡಿಮೆ ತೂಕ ಇವೆರಡೂ ಅಪೌಷ್ಟಿಕತೆಯ ರೂಪಗಳಾಗಿವೆ ಮತ್ತು ಅನೇಕ ವಿಧಗಳಲ್ಲಿ ಜನರ ಆರೋಗ್ಯಕ್ಕೆ ಹಾನಿಕಾರಕವಾಗಿದೆ. NCD ರಿಸ್ಕ್ ಫ್ಯಾಕ್ಟರ್ಸ್ ಸಹಯೋಗ (NCD-ರಿಸ್ಕ್) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಯಿಂದ ಜಾಗತಿಕ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ವಿಶ್ವದಾದ್ಯಂತ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸ್ಥೂಲಕಾಯತೆಯು 1990 ಕ್ಕಿಂತ 2022 ರಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆಯಂತೆ.

ವಯಸ್ಕರಲ್ಲಿ, ಸ್ಥೂಲಕಾಯತೆಯ ಪ್ರಮಾಣವು ಮಹಿಳೆಯರಲ್ಲಿ ದ್ವಿಗುಣವಾಗಿದೆ ಮತ್ತು ಪುರುಷರಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಹೇಳಿದೆ. ಅಧ್ಯಯನದ ಪ್ರಕಾರ, 2022 ರಲ್ಲಿ, 15 ಕೋಟಿ 90 ಲಕ್ಷ ಮಕ್ಕಳು, ಹದಿಹರೆಯದವರು ಮತ್ತು 87 ಕೋಟಿ 90 ಲಕ್ಷ ವಯಸ್ಕರು ಸ್ಥೂಲಕಾಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರಂತೆ.

"1990 ರ ದಶಕದಲ್ಲಿ ಪ್ರಪಂಚದ ಹೆಚ್ಚಿನ ವಯಸ್ಕರಲ್ಲಿ ಕಂಡುಬರುವ ಸ್ಥೂಲಕಾಯತೆಯ ಸಾಂಕ್ರಾಮಿಕ ರೋಗವು ಈಗ ಶಾಲೆಗೆ ಹೋಗುವ ಮಕ್ಕಳು ಮತ್ತು ಹದಿಹರೆಯದವರಲ್ಲಿಯೂ ಗೋಚರಿಸುತ್ತಿರುವುದು ತುಂಬಾ ಕಳವಳಕಾರಿಯಾಗಿದೆ" ಎಂದು ಬ್ರಿಟನ್‌ನ ಇಂಪೀರಿಯಲ್ ಕಾಲೇಜ್ ಲಂಡನ್‌ನ ಪ್ರೊಫೆಸರ್ ಮಜಿದ್ ಎಝಾಟಿ ಆತಂಕ ವ್ಯಕ್ತಪಡಿಸಿದ್ದಾರೆ.

1,500 ಕ್ಕೂ ಹೆಚ್ಚು ಸಂಶೋಧಕರು ಈ ಅಧ್ಯಯನಕ್ಕೆ ಕೊಡುಗೆ ನೀಡಿದ್ದಾರೆ. 1990 ಮತ್ತು 2022 ರ ನಡುವೆ ಪ್ರಪಂಚದಾದ್ಯಂತ ಬೊಜ್ಜು ಮತ್ತು ಕಡಿಮೆ ತೂಕವು ಹೇಗೆ ಬದಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು ವಿಶ್ಲೇಷಿಸಿದ್ದಾರೆ.

ಕಡಿಮೆ ತೂಕ ಹೊಂದಿರುವ ಹುಡುಗಿಯರ ಪ್ರಮಾಣವು 1990 ರಲ್ಲಿ ಶೇಕಡಾ 10.3 ರಿಂದ 2022 ರಲ್ಲಿ ಶೇಕಡಾ 8.2 ಕ್ಕೆ ಇಳಿದಿದೆ ಮತ್ತು ಹುಡುಗರ ಪ್ರಮಾಣವು ಶೇಕಡಾ 16.7 ರಿಂದ ಶೇಕಡಾ 10.8 ಕ್ಕೆ ಇಳಿದಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ. 44 ದೇಶಗಳಲ್ಲಿ ಹುಡುಗಿಯರಲ್ಲಿ ಕಡಿಮೆ ತೂಕದ ದರದಲ್ಲಿ ಇಳಿಕೆ ಕಂಡುಬಂದರೆ, ಹುಡುಗರಲ್ಲಿ ಈ ಕುಸಿತವು 80 ದೇಶಗಳಲ್ಲಿ ಕಂಡುಬಂದಿದೆ ಎಂದು ಎಝಾಟಿ ಹೇಳಿದರು.

ABOUT THE AUTHOR

...view details