ಹೈದರಾಬಾದ್: ಇಂದಿನ ಆಧುನಿಕ ಜಗತ್ತಿನಲ್ಲಿ ವೃತ್ತಿಯಲ್ಲಿ ಯಶಸ್ಸುಗಳಿಸಲು ಮಾತೃ ಭಾಷೆಯೊಂದೇ ಸಾಕಾಗುವುದಿಲ್ಲ. ಹೊಸ ಭಾಷೆಗಳು ಅನೇಕ ಅವಕಾಶಗಳನ್ನು ಅಷ್ಟೇ ನೀಡದೇ ವಿವಿಧ ಸಂಸ್ಕೃತಿ ಮತ್ತು ಕೆಲಸದ ಸ್ಥಳಗಳಲ್ಲಿ ಸುಲಭವಾಗಿ ನಿಮ್ಮನ್ನು ಬೆರೆಯುವಮತೆ ಮಾಡುತ್ತವೆ. ಹಾಗಾದ್ರೆ ಹೊಸ ಭಾಷೆಯೊಂದನ್ನು ಕಲಿಯುವುದು ಹೇಗೆ, ಅದರಲ್ಲಿ ಭಾಷೆ ಹಿಡಿತವನ್ನು ಸುಲಲಿತವಾಗಿ ಸಾಧಿಸುವುದು ಯಾವ ರೀತಿ ಎಂದು ಯೋಚಿಸುತ್ತಿದ್ದರೆ, ಇಲ್ಲಿ ಕೆಲವು ಟಿಪ್ಸ್ ಇವೆ.
ಸಣ್ಣ ಗುರಿ ನಿರ್ಮಿಸಿ: ಆರಂಭದಲ್ಲಿ ಭಾಷೆ ಹಿನ್ನಡೆ ಅನುಭವಿಸುವುದು ಸಹಜ, ಹಾಗೆಂದು ಕುಗ್ಗಬೇಡಿ. ಸಣ್ಣ ಅಕ್ಷರ, ಪದ ಮತ್ತು ವಾಕ್ಯಗಳನ್ನು ಕಲಿಯುವ, ನಿರ್ವಹಿಸುವ ಸಣ್ಣ ಗುರಿ ಹಾಕಿಕೊಳ್ಳಿ. ಈ ಸಣ್ಣ ಸಣ್ಣ ಮೈಲಿಗಲ್ಲುಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ, ನಿಮ್ಮನ್ನು ಉತ್ತೇಜಿಸುತ್ತವೆ.
ಮಾತನಾಡುವ ಅಭ್ಯಾಸ: ನೀವು ಕಲಿತ ಭಾಷೆಯನ್ನು ಮಾತನಾಡುವುದರ ಕಡೆ ಗಮ ನೀಡಿ. ಸ್ಥಳೀಯ ಭಾಷಿಕರೊಂದಿಗೆ ನೀವು ಸಂಕೋಚ ಬಿಟ್ಟು ಮಾತನಾಡಿ. ಈ ವೇಳೆ ತಪ್ಪಾದರೂ ಸರಿ, ಅದು ಕಲಿಕೆಯ ಪ್ರಗತಿಯ ಹಂತ ಎಂದು ತಿಳಿಯಿರಿ.
ತೆರೆದುಕೊಳ್ಳಿ: ಭಾಷೆ ಕಲಿಕೆಯಲ್ಲಿ ನೆರವಾಗುವುದು ಸಿನಿಮಾ ನೋಡುವುದು ಮತ್ತು ಸಂಗೀತ ಕೇಳುವ ಅಭ್ಯಾಸ ರೂಢಿಸಿಕೊಳ್ಳಿ. ಸುದ್ದಿ ಪತ್ರಿಕೆ ಅಥವಾ ಟಿವಿಗಳು ನಿಮಗೆ ಹೊಸ ಶಬ್ಧ ಕಲಿಸುವಲ್ಲಿ ಸಹಾಯ ಮಾಡುತ್ತವೆ. ಹಾಗೇ ಶಬ್ದಕೋಶದ ಸಹಾಯ ಪಡೆಯುವುದನ್ನು ಮರೆಯಬೇಡಿ.
ಭಾಷೆ ಬಳಕೆ ವಿಸ್ತರಿಸಿ: ಪ್ರತಿನಿತ್ಯ ಒಂದು ಹೊಸ ಭಾಷೆ, ವಾಕ್ಯವನ್ನು ಕಲಿಯುವ ನಿರ್ಧಾರ ಮಾಡಿ. ಇದು ನಿಮ್ಮ ಶಬ್ದ ಜ್ಞಾನದ ಜೊತೆಗೆ ಭಾಷೆ ಕಲಿಯುವ ಆಸಕ್ತಿ ಮತ್ತು ಉತ್ಸಾಹ ಹೆಚ್ಚಿಸುತ್ತದೆ.
ಬರೆಯುವ ಅಭ್ಯಾಸ: ಬರವಣಿಗೆಯು ಕಲಿಕೆಯ ಪ್ರಮುಖ ಹಂತ ಚಟುವಟಿಕೆ ಆಗಿದೆ. ಈ ಹಿನ್ನೆಲೆ ಅವುಗಳನ್ನು ಪದಗಳಲ್ಲಿ ವ್ಯಕ್ತಪಡಿಸಿ, ಶಬ್ದಗಳ ವೃದ್ಧಿ, ವಾಕ್ಯ ರಚನೆ ಮತ್ತು ಒಟ್ಟಾರೆ ಭಾಷೆ ಸುಲಲಿತದ ಅಭ್ಯಾಸ ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ.
ತಂತ್ರಜ್ಞಾನದ ಸಹಾಯ: ಹೊಸ ಭಾಷೆ ಕಲಿಯುವ ಆ್ಯಪ್ಗಳನ್ನು ಡೌನ್ ಲೋಡ್ ಮಾಡಿ, ಅದರಿಂದ ಪಾಠ ಕಲಿಯಬಹುದು. ಇದು ನಿಮ್ಮ ಅಭ್ಯಾಸ ಮತ್ತು ಕೌಶಲ್ಯ ವೃದ್ಧಿಸಲು ಸಹಾಯ ಮಾಡುತ್ತದೆ.