ಕರ್ನಾಟಕ

karnataka

ETV Bharat / education-and-career

ವೈದ್ಯಕೀಯ ಕೋರ್ಸ್​​ಗಳ ನೋಂದಣಿಗೆ ಕೆಇಎ ಅಂತಿಮ ಅವಕಾಶ - Medical Course Registration

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ಕೋರ್ಸ್​​ಗಳಿಗೆ ಅರ್ಹ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಅಂತಿಮ ಅವಕಾಶ ನೀಡಲಾಗಿದೆ.

kea
ಕೆಇಎ (ETV Bharat)

By ETV Bharat Karnataka Team

Published : Aug 17, 2024, 6:20 AM IST

ಬೆಂಗಳೂರು:ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ಕೋರ್ಸ್​​ಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಳ್ಳಲು ಮತ್ತು ಯುಜಿ ನೀಟ್‌ ರೋಲ್‌ ನಂಬರ್​​​ನ್ನು ನಮೂದಿಸಲು ಆಗಸ್ಟ್​​ 16ರ ಬೆಳಗ್ಗೆ 6 ಗಂಟೆಯಿಂದ ಆ.19ರ ಬೆಳಗ್ಗೆ 10 ಗಂಟೆವರೆಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇದು ಅಂತಿಮ ಅವಕಾಶವಾಗಿದೆ. ಅರ್ಹರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಇದುವರೆಗೂ ನೀಡಿದ್ದ ಅವಕಾಶಗಳನ್ನು ಬಳಸಿಕೊಳ್ಳದೆ ಇರುವವರು ಆನ್​ಲೈನ್‌ ಮೂಲಕ ನೋಂದಾಯಿಸಿ, ಶುಲ್ಕವನ್ನು ಪಾವತಿಸಬಹುದು. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ಜಾಲತಾಣವನ್ನು ನೋಡಬಹುದು ಎಂದು ಪ್ರಕಟಣೆ ಮೂಲಕ ಕೆಇಎ ಹೇಳಿದೆ.

ಇದೇ ರೀತಿಯಲ್ಲಿ ಈಗಾಗಲೇ ಎರಡು ಹಂತಗಳಲ್ಲಿ ನಡೆದಿರುವ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದಿದ್ದ ಎನ್‌ಆರ್‌ಐ/ವಿದೇಶಿ ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ಸೆಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜಿನ ಕೆಟಗರಿ-2ರಿಂದ ಕೆಟಗರಿ-8ರ ವ್ಯಾಪ್ತಿಯ ವಿದ್ಯಾರ್ಥಿಗಳು ಆ.19ರ ಬೆಳಿಗ್ಗೆ 11 ಗಂಟೆಗೆ ಮೂಲ ಪ್ರಮಾಣಪತ್ರಗಳೊಂದಿಗೆ ಪ್ರಾಧಿಕಾರದ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ:ಉಡುಪಿ: ಆರೋಗ್ಯ ನಿಗಾ ಸಹಾಯಕರ ತರಬೇತಿಗೆ ಅರ್ಜಿ ಆಹ್ವಾನ - Home Nursing Training

ABOUT THE AUTHOR

...view details