ಕರ್ನಾಟಕ

karnataka

ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಳಪತಿ ವಿಜಯ್ ಸನ್ಮಾನ: ವಿಡಿಯೋ ನೋಡಿ - Vijay Education Awards 2024

By ETV Bharat Karnataka Team

Published : Jul 3, 2024, 10:51 AM IST

ತಮಿಳುನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಟ ವಿಜಯ್​ ಗೌರವ ಸಲ್ಲಿಸಿದ್ದಾರೆ.

Thalapathy Vijay
ನಟ ವಿಜಯ್​ (ETV Bharat)

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ತಮಿಳುನಾಡಿನ ಟಾಪ್​ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಿದ್ದಾರೆ. ಜೂನ್​ 28ರಂದು ಚೆನ್ನೈನಲ್ಲಿ ಮೊದಲ ಹಂತದ (Vijay Education Award 2024) ಗೌರವ ಕಾರ್ಯಕ್ರಮ ನಡೆದಿತ್ತು. ಇಂದು ಎರಡನೇ ಹಂತದ ಕಾರ್ಯಕ್ರಮ​ ನಡೆದಿದೆ. ಕಾರ್ಯಕ್ರಮದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

ಮೊದಲ ಹಂತದಲ್ಲಿ, ಜೂನ್ 28ರಂದು ನಡೆದ ಭವ್ಯ ಸಮಾರಂಭದಲ್ಲಿ ಕೆಲವು ಜಿಲ್ಲೆಗಳ 10ನೇ ಮತ್ತು 12ನೇ ಬೋರ್ಡ್ ಟಾಪರ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಪ್ರಶಸ್ತಿ, ಬಹುಮಾನ ವಿತರಿಸಿದ್ದರು.

ನಟ ವಿಜಯ್​ (ETV Bharat)

ಇಂದು (ಜುಲೈ 3) ರಂದು ಉಳಿದ ಜಿಲ್ಲೆಗಳ ಟಾಪರ್ಸ್​ ಭೇಟಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ಸಜ್ಜಾಗಿರುವ ಅದ್ಧೂರಿ ವೇದಿಕೆಯತ್ತ ಆಗಮಿಸಿದ ನಟ - ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅವರನ್ನು ಬಹಳ ಹತ್ತಿರದಿಂದ ಕಂಡ ಜನರು ಸಂತಸದ ಅಲೆಯಲ್ಲಿ ತೇಲಿದರು.

ನಟ ವಿಜಯ್ 2024ರ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಾಧನೆಗಳನ್ನು ಗೌರವಿಸುವ ಉದ್ದೇಶ ಹೊಂದಿದ್ದಾರೆ. ಫಲಿತಾಂಶ ಬಹಿರಂಗವಾದ ದಿನ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅಭಿನಂದನೆ ತಿಳಿಸಿದ್ದರು. ನಂತರ ರಾಜ್ಯದ ಪ್ರತೀ 234 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರನ್ನು ಗೌರವಿಸಲು ನಿರ್ಧರಿಸಿದ್ದರು.

ಸೂಪರ್ ಹಿಟ್​ ಸಿನಿಮಾಗಳು ಮಾತ್ರವಲ್ಲದೇ ಸಮಾಜ ಸೇವೆಗಳಿಂದಲೂ ಗುರುತಿಸಿಕೊಂಡಿರುವ ವಿಜಯ್, ಈ ಹಿಂದೆ ತಮಿಳುನಾಡಿನ 10 ಮತ್ತು 12ನೇ ತರಗತಿಯ ಬೋರ್ಡ್ ಟಾಪರ್ಸ್ ಅನ್ನು ಗೌರವಿಸುವುದಾಗಿ ತಿಳಿಸಿದ್ದರು. ಕೊಟ್ಟ ಮಾತಿನಂತೆ ಇತ್ತೀಚೆಗಷ್ಟೇ ಚೆನ್ನೈನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. ಇಂದು ಮತ್ತೊಂದು ಸಮಾರಂಭ ನಡೆದಿದ್ದು, ವಿದ್ಯಾರ್ಥಿಗಳನ್ನು ಭೇಟಿ ಮಾಡುತ್ತಿದ್ದಾರೆ.

ಇದನ್ನೂ ಓದಿ:ಡಿಎಂಕೆ ಸರ್ಕಾರದ ವಿರುದ್ಧ ದಳಪತಿ ವಿಜಯ್​ ವಾಗ್ದಾಳಿ.. ಯಾವ ಕಾರಣಕ್ಕೆ ಟೀಕೆ ಗೊತ್ತಾ? - Vijay Slams DMK govt

2023ರಲ್ಲಿ ಬೋರ್ಡ್ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದ ವಿಜಯ್ ಎಲ್ಲರ ಗಮನ ಸೆಳೆದಿದ್ದರು. ಈ ವರ್ಷದ ಅಭಿನಂದನಾ ಸಮಾರಂಭದ ಕುರಿತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸಮಾರಂಭ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ತಿಳಿಸಿತ್ತು. 21 ಜಿಲ್ಲೆಗಳ ವಿದ್ಯಾರ್ಥಿಗಳು ಜೂನ್ 28ರಂದು ಚೆನ್ನೈನ ರಾಮಚಂದ್ರ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿದ್ದರು. ಎರಡನೇ ಹಂತ, ಉಳಿದ 19 ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಇಂದು ಆಯೋಜಿಸಲಾಗಿದೆ.

ಇದನ್ನೂ ಓದಿ:ಶಾರುಖ್ ಖಾನ್‌ಗೆ​ ಪ್ರತಿಷ್ಠಿತ 'ಲೊಕಾರ್ನೋ ಪ್ರಶಸ್ತಿ' ಗರಿ - Locarno Award To Shah Rukh Khan

ABOUT THE AUTHOR

...view details