ಕರ್ನಾಟಕ

karnataka

ETV Bharat / education-and-career

4,660 ಸಬ್​ ಇನ್ಸ್​​ಪೆಕ್ಟರ್​​, ಕಾನ್ಸ್​ಟೇಬಲ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ - Railway Protection force job - RAILWAY PROTECTION FORCE JOB

10ನೇ ತರಗತಿ ಮತ್ತು ಪದವಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

Railway Protection force Recruitment for 4660 Sub inspector and constable
Railway Protection force Recruitment for 4660 Sub inspector and constable

By ETV Bharat Karnataka Team

Published : Apr 10, 2024, 1:21 PM IST

ಬೆಂಗಳೂರು: ರೈಲ್ವೆ ರಕ್ಷಣಾ ದಳದಿಂದ ಸಬ್​ ಇನ್ಸ್​​ಪೆಕ್ಟರ್​​ ಮತ್ತು ಕಾನ್ಸ್​​ಟೇಬಲ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 4,660 ಹುದ್ದೆಗಳ ನೇಮಕಾತಿ ನಡೆಯಲಿದ್ದು, ದೇಶಾದ್ಯಂತ ಎಸ್​ಎಸ್​ಎಲ್​ಸಿ ಮತ್ತು ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಅಧಿಸೂಚನೆ

ಹುದ್ದೆ ವಿವರ: 4,660 ಹುದ್ದೆಗಳ ಭರ್ತಿಗೆ ಮಾಹಿತಿ.

ಸಬ್​ ಇನ್ಸ್​​ಪೆಕ್ಟರ್​​ - 452

ಕಾನ್ಸ್​​ಟೇಬಲ್​ - 4208

ವಿದ್ಯಾರ್ಹತೆ:ಸಬ್​ ಇನ್ಸ್​ಪೆಕ್ಟರ್​​ ಹುದ್ದೆಗೆ ಅಭ್ಯರ್ಥಿಗಳು ಪದವಿ ಮತ್ತು ಕಾನ್ಸ್​​ಟೇಬಲ್​ ಹುದ್ದೆಗೆ 10ನೇ ತರಗತಿ ಪೂರ್ಣಗೊಂಡಿರಬೇಕು.

ವಯೋಮಿತಿ: ಸಬ್​ ಇನ್ಸ್​ಪೆಕ್ಟರ್​​ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ 20 ರಿಂದ ಗರಿಷ್ಠ 28 ವರ್ಷ. ಕಾನ್ಸ್​​ಟೇಬಲ್​ ಹುದ್ದೆಗೆ ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ವಯೋಮಿತಿ ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ ಮತ್ತು ನಿವೃತ್ತ ಸೇವಾದಾರರು, ಮಹಿಳೆಯರು, ಇಬಿಸಿ ಅಭ್ಯರ್ಥಿಗಳಿಗೆ 250 ರೂ ಮತ್ತು ಇತರ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್​ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲಾತಿ ಪರೀಕ್ಷೆ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗಿದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಏಪ್ರಿಲ್​ 15ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಮೇ 14 ಆಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indianrailways.gov.inಇಲ್ಲಿಗೆ ಭೇಟಿ ನೀಡಬಹುದಾಗಿದೆ. ಕರ್ನಾಟಕದ ಅಭ್ಯರ್ಥಿಗಳು rrbbnc.gov.in ಇಲ್ಲಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ರೈಲ್ವೆ ಅಪ್ರೆಂಟಿಸ್​ ಹುದ್ದೆ:ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ 733 ಅಪ್ರೆಂಟಿಸ್​ ಹುದ್ದೆಗಳಿಗೆ 10ನೇ ತರಗತಿ, ಪಿಯುಸಿ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವರ್ಷದ ಅಪ್ರೆಂಟಿಸ್​ ಹುದ್ದೆಗೆ ಗರಿಷ್ಠ 24 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನ ಏಪ್ರಿಲ್​ 12 ಆಗಿದೆ.

ಅಭ್ಯರ್ಥಿಗಳು apprenticeshipindia.gov.in. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ secr.indianrailways.gov.in ಇಲ್ಲಿ ಭೇಟಿ ನೀಡಿ.

ಇದನ್ನೂ ಓದಿ: ಇಂಡಿಯನ್​ ಮರ್ಚೆಂಟ್​ ನೇವಿಯಲ್ಲಿ 4,000 ಹುದ್ದೆಗಳು: ಅರ್ಹತೆ, ಅರ್ಜಿ ಸಲ್ಲಿಕೆಯ ವಿವರ

ABOUT THE AUTHOR

...view details