ಕೋಟಾ: ಜೆಇಇ ಮೇನ್ಸ್ ಮಾದರಿ ಪ್ರಶ್ನೆಗಳಲ್ಲಿ ಮುಂದಿನ ವರ್ಷದಿಂದ ಅಂದರೆ 2025ರಿಂದ ಹಲವು ಬದಲಾವಣೆ ತರಲು ಎನ್ಟಿಎ ಮುಂದಾಗಿದೆ. ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಪರಿಚಯಿಸಲಾಗಿದ್ದ ಐಚ್ಛಿಕ ಆಯ್ಕೆ ಪ್ರಶ್ನೆಗಳ ಮಾದರಿಯಲ್ಲಿ ಈ ಬದಲಾವಣೆ ತರಲಾಗಿದೆ. ಇದೀಗ ಈ ಐಚ್ಛಿಕ ಆಯ್ಕೆ ಪ್ರಶ್ನೆಗಳನ್ನು ಕೈ ಬಿಟ್ಟು ಸಾಂಕ್ರಾಮಿಕಕ್ಕೂ ಪೂರ್ವದ ಮಾದರಿ ರೀತಿಯಲ್ಲಿ ಅಭ್ಯರ್ಥಿಗಳು ಸೆಕ್ಷನ್ ಬಿ ಅಡಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ಎನ್ಟಿಎ, ಕೋವಿಡ್ 19 ಸಾಂಕ್ರಾಮಿಕದ ವೇಳೆ, ಅಂದರೆ 2021 ರಂದು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಸೆಕ್ಷನ್ ಬಿಯಲ್ಲಿ ನೀಡಲಾಗಿದ್ದ 10 ಪ್ರಶ್ನೆಗಳಿಗೆ ಯಾವುದಾದರೂ ಐದಕ್ಕೆ ಮಾತ್ರ ಉತ್ತರಿಸಲು ಅವಕಾಶ ನೀಡಲಾಗಿತ್ತು. ಇದೀಗ ಈ ಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ.
ಕೋವಿಡ್ ಹಿನ್ನೆಲೆ ಬದಲಾವಣೆ ಮಾಡಲಾಗಿತ್ತು;ಕೋವಿಡ್ ಸಮಯದಲ್ಲಿ ಎದುರಾದ ಸವಾಲುಗಳಿಂದಾಗಿ ಪರೀಕ್ಷೆಯಲ್ಲಿನ ಈ ವಿನ್ಯಾಸದ ಬದಲಾವಣೆ ಕೇವಲ ತಾತ್ಕಾಲಿಕವಾಗಿದ್ದು, 2024ರವರೆಗೆ ಈ ಅವಕಾಶ ನೀಡಲಾಗಿತ್ತು. ಅದರ ಅನುಸಾರ, ಪ್ರತಿ ಪ್ರಶ್ನಾ ಪತ್ರಿಕೆಯನ್ನು ಎರಡು ಭಾಗವಾಗಿ ವಿಭಾಗಿಸಲಾಗಿದ್ದು. ಸೆಕ್ಷನ್ ಎ ದಲ್ಲಿ 20 ಮತ್ತು ಸೆಕ್ಷನ್ ಬಿ ಯಲ್ಲಿ 10ರಲ್ಲಿ ಐದು ಪ್ರಶ್ನೆಗೆ ಉತ್ತರಿಸುವ ಆಯ್ಕೆಯನ್ನು ಎನ್ಟಿಎ ನೀಡಿತ್ತು.