ಕರ್ನಾಟಕ

karnataka

ETV Bharat / education-and-career

ಸಿ - ಡಾಕ್​ನಲ್ಲಿ 325 ಪ್ರಾಜೆಕ್ಟ್​​ ಇಂಜಿನಿಯರ್ ಹುದ್ದೆ; ಇಲ್ಲಿದೆ ಸಂಪೂರ್ಣ ವಿವರ

ಸಿ - ಡಾಕ್​ ಮತ್ತು ಎಂಆರ್​ಪಿಎಲ್​ನಲ್ಲಿ ಇರುವ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

C Dac and MRPL Job recruitment
C Dac and MRPL Job recruitment

By ETV Bharat Karnataka Team

Published : Feb 3, 2024, 1:31 PM IST

ಬೆಂಗಳೂರು: ಕೇಂದ್ರ ಸರ್ಕಾರದ ಸೆಂಟರ್​ ಫಾರ್​ ಡೆವಲ್ಮೆಂಟ್​ ಆಫ್​ ಅಡ್ವಾನ್ಸ್ಡ್​​ ಕಂಪ್ಯೂಟಿಂಗ್​ (ಸಿ-ಡಾಕ್​)ನಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಭಾರತಾದ್ಯಂತ ಈ ನೇಮಕಾತಿ ನಡೆಯಲಿದೆ. ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಒಟ್ಟು 325 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಸರ್ಕಾರದ ಸೆಂಟರ್​ ಫಾರ್​ ಡೆವಲ್ಮೆಂಟ್​ ಆಫ್​ ಅಡ್ವಾನ್ಸ್ಡ್​​ ಕಂಪ್ಯೂಟಿಂಗ್​ನಲ್ಲಿ ಪ್ರಾಜೆಕ್ಟ್​​ ಅಸೋಸಿಯೇಟ್​​, ಪ್ರಾಜೆಕ್ಟ್​​ ಇಂಜಿನಿಯರ್​, ಪ್ರಾಜೆಕ್ಟ್​ ಆಫೀಸರ್​, ಪ್ರಾಜೆಕ್ಟ್​ ಸಪೋರ್ಟ್​ ಸ್ಟಾಫ್​​, ಪ್ರಾಜೆಕ್ಟ್​​ ಟೆಕ್ನಿಶಿಷಯನ್, ಸೀನಿಯರ್​ ಪ್ರಾಜೆಕ್ಟ್​​ ಇಂಜಿನಿಯರ್​ ಹುದ್ದೆಗಳ ಭರ್ತಿ ಮಾಡಲಾಗುವುದು.

ವಿದ್ಯಾರ್ಹತೆ: ಪ್ರಾಜೆಕ್ಟ್​​ ಇಂಜಿನಿಯರ್​ ಹುದ್ದೆಗೆ ಅಭ್ಯರ್ಥಿಗಳು ಬಿಇ, ಬಿಟೆಕ್​, ಎಂಇ, ಎಂಟೆಕ್​ ಮತ್ತು ಪಿಎಚ್​ಡಿ ಪದವಿ ಹೊಂದಿರಬೇಕು. ಪ್ರಾಜೆಕ್ಟ್​​ ಆಫೀಸರ್​ ಹುದ್ದೆಗೆ ವಾಣಿಜ್ಯ ವಿಷಯದಲ್ಲಿ ಪದವಿ, ಎಂಬಿಎ ಪದವಿ ಹೊಂದಿರಬೇಕು. ಪ್ರಾಜೆಕ್ಟ್​​ ಟೆಕ್ನಿಶಿಷಯನ್​ ಹುದ್ದೆಗೆ ಡಿಪ್ಲೊಮಾ ಅಥವಾ ಸಿಎಯಲ್ಲಿ ಪದವಿ ಹೊಂದಿರಬೇಕು.

ವಯೋಮಿತಿ: ವಿವಿಧ ಹುದ್ದೆಗಳಿಗೆ ಅನುಸಾರವಾಗಿ ವಯೋಮಿತಿ ನಿಗದಿಸಲಾಗಿದ್ದು, ಅಭ್ಯರ್ಥಿಗಳು 30 ರಿಂದ 50 ವರ್ಷದ ವಯೋಮಾನ ಮೀರಿರಬಾರದು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ನಿಗದಿ ಮಾಡಿಲ್ಲ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅಭ್ಯರ್ಥಿಗಳು ಫೆಬ್ರವರಿ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 20 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳುcdac.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಎಂಆರ್​ಪಿಎಲ್​​ನಲ್ಲಿದೆ ಉದ್ಯೋಗ​: ಮಂಗಳೂರು ರಿಫೈನರಿ ಆ್ಯಂಡ್​ ಪೆಟ್ರೋಕೆಮಿಕಲ್ಸ್​​ ಲಿಮಿಟೆಡ್​​ನಲ್ಲಿ ಸಹಾಯಕ ಇಂಜಿನಿಯರ್​ ಮತ್ತು ಸಹಾಯಕ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 27 ಹುದ್ದೆಗಳ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ:ಕೆಮಿಕಲ್​ ಇಂಜಿನಿಯರಿಂಗ್​, ಮೆಕ್ಯಾನಿಕಲ್​ ಇಂಜಿನಿಯರಿಂಗ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​, ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಇ ಅಥವಾ ಬಿಎಸ್ಸಿ ಪದವೀಧರರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಗರಿಷ್ಠ 27 ವರ್ಷ ವಯೋಮಿತಿ ಹೊಂದಿರಬೇಕಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು 118 ರೂ ಅರ್ಜಿ ಶುಲ್ಕ ಪಾವತಿಸಬೇಕಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಜನವರಿ 12ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಫೆಬ್ರವರಿ 10 ಕಡೇಯ ದಿನಾಂಕ. ಸಂಪೂರ್ಣ ಮಾಹಿತಿಗೆ mrpl.co.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ರಕ್ಷಣಾ ಇಲಾಖೆಯಲ್ಲಿ ನೇಮಕಾತಿ; ಎಸ್​ಎಸ್​ಎಲ್​ಸಿ ಪಾಸಾದವರಿಗೆ ಅವಕಾಶ

ABOUT THE AUTHOR

...view details