Health Benefits of banana flower:ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಸರಿಯಾದ ಆಹಾರ ಪದ್ಧತಿಯಿಂದ ಮಧುಮೇಹ ರೋಗವನ್ನು ನಿಯಂತ್ರಿಸಬಹುದು. ವ್ಯಾಯಾಮ, ಆಹಾರದ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳನ್ನು ಸೇವಿಸುವಂತಹ ಸರಳ ವಿಧಾನಗಳ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಲು ಸಾಧ್ಯವಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಅನೇಕ ಪರಿಣಾಮಕಾರಿ ಆಯುರ್ವೇದದ ವಿಧಾನಗಳಿವೆ.
ಅದರಲ್ಲಿ ಬಾಳೆ ಮರ ಕೂಡ ಒಂದಾಗಿದೆ. ಅದರ ಹಣ್ಣುಗಳು ಪ್ರಯೋಜನಕಾರಿ ಮಾತ್ರವಲ್ಲ, ಅದರ ಎಲೆಗಳು, ಕಾಂಡ ಹಾಗೂ ಹೂವುಗಳನ್ನು ಸಹ ತುಂಬಾ ಸಹಾಯಕವೆಂದು ಪರಿಗಣಿಸಲಾಗುತ್ತದೆ. ಸಂಶೋಧನೆಯ ಪ್ರಕಾರ, ಅಂತಹ ಅಂಶಗಳು ಬಾಳೆ ಹೂವಿನಲ್ಲಿ ಕಂಡುಬರುತ್ತವೆ. ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ನೀವು ಬಾಳೆ ಹೂಗಳನ್ನು ಹಾಗೇ ಹಸಿಯಾಗಿ ತಿನ್ನಬಹುದು ಹಾಗೂ ಅದರಿಂದ ಅನೇಕ ರೀತಿಯ ಭಕ್ಷ್ಯಗಳನ್ನು ಸಹ ಸಿದ್ಧಪಡಿಸಬಹುದು. ಮಧುಮೇಹಕ್ಕೆ ಬಾಳೆ ಹೂವು ಏಕೆ ಪ್ರಯೋಜನಕಾರಿ? ಇದನ್ನು ಹೇಗೆ ಸೇವಿಸುಬೇಕು ಎಂಬುದನ್ನು ತಿಳಿಯೋಣ.
ಸಂಶೋಧನೆ ಏನು ತಿಳಿಸುತ್ತದೆ?: 2011ರಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬಾಳೆ ಹೂವುಗಳು ಪ್ರಯೋಜನಕಾರಿ ಎಂದು ತಿಳಿದಿದೆ. ಮಧುಮೇಹದಿಂದ ಬಳಲುತ್ತಿರುವ ಇಲಿಗಳ ಮೇಲೆ ಈ ಸಂಶೋಧನೆಯನ್ನು ನಡೆಸಲಾಯಿತು. ಅದರ ತೂಕವು ತುಂಬಾ ಹೆಚ್ಚಿತ್ತು ಹಾಗೂ ಅವುಗಳ ರಕ್ತ ಮತ್ತು ಮೂತ್ರದಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾಗಿದೆ. ಬಾಳೆ ಹೂವುಗಳ ಸೇವನೆಯಿಂದ ಈ ಇಲಿಗಳ ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ತಿಳಿದಿದೆ.
ಜೊತೆಗೆ 2013ರಲ್ಲಿ ನಡೆಸಿದ ಮತ್ತೊಂದು ಸಂಶೋಧನೆಯಲ್ಲಿ ಇದೇ ರೀತಿಯ ಫಲಿತಾಂಶಗಳು ಕಂಡುಬಂದಿವೆ. ಈ ಸಂಶೋಧನೆಯನ್ನು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರವು ಮಾಡಿದೆ. ಈ ಅಧ್ಯಯನದ ಪ್ರಕಾರ, ಬಾಳೆಹಣ್ಣಿನ ಹೂವುಗಳ ಸೇವನೆಯು ಮಧುಮೇಹ ರೋಗಿಗಳ ದೇಹದಲ್ಲಿ ನಿರ್ದಿಷ್ಟ ರೀತಿಯ ಪ್ರೋಟೀನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಸಂಶೋಧನಕರು ತಿಳಿಸಿದ್ದಾರೆ.
ಬಾಳೆ ಹೂವು ಮಧುಮೇಹಿಗಳಿಗೆ ಪ್ರಯೋಜನಕಾರಿ:ಬಾಳೆ ಹೂವುಗಳು ಮತ್ತು ಸ್ಯೂಡೋಸ್ಟೆಮ್ ಮಧುಮೇಹ ವಿರೋಧಿ ಮತ್ತು ಆ್ಯಂಟಿ-ಏಜ್ ಗುಣಲಕ್ಷಣಗಳನ್ನು ಹೊಂದಿವೆ. ಮತ್ತು ಮಧುಮೇಹ ರೋಗಿಗಳಿಗೆ ಆಹಾರ ಪೂರಕಗಳಾಗಿ ಪ್ರಯೋಜನಕಾರಿ ಎಂದು ಸಂಶೋಧನೆ ತಿಳಿಸುತ್ತದೆ. ಬಾಳೆ ಹೂವುಗಳು ಮತ್ತು ಸ್ಯೂಡೋಸ್ಟೆಮ್ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಆಹಾರದ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಅಂಶವನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಬಾಳೆ ಹೂವು ಶುಗರ್ ನಿರ್ವಹಣೆಯಲ್ಲಿ ಉಪಯುಕ್ತವೆಂದು ಪರಿಗಣಿಸಲಾಗಿದೆ.