SBIF Asha Scholarship: ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೆ, ಅನೇಕ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಾರೆ. ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯಬೇಕೆಂಬ ಹಂಬಲವಿದ್ದರೂ ಬಡತನ ಅವರಿಗೆ ಅಡ್ಡಿಯಾಗುತ್ತೆ. ಅಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಲು SBI ಫೌಂಡೇಶನ್ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತವನ್ನು ನೀಡಲು ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮದ 3ನೇ ಆವೃತ್ತಿಯನ್ನು ಪ್ರಾರಂಭಿಸಿದೆ. ದೇಶಾದ್ಯಂತ ಹಿಂದುಳಿದ ಸಮುದಾಯಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ 6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು? ಅರ್ಹತೆಗಳೇನು? ಅಗತ್ಯವಿರುವ ದಾಖಲೆಗಳು? ಕೊನೆಯ ದಿನಾಂಕ ಯಾವಾಗ? ಅನ್ನೋದರ ಮಾಹಿತಿಯನ್ನು ಈ ಸ್ಟೋರಿಯಲ್ಲಿ ತಿಳಿಯೋಣ..
ಅರ್ಹತೆಗಳೇನು:
- ಭಾರತೀಯರು ಮಾತ್ರ ಅರ್ಜಿ ಸಲ್ಲಿಸಬೇಕು.
- ಅರ್ಜಿದಾರರು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2024-25) 6 ರಿಂದ 12 ನೇ ತರಗತಿಯ ನಡುವೆ ಇರಬೇಕು.
- ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಪಡೆದಿರಬೇಕು.
- ಒಟ್ಟು ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷ ಮೀರಬಾರದು.
- 50 ರಷ್ಟು ಸ್ಲಾಟ್‌ಗಳನ್ನು ಮಹಿಳೆಯರಿಗೆ ನಿಗದಿಪಡಿಸಲಾಗಿದೆ.
- SS ಮತ್ತು ST ಅರ್ಜಿಗಳಿಗೆ ಆದ್ಯತೆ ನೀಡಲಾಗುವುದು.
- ಆಯ್ಕೆಯಾದ ಪ್ರತಿ ವಿದ್ಯಾರ್ಥಿಗೆ ರೂ. 15 ಸಾವಿರ ಶಿಷ್ಯವೇತನ ದೊರೆಯಲಿದೆ.
ಅಗತ್ಯವಿರುವ ದಾಖಲೆಗಳು:
- ಕಳೆದ ಶೈಕ್ಷಣಿಕ ವರ್ಷದ ಅಂಕ ಪಟ್ಟಿ
- ಸರ್ಕಾರಿ ID ಪುರಾವೆ (ಆಧಾರ್)
- ಪ್ರಸಕ್ತ ವರ್ಷದ ಶಿಕ್ಷಣ ಶುಲ್ಕ ರಶೀದಿ
- ಪ್ರಸ್ತುತ ಪ್ರವೇಶ ದಾಖಲೆ ರಶೀದಿ
- ಬ್ಯಾಂಕ್ ಖಾತೆ ವಿವರಗಳು (ಪೋಷಕರ ಬ್ಯಾಂಕ್ ಅಕೌಂಟ್)
- ಆದಾಯ ಪ್ರಮಾಣಪತ್ರ
- ಪಾಸ್ಪೋರ್ಟ್ ಫೋಟೋ
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)