ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಾಲಿವುಡ್ನ ಜನಪ್ರಿಯ ತಾರಾ ದಂಪತಿ. ಇಬ್ಬರ ಸಿನಿ ಸಾಧನೆ ಉನ್ನತ ಮಟ್ಟದಲ್ಲಿದೆ. ಸೆಲೆಬ್ರಿಟಿ ಕಪಲ್ನ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಉತ್ಸುಕರಾಗಿರುತ್ತಾರೆ. ಅದರಂತೆ, ರಾಲಿಯಾ ಪುತ್ರಿ ರಾಹಾ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ಕ್ಯೂಟ್ ಬೇಬಿಯ ವಿಡಿಯೋಗಳಿಗಾಗಿಯೇ ಕಾದು ಕೂರುವವರ ಸಂಖ್ಯೆ ಕೂಡ ದೊಡ್ಡದಿದೆ. ಇಂದು ಶೇರ್ ಆಗಿರುವ ರಾಹಾಳ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಲಿಯಾ ಪುತ್ರಿ ರಾಹಾ ಸದ್ಯ ಬಾಲಿವುಡ್ನ ಅತ್ಯಂತ ಫೇಮಸ್ ಸ್ಟಾರ್ ಕಿಡ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪುಟ್ಟ ಕಂದಮ್ಮ ಪಾಪರಾಜಿಗಳಿಂದ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾ ಬಳಕೆದಾರರು, ರಾಲಿಯಾ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ. ಇಂದು ಮುಂಬೈನ ಬಾಂದ್ರಾದಲ್ಲಿ ಅಪ್ಪ-ಮಗಳ ಜೋಡಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದೆ. ಹೆಚ್ಚಿನ ಸಂಖ್ಯೆಯ ಇಂಟರ್ನೆಟ್ ಬಳಕೆದಾರರಿಗೆ ಈ ವಿಡಿಯೋ ಇಷ್ಟ ಆಗಿದ್ದು, ರಾಹಾ ಸಖತ್ ಕ್ಯೂಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ರಾಹಾ ಇಂದು ತಂದೆ ರಣ್ಬೀರ್ ಕಪೂರ್ ಜೊತೆ ಹೊರ ಬಂದಿದ್ದೇ ತಡ ಪಾಪರಾಜಿಗಳು ಸುಂದರ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಎಂದಿನಂತೆ ತನ್ನ ಕ್ಯೂಟ್ ಎಕ್ಸ್ಪ್ರೆಶನ್ ಮೂಲಕ ನೋಡುಗರ ಖುಷಿಗೆ ಕಾರಣವಾಗಿದ್ದಾಳೆ. ತಂದೆ ರಣ್ಬೀರ್ ಜೊತೆ ಹೆಜ್ಜೆ ಹಾಕಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾಳೆ. ಕೆಲ ಹೊತ್ತಿನ ನಂತರ, ರಣ್ಬೀರ್ ರಾಹಾಳನ್ನು ಹಿಡಿದು ಮುದ್ದು ಮಾಡುತ್ತಿರುವಂತೆ ಕಂಡುಬಂದಿದೆ. ರಾಹಾಳ ಕ್ಯೂಟ್ ವಿಡಿಯೋವನ್ನು ಸೆಲೆಬ್ರಿಟಿ ಫೋಟೋಗ್ರಾಫರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.