Vitamin D Good Medicine for Hair Loss Prevention:ನೀವು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಅದಕ್ಕೆ ಅನುವಂಶಿಕತೆ, ನಿದ್ರೆಯ ಕೊರತೆ, ಒತ್ತಡ ಸೇರಿದಂತೆ ಇತರ ಕಾರಣಗಳಿರಬಹುದು. ಇದೆಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ದೇಹದಲ್ಲಿನ 'ವಿಟಮಿನ್ ಡಿ' ಕೊರತೆ ಕೂಡ ಕೂದಲಿನ ಸಮಸ್ಯೆಗೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞ ವೈದ್ಯರು. ದೈನಂದಿನ ಆಹಾರದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಅನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅಲ್ಲದೇ, ವಿಟಮಿನ್ ಡಿ ಸಮೃದ್ಧವಾಗಿರುವ ಕೆಲವು ಆಹಾರಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.
ನಾವು ಸೇವಿಸುವ ಆಹಾರವು ಒಟ್ಟಾರೆ ಆರೋಗ್ಯಕ್ಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಬಹಳ ಮುಖ್ಯವಾಗಿದೆ. ಅದರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಡಿ ಪಾತ್ರ ತುಂಬಾ ಮಹತ್ವದ್ದಾಗಿದೆ. ಕೂದಲಿನ ಸಮಸ್ಯೆ ತಡೆಯಲು ದೇಹದಲ್ಲಿ ವಿಟಮಿನ್ ಡಿ (Vitamin D) ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ವೈದ್ಯರು. ವಿಟಮಿನ್ ಡಿ ಕೊರತೆಯು ವಿಶೇಷವಾಗಿ ಕೂದಲು ಉದುರುವಿಕೆ ಮತ್ತು ಅಲೋಪೆಸಿಯಾಕ್ಕೆ ಕಾರಣವಾಗುತ್ತದೆ ಎಂದು ಅನೇಕ ಅಧ್ಯಯನಗಳಿಂದ (National Library of Medicine Report) ತಿಳಿದು ಬಂದಿದೆ. ಇದರಿಂದ ನಿಮ್ಮ ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು, ಕೂದಲು ಉದುರುವಿಕೆಯನ್ನು ನಿಯಂತ್ರಿಸಲು, ವಿಟಮಿನ್ ಡಿ ಇರುವ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.
"ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಸ್ತಟಿಕ್ ಡರ್ಮಟಾಲಜಿ"ನಲ್ಲಿ ಪ್ರಕಟವಾದ 2014ರ ಅಧ್ಯಯನವು ವಿಟಮಿನ್ ಡಿ ಪೂರೈಕೆಯು ಕೂದಲು ಉದುರುವ ಮಹಿಳೆಯರಲ್ಲಿ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ ಎಂದು ಕಂಡು ಹಿಡಿದಿದೆ. ಯುಕೆನ ನಾಟಿಂಗ್ಹ್ಯಾಮ್ ಯೂನಿವರ್ಸಿಟಿ ಹಾಸ್ಪಿಟಲ್ಸ್ ಎನ್ಹೆಚ್ಎಸ್ ಟ್ರಸ್ಟ್ನ ಪ್ರಮುಖ ಚರ್ಮರೋಗ ತಜ್ಞ ಡಾ. ಫಿಯೋನಾ ಜೇನ್ ಬಾತ್-ಹೆಕ್ಸ್ಟಾಲ್ (Fiona Jane Bath-Hextall) ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳು ಯಾವವು?:
ಮೀನು: ವಿಟಮಿನ್ ಡಿ ವಿಶೇಷವಾಗಿ ಸಾಲ್ಮನ್, ಟ್ಯೂನ್, ಮ್ಯಾಕೆರೆಲ್ ಮತ್ತು ಸಾರ್ಡೀನ್ಗಳಂತಹ ಮೀನುಗಳಲ್ಲಿ ಸಮೃದ್ಧವಾಗಿದೆ. ಅಲ್ಲದೆ, ಇವುಗಳಲ್ಲಿರುವ ಕ್ಯಾಲ್ಸಿಯಂ, ಪ್ರೊಟೀನ್, ಫಾಸ್ಪರಸ್ ಇತ್ಯಾದಿ ಇತರ ಪೋಷಕಾಂಶಗಳು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.
ಅಣಬೆಗಳು: ಇವುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಕೂಡ ಇದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೇ ಬಿ1, ಬಿ2, ಬಿ5, ತಾಮ್ರ ಸೇರಿದಂತೆ ಮುಂತಾದ ಪೋಷಕಾಂಶಗಳೂ ಅಣಬೆಯಲ್ಲಿ ಹೇರಳವಾಗಿವೆ. ಹಾಗಾಗಿ ಇವುಗಳನ್ನು ನಿತ್ಯ ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ.