ಕರ್ನಾಟಕ

karnataka

ETV Bharat / health

ನೆನೆಸಿಡಬೇಕಿಲ್ಲ, ರುಬ್ಬಿಕೊಳ್ಳುವ ಅಗತ್ಯವೂ ಇಲ್ಲ: ಕೆಲವೇ ನಿಮಿಷಗಳಲ್ಲಿ ರುಚಿಕರ ದೋಸೆ ರೆಡಿ! - Instant Dosa Mix Powder - INSTANT DOSA MIX POWDER

Instant Dosa Mix Powder: ದೋಸೆ ಸಿದ್ಧಪಡಿಸಲು ಅಕ್ಕಿ, ಉದ್ದಿನ ಬೇಳೆ ಸೇರಿದಂತೆ ವಿವಿಧ ಪದಾರ್ಥಗಳನ್ನು ನೆನೆಸುವ ಅಗತ್ಯವಿಲ್ಲ, ಜೊತೆಗೆ ರುಬ್ಬಿಕೊಳ್ಳುವ ಅಗತ್ಯವೂ ಇಲ್ಲ. ಆದ್ರೆ ಕೆಲವೇ ನಿಮಿಷಗಳಲ್ಲೇ ರುಚಿಕರ ದೋಸೆ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ..

INSTANT DOSA MIX POWDER PREPARATION  HOW TO MAKE INSTANT DOSA MIX  HOW TO PREPARE DOSA MIX IN KANNADA  INSTANT DOSA MIX IN KANNADA
ದೋಸೆ (Etv Bharat)

By ETV Bharat Health Team

Published : Sep 18, 2024, 4:46 PM IST

Instant Dosa Mix Powder: ಅತ್ಯಂತ ಪ್ರಿಯವಾದ ಉಪಹಾರ ಪದಾರ್ಥಗಳಲ್ಲಿ ದೋಸೆಯೂ ಒಂದು. ದೋಸೆ ತುಂಬಾ ರುಚಿಕರವಾಗಿದ್ದು, ಮಕ್ಕಳು ಮತ್ತು ವಯಸ್ಕರು ಇಷ್ಟಪಟ್ಟು ಸೇವಿಸುತ್ತಾರೆ. ಸಾಮಾನ್ಯವಾಗಿ ದೋಸೆಯನ್ನು ತಯಾರಿಸಲು ನೀವು ಹಿಂದಿನ ರಾತ್ರಿ ಅಕ್ಕಿ, ಉದ್ದಿನ ಬೇಳೆಯನ್ನು ನೆನೆಸಿಡಬೇಕು. ಮರುದಿನ ಬೇಗ ರುಬ್ಬಿಕೊಳ್ಳಬೇಕಾಗುತ್ತದೆ. ಇದೆಲ್ಲ ಕಷ್ಟದ ಕೆಲಸವಾಗುತ್ತದೆ. ಇನ್ನು ಸಮಯ ತೆಗೆದುಕೊಳ್ಳುತ್ತದೆ. ಆದರೆ, ಎಷ್ಟೋ ಜನಕ್ಕೆ ಗೊತ್ತಿರದ ವಿಷಯವೇನೆಂದರೆ, ಎಷ್ಟು ಸಮಯ ನೆನೆಸಿಡಬೇಕಾಗುತ್ತದೆ. ನೀವು ಯಾವಾಗ ದೋಸೆ ತಿನ್ನಲು ಬಯಸುತ್ತೀರೋ, ಆಗ ನೀವು ಬಿಸಿ ಬಿಸಿಯಾದ ಕ್ರಿಸ್ಪಿ ದೋಸೆಗಳನ್ನು ತಯಾರಿಸಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು, ಸಮಯ ಸಿಕ್ಕಾಗ ಈ ರೀತಿ "ದೋಸೆ ಮಿಕ್ಸ್ ಪೌಡರ್" ತಯಾರಿಸಿಡುವುದು. ಹಾಗಾದರೆ, ಆ ದಿಢೀರ್ ದೋಸೆ ಹಿಟ್ಟನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಯಾವುವು? ಅದನ್ನು ಹೇಗೆ ಮಾಡೋದು ಎಂಬುದರ ವಿವರ ಇಲ್ಲಿದೆ..

ದೋಸೆ ಮಿಕ್ಸ್ ಪೌಡರ್​ ಅಥವಾ ಹಿಟ್ಟು ಸಿದ್ಧಪಡಿಸಲು ಬೇಕಾಗುವ ಸಾಮಗ್ರಿಗಳು:

  • ಅಕ್ಕಿ- ಮೂರು ಕಪ್​
  • ಉದ್ದಿನ ಬೇಳೆ- ಒಂದು ಕಪ್
  • ಉಪ್ಪಿಟ್ಟಿನ ರವಾ- 2 ಚಮಚ
  • ಕಡಲೆಕಾಯಿ - 2 ಚಮಚ
  • ತೊಗರಿ - 2 ಚಮಚ
  • ಅವಲಕ್ಕಿ - 1 ಕಪ್
  • ಅಡುಗೆ ಸೋಡಾ - ಚಮಚ
  • ಮೆಂತ್ಯ - ಅರ್ಧ ಚಮಚ
  • ಉಪ್ಪು - ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ:

  • ದೋಸೆ ಮಿಕ್ಸ್ ಪೌಡರ್ ಅಥವಾ ಹಿಟ್ಟು ತಯಾರಿಸಲು, ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಹಸಿ ವಾಸನೆ ಹೋಗುವವರೆಗೆ ಕಡಲೆ, ತೊಗರಿ ಬೇಳೆ, ಉದ್ದಿನ ಬೇಳೆ, ಮೆಂತ್ಯ ಹುರಿಯಿರಿ.
  • ಹಾಗೆ ಹುರಿದ ನಂತರ ಅದಕ್ಕೆ ಅವಲಕ್ಕಿಯನ್ನು ಹಾಕಿ ಇನ್ನಷ್ಟು ಹುರಿಯಿರಿ.
  • ನಂತರ ಅವುಗಳನ್ನು ತಣ್ಣಗಾಗಿಸಿ, ಪುಡಿಮಾಡಿ ಮತ್ತು ಪಕ್ಕಕ್ಕೆ ಇರಿಸಿ.
  • ಈಗ ಅದೇ ಬಾಣಲೆಯಲ್ಲಿ ಅಕ್ಕಿಯನ್ನು ಹುರಿಯಿರಿ ಮತ್ತು ಉರಿ ಕಡಿಮೆ ಮಾಡಿದ ನಂತರ, ತಣ್ಣಗಾದ ಬಳಿಕ ಅದೆಲ್ಲವನ್ನೂ ಮಿಕ್ಸ್​ ಮಾಡಿ ಇಟ್ಟುಕೊಳ್ಳಿ.
  • ಅದರ ನಂತರ, ಒಂದು ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಮಿಶ್ರಿತ ಅಕ್ಕಿ ಹಿಟ್ಟು, ರುಬ್ಬಿದ ಕಡಲೆ, ತೊಗರಿ ಬೇಳೆ, ಉದ್ದಿನ ಬೇಳೆ, ಮೆಂತ್ಯ, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಅಷ್ಟು ಮಾಡಿದರೆ ಸಾಕು, ನಿಮಗೆ ಬೇಕಾದ ತಕ್ಷಣವೇ ತಯಾರಿಸಲು ಬೇಕಾಗುವ ದೋಸೆ ಹಿಟ್ಟು ರೆಡಿ!
  • ಇದನ್ನು ಗಾಳಿಯಾಡದ ಡಬ್ಬಿ ತೆಗೆದು ಇಟ್ಟುಕೊಂಡರೆ ಸಾಕು.
  • ಬೇಕು ಎನಿಸಿದಾಗ ತಕ್ಷಣವೇ ದೋಸೆ ಮಾಡಿ ತಿನ್ನಬಹುದು ಎನ್ನುತ್ತಾರೆ ಆಹಾರ ತಜ್ಞರು.
  • ಈ ಇನ್‌ಸ್ಟಂಟ್‌ ಪೌಡರ್‌ನಿಂದ ತಯಾರಿಸಿದ ದೋಸೆಯಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್‌ಗಳು ಮತ್ತು ಇತರ ಪೋಷಕಾಂಶಗಳು ಲಭಿಸುತ್ತವೆ ಎಂದು ಹೇಳುತ್ತಾರೆ ಅಡುಗೆ ತಜ್ಞರು.

ಇದನ್ನೂ ಓದಿ:

ABOUT THE AUTHOR

...view details