ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್ಪತಿ 16'ರ ಲೇಟೆಸ್ಟ್ ಎಪಿಸೋಡ್ನಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಕುಟುಂಬದ ಪ್ರೇಮ ವಿವಾಹಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗುಜರಾತ್ ವಡೋದರದ ಸಾಫ್ಟ್‌ವೇರ್ ಡೆವಲಪರ್ ಆಗಿರುವ 'ಕೌನ್ ಬನೇಗಾ ಕರೋಡ್ಪತಿ 16'ರ ಸ್ಪರ್ಧಿ ಅಶುತೋಷ್ ಸಿಂಗ್ ಅವರು ತಮ್ಮ ಪ್ರೇಮ ವಿವಾಹದ ಬಗ್ಗೆ ಮಾತನಾಡಿದರು. ಲವ್ ಮ್ಯಾರೇಜ್ ಹಿನ್ನೆಲೆಯಲ್ಲಿ ಪೋಷಕರು 5 ವರ್ಷಗಳಿಂದ ತನ್ನೊಂದಿಗೆ ಮಾತನಾಡಿಲ್ಲ ಎಂದು ಸ್ಪರ್ಧಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಈ ಸಂಭಾಷಣೆ ಪ್ರಾರಂಭವಾಯಿತು.
ಇಂದಿನ ಸಂಚಿಕೆಯನ್ನು ವೀಕ್ಷಿಸಿದ ನಂತರ ನಿಮ್ಮ ಪೋಷಕರು ನಿಮ್ಮೊಂದಿಗೆ ಮತ್ತೆ ಮಾತನಾಡುತ್ತಾರೆ. ನೀವು ಹಂಬಲಿಸುತ್ತಿರುವ ಆ ಕ್ಷಣವನ್ನು ನೀವು ಅನುಭವಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅಮಿತಾಭ್ ತಿಳಿಸಿದರು. ನಂತರ ಅವರು ತಮ್ಮ ಕುಟುಂಬದ ಪ್ರೇಮ ವಿವಾಹಗಳ ಬಗ್ಗೆ ಹಂಚಿಕೊಂಡರು. ಜೊತೆಗೆ, ಸಾಮಾಜಿಕ ಅಡೆತಡೆಗಳನ್ನು ಹೇಗೆ ಎದುರಿಸಿದರೆಂಬುದನ್ನು ತಿಳಿಸಿದರು.
"ನಾವು ಉತ್ತರ ಪ್ರದೇಶದವರು. ಆದ್ರೆ ನಾವು ಬಂಗಾಳಕ್ಕೆ ಹೋದೆವು. ನಮ್ಮ ಸಹೋದರ ಸಿಂಧಿ ಕುಟುಂಬದವರನ್ನು ಮದುವೆಯಾದರು. ಮಗಳು ಪಂಜಾಬಿ ಕುಟುಂಬದವರನ್ನು ವಿವಾಹವಾದ್ರು. ನನ್ನ ಮಗ ನಿಮಗೆ ಗೊತ್ತಿರುವುದೇ....ಮಂಗಳೂರು'' ಎಂದು ತಿಳಿಸಿದರು.
"ದೇಶ್ ಕೆ ಹರ್ ಕೋನೇ ಸೆ ಬ್ಯಾಹ್ ಕರ್ ಕೆ ಲಾಯೆ ಹೈ ಸಬ್ಕೋ" (ನಾವು ದೇಶದ ಪ್ರತೀ ಭಾಗದಿಂದಲೂ ನಮ್ಮ ಕುಟುಂಬ ಸದಸ್ಯರನ್ನು ಕರೆತಂದಿದ್ದೇವೆ) ಎಂದರು. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ವದಂತಿಗಳು ಹರಿದಾಡುತ್ತಿರುವ ಈ ಹೊತ್ತಲ್ಲಿ ಬಿಗ್ ಬಿ ಈ ಹೇಳಿಕೆ ನೀಡಿದ್ದಾರೆ.
ಕಳೆದ ಒಂದಿಷ್ಟು ಸಮಯದಿಂದ ಐಶ್ ಅಭಿ ಡಿವೋರ್ಸ್ ರೂಮರ್ಸ್ ಕೇಳಿಬರುತ್ತಿದೆ. ಆದ್ರೆ ಈ ತಾರಾದಂಪತಿ ಮಾತ್ರ ವದಂತಿಗಳನ್ನುದ್ದೇಶಿಸಿ ಮಾತನಾಡುವ ರಿಸ್ಕ್ ತೆಗೆದುಕೊಂಡಿಲ್ಲ. ರೂಮರ್ಸ್ಗಿವರು ಡೋಂಟ್ ಕೇರ್. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಅದ್ಧೂರಿ ವಿವಾಹ ಸಮಾರಂಭಕ್ಕೆ ಅಭಿಷೇಕ್ ಐಶ್ವರ್ಯಾ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ ನಂತರ ಊಹಾಪೋಹಗಳು ಉಲ್ಭಣಗೊಂಡವು. ವದಂತಿಗಳ ನಡುವೆಯೂ ಇಬ್ಬರೂ ಈ ವಿಷಯದಲ್ಲಿ 'ಘನತೆಯ ಮೌನ' ವಹಿಸಿದ್ದಾರೆ.
ಇದನ್ನೂ ಓದಿ:'ಬೆಂಗಳೂರಂದ್ರೆ ನನಗಿಷ್ಟ, ಅವಕಾಶ ಸಿಕ್ಕಿದ್ರೆ ಕನ್ನಡ ಸಿನಿಮಾ ಮಾಡುವ ಇಚ್ಛೆಯಿದೆ': ಸನ್ನಿ ಲಿಯೋನ್
ಇತ್ತೀಚೆಗೆ, ದಂಪತಿ ಸಮಾರಂಭವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೋ ಮೂಲಕ ಇಲ್ಲಸಲ್ಲದ ವದಂತಿಗಳಿಗೆ ಪರೋಕ್ಷವಾಗಿ ಫುಲ್ಸ್ಟಾಪ್ ಇಟ್ಟಿದ್ದಾರೆ. ನಿರ್ಮಾಪಕರಾದ ಅನು ರಂಜನ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದು, ಟ್ರೋಲಿಗರೇ ಟ್ರೋಲ್ ಆದ ಪರಿಸ್ಥಿತಿ ಅದಾಗಿತ್ತು. ಪಾರ್ಟಿ ಫೋಟೋಗಳು ಇಂಟರ್ನೆಟ್ನಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಖಾಸಗಿತನಕ್ಕೆ ಆದ್ಯತೆ ಕೊಡುವ ಈ ಜೋಡಿ ತಮ್ಮ ವೈಯಕ್ತಿಕ ಫೋಟೋಗಳನ್ನು ಹೆಚ್ಚಾಗಿ ಹಂಚಿಕೊಳ್ಳೋದಿಲ್ಲ. ಆದ್ರೆ ಅನು ರಂಜನ್ ಶೇರ್ ಮಾಡಿದ ಫೋಟೋ ಮಾತ್ರ ಸಖತ್ ಸದ್ದು ಮಾಡಿತ್ತು.
ಇದನ್ನೂ ಓದಿ:ಗೂಗಲ್ನಲ್ಲಿ ಹೆಚ್ಚು ಸರ್ಚ್ ಆಯ್ತು ಕನ್ನಡದ ಪ್ರಶಾಂತ್ ನೀಲ್ ಸಿನಿಮಾ: ಟಾಪ್ 10 ಟ್ರೆಂಡಿಂಗ್ ಫಿಲ್ಮ್ಸ್ ಪಟ್ಟಿ ಹೀಗಿದೆ
ಐಶ್ವರ್ಯಾ ಮತ್ತು ಅಭಿಷೇಕ್ 2007ರಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದರು. ಮದುವೆಯಾದ 4 ವರ್ಷಗಳ ನಂತರ 2011ರಲ್ಲಿ ದಂಪತಿ ಹೆಣ್ಣು ಮಗುವನ್ನು ಬರಮಾಡಿಕೊಂಡರು. ಪುತ್ರಿ ಆರಾಧ್ಯ ಅವರೀಗ ಹೆಚ್ಚಾಗಿ ಐಶ್ ಜೊತೆ ಕಾಣಿಸಿಕೊಳ್ಳುತ್ತಾರೆ. ಹೆಚ್ಚಾಗಿ ಪ್ರತೀ ಈವೆಂಟ್ನಲ್ಲೂ ತಾಯಿಗೆ ಬೆಂಬಲ ಕೊಡುವ ಮೂಲಕ ಆರಾಧ್ಯ, ಅಪಾರ ಸಂಖ್ಯೆಯ ಅಭಿಮಾನಿಗಳ ಗಮನ ಸೆಳೆದಿದ್ದಾರೆ.