ಕರ್ನಾಟಕ

karnataka

ETV Bharat / health

ಫ್ರಿಡ್ಜ್​ನಲ್ಲಿ ಆಹಾರ ಪದಾರ್ಥಗಳನ್ನ ಇಡುವಾಗ ಈ ತಪ್ಪು ಮಾಡದಿರಿ: ಇಲ್ಲದಿದ್ದರೆ ಅವು ಬೇಗನೆ ಕೆಡುತ್ತವೆ - HOW TO ORGANIZE FRIDGE

How to Organize Fridge: ರೆಫ್ರಿಜರೇಟರ್​ನಲ್ಲಿ ಆಹಾರ ಪದಾರ್ಥಗಳನ್ನು ಅಚ್ಚುಕಟ್ಟಾಗಿ ಹೊಂದಿಸುವುದು ಕೂಡ ಒಂದು ಕಲೆಯಾಗಿದೆ. ಆಹಾರ ಪದಾರ್ಥಗಳನ್ನು ಸರಿಯಾಗಿ ಹೊಂದಿಸದೇ ಇದ್ದರೆ, ಅವು ಬೇಗನೆ ಹಾಳಾಗುತ್ತವೆ. ಇದನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿಯೋಣ.

BEST WAY TO ORGANIZE A FRIDGE  ORGANIZE A FRIDGE IN KANNADA  TIPS TO ORGANISE FRIDGE
ಸಾಂದರ್ಭಿಕ ಚಿತ್ರ (ETV Bharat)

By ETV Bharat Lifestyle Team

Published : Nov 15, 2024, 7:50 PM IST

How to Organize Fridge:ಇತ್ತೀಚಿನ ದಿನಗಳಲ್ಲಿ ರೆಫ್ರಿಜರೇಟರ್ ಬಹುತೇಕರ ಮನೆಗಳಲ್ಲಿ ಸಾಮಾನ್ಯವಾಗಿ ಇರುತ್ತದೆ. ಹಾಲು, ಮೊಸರು, ಹಣ್ಣುಗಳು, ತರಕಾರಿಗಳು ತಾಜಾ ಆಗಿರುವಂತೆ ನೋಡಿಕೊಳ್ಳಲು ಫ್ರಿಡ್ಜ್​ ತುಂಬಾ ಉಪಯುಕ್ತವಾಗಿದೆ. ಹಲವು ವಾರಕ್ಕೆ ಬೇಕಾಗುವಷ್ಟು ಇಡ್ಲಿ ಮತ್ತು ದೋಸೆ ಹಿಟ್ಟನ್ನು ರೆಡಿ ಮಾಡಿ ಫ್ರಿಡ್ಜ್​ನಲ್ಲಿ ಇಡುತ್ತಾರೆ. ಹೆಚ್ಚಿನವರು ಫ್ರಿಡ್ಜ್​​ನಲ್ಲಿ ತರಕಾರಿ, ಹಣ್ಣು ಮತ್ತು ಮಾಂಸ ಹೀಗೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಜೋಡಿಸಿ ಇಡುತ್ತಾರೆ. ಇದರಿಂದ ಫ್ರಿಡ್ಜ್ ಬಾಗಿಲು ತೆರೆದಾಗ ಸಾಮಾನ್ಯ ದುರ್ವಾಸನೆ ಬರುತ್ತಿದೆ. ಈಗ ಫ್ರಿಜ್ ಕೆಟ್ಟ ವಾಸನೆ ಬರದಂತೆ ಇದರಲ್ಲಿ ಆಹಾರ ಸಾಮಗ್ರಿಗಳನ್ನು ಸರಿಯಾಗಿ ಹೊಂದಿಸಿ ಇಟ್ಟುಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.

ಹಣ್ಣು, ತರಕಾರಿಗಳು: ಕೆಲವರು ಮಾರುಕಟ್ಟೆಯಿಂದ ಹಣ್ಣು, ತರಕಾರಿಗಳನ್ನು ತಂದು ತೊಳೆದು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಆದರೆ, ಈ ರೀತಿ ಮಾಡಬೇಡಿ. ಅವುಗಳನ್ನು ಸ್ವಚ್ಛಗೊಳಿಸಿದ ನಂತರ ಪ್ರತಿಯೊಂದು ವಿಧದ ತರಕಾರಿ, ಹಣ್ಣುಗಳನ್ನು ಕಾಗದ ಅಥವಾ ಪ್ಲಾಸ್ಟಿಕ್ ಕವರ್​ನಲ್ಲಿ ಪ್ಯಾಕ್ ಮಾಡಬೇಕು. ಹೀಗೆ ಮಾಡುವುದರಿಂದ ಫ್ರೆಶ್ ಆಗಿರುವುದರ ಜೊತೆಗೆ ಫ್ರಿಡ್ಜ್​ನಿಂದ ಕೆಟ್ಟ ವಾಸನೆ ಬರುವುದಿಲ್ಲ. ಹಣ್ಣುಗಳನ್ನು ಒಂದು ಕಪಾಟಿನಲ್ಲಿ ಹಾಗೂ ತರಕಾರಿಗಳನ್ನು ಮತ್ತೊಂದರಲ್ಲಿ ಜೋಡಿಸುವುದು ಉತ್ತಮ ಎಂದು ತಜ್ಞರು ತಿಳಿಸುತ್ತಾರೆ.

ಮಾಂಸಾಹಾರ ಹೀಗೆ ಸಂಗ್ರಹಿಸಿ ಇಡಿ: ಕೆಲವರು ಮೀನು, ಚಿಕನ್, ಮಟನ್ ಅನ್ನು ಪ್ಲಾಸ್ಟಿಕ್ ಕವರ್​ನಲ್ಲಿಟ್ಟು ಫ್ರಿಡ್ಜ್​ನಲ್ಲಿ ಇಡುತ್ತಾರೆ. ನೀವು ಹಸಿ ಮಾಂಸವನ್ನು ಶೈತ್ಯೀಕರಣಗೊಳಿಸಲು ಬಯಸುವುದಾದರೆ, ಇದನ್ನು ಮುಚ್ಚಳ ವಿರುವ ಅಥವಾ ಗಾಳಿಯಾಡದ ಡಬ್ಬಿಯಲ್ಲಿ ಇರಿಸಿದರೆ ಒಳ್ಳೆಯದು. ಮಾಂಸವನ್ನು ಬೇರೆ ಕಪಾಟಿನಲ್ಲಿ ಇಟ್ಟರೆ ಉತ್ತಮ. ಬೇಯಿಸದ ಮಾಂಸ, ಮೀನುಗಳನ್ನು ತರಕಾರಿ ಹಾಗೂ ಹಣ್ಣುಗಳಿಂದ ದೂರವಿಡಿ. ಇಲ್ಲದಿದ್ದರೆ ಅವುಗಳ ಮೇಲೆ ಇರುವ ಬ್ಯಾಕ್ಟೀರಿಯಾಗಳು ಹಣ್ಣುಗಳು, ತರಕಾರಿಗಳಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ಆರೋಗ್ಯ ಸಮಸ್ಯೆಗಳನ್ನು ಉಂಟಾಗುವ ಸಾಧ್ಯತೆಯು ಹೆಚ್ಚಿದೆ.

ಮೇಲಿನ ಶೆಲ್ಫ್‌ನಲ್ಲಿ ಏನಿಡಬೇಕು?: ಸಾಮಾನ್ಯವಾಗಿ ಫ್ರಿಡ್ಜ್​​​​​​​​ನ ಮೇಲಿನ ಕಪಾಟುಗಳು ಸ್ವಲ್ಪ ಬೆಚ್ಚಗಿರುತ್ತದೆ. ಹಾಗಾಗಿ ತಾಜಾ ಉತ್ಪನ್ನಗಳನ್ನು ಅಲ್ಲಿ ಇಡಬೇಡಿ. ಮೊಟ್ಟೆಗಳು, ಪ್ಯಾಕ್ ಮಾಡಿದ ಜ್ಯೂಸ್‌ಗಳು, ಸಾಸ್‌ಗಳು, ಶುಂಠಿ - ಬೆಳ್ಳುಳ್ಳಿ ಪೇಸ್ಟ್ ಇತ್ಯಾದಿಗಳನ್ನು ಮೇಲಿನ ಶೆಲ್ಫ್‌ನಲ್ಲಿ ಜೋಡಿಸಿ ಇಟ್ಟರೆ ತುಂಬಾ ಒಳ್ಳೆಯದು.

ಮಧ್ಯದ ಶೆಲ್ಫ್​:ಮಧ್ಯದ ಶೆಲ್ಫ್​ನಲ್ಲಿ ಹಾಲು ಮತ್ತು ಹಾಲಿನ ಪದಾರ್ಥಗಳನ್ನು ಇಡಿ. ಅಲ್ಲದೇ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ಪುದೀನಾ ಸೇರಿದಂತೆ ಇತರ ಸೊಪ್ಪುಗಳನ್ನು ಕತ್ತರಿಸಿ ಟಿಶ್ಯೂ ಪೇಪರ್​ನೊಂದಿಗೆ ಗಾಳಿಯಾಡದ ಬಾಕ್ಸ್​ನಲ್ಲಿ ಸಂಗ್ರಹಿಸಿ ಇಡಿ.

ಕೆಳಗಿನ ಶೆಲ್ಫ್​:ಫ್ರಿಡ್ಜ್​ನ ಕೆಳಭಾಗವು ತುಂಬಾ ತಂಪಾಗಿರುತ್ತದೆ. ಆದ್ದರಿಂದ, ಈ ವಿಭಾಗದಲ್ಲಿ, ವಿವಿಧ ಕವರ್​ಗಳಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಪ್ಯಾಕ್ ಮಾಡಿ ಮತ್ತು ಅವುಗಳನ್ನು ಪ್ಯಾಕ್ ಮಾಡಿ ಇಡುವುದರಿಂದ ಕೆಲವು ದಿನಗಳವರೆಗೆ ಫ್ರೆಶ್ ಆಗಿ ಇಡಲು ಸಾಧ್ಯವಾಗುತ್ತದೆ.

ಬಾಗಿಲಿನಲ್ಲಿರುವ ಸ್ಥಳ:ಬಾಗಿಲಿನ ಫ್ರಿಡ್ಜ್ ಭಾಗವು ಕೊಂಚ ಬೆಚ್ಚಗಿರುತ್ತದೆ. ಈ ಸ್ಥಳದಲ್ಲಿ ನೀವು ಇಲ್ಲಿ ಮಸಾಲೆಗಳನ್ನು ಸಂಗ್ರಹಿಸಿ ಇಟ್ಟರೆ ತುಂಬಾ ಒಳ್ಳೆಯದು.

ಇನ್ನಷ್ಟು ಸಲಹೆಗಳು ಇಲ್ಲಿವೆ ನೋಡಿ:ತರಕಾರಿಗಳು, ಹಣ್ಣುಗಳು, ಮಾಂಸವನ್ನು ಕತ್ತರಿಸಲು ಬಹುತೇಕ ಜನರು ಒಂದೇ ಚಾಕುಗಳನ್ನು ಬಳಸುತ್ತಾರೆ. ಅದರ ಬದಲು ವಿಭಿನ್ನ ಚಾಕುಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಈ ನಿಯಮವು ಅಡುಗೆ ಪಾತ್ರೆಗಳಿಗೂ ಅನ್ವಯಿಸುತ್ತದೆ. ಅಡುಗೆ ಕಾರ್ಯ ಪ್ರಾರಂಭಿಸುವ ಮೊದಲು ನಿಮ್ಮ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ತರಕಾರಿಗಳು ಹಾಗೂ ಗ್ರೀನ್ಸ್ ಅನ್ನು ಬೆಚ್ಚಗಿನ ಉಪ್ಪುಸಹಿತ ನೀರಿನಲ್ಲಿ ತೊಳೆದು ಬೇಯಿಸಬೇಕು ಒಳ್ಳೆಯದು.

ಇವುಗಳನ್ನೂ ಓದಿ:

ABOUT THE AUTHOR

...view details