ಬೆಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್ ಅರ್ಥ್ ಮೂವರ್ ಲಿಮಿಟೆಡ್ನಲ್ಲಿ (ಬಿಇಎಂಎಲ್) ಖಾಲಿ ಇರುವ ಸಹಾಯಕ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 26 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಂಸ್ಥೆಯು ಕೋಲಾರ ಗೋಲ್ಡ್ ಫೀಲ್ಡ್, ಬೆಂಗಳೂರು ಮತ್ತು ಮೈಸೂರು, ನವದೆಹಲಿಯ ಉತ್ಪಾದನಾ ಘಟಕಗಳಲ್ಲಿ ಭರ್ತಿ ಮಾಡಲಿದೆ.
ಹುದ್ದೆ ವಿವರ:
- ಚೀಫ್ ಜನರಲ್ ಮ್ಯಾನೇಜರ್ - 1
- ಡೆಪ್ಯೂಟಿ ಜನರಲ್ ಮ್ಯಾನೇಜರ್ - 4
- ಡೆಪ್ಯೂಟಿ ಜನರಲ್ ಮ್ಯಾನೇಜರ್ - 1
- ಸೀನಿಯರ್ ಮ್ಯಾನೇಜರ್ - 1
- ಅಸಿಸ್ಟಂಟ್ ಮ್ಯಾನೇಜರ್ (ಗ್ರೇಡ್ 3) - 2
- ಇಂಜಿನಿಯರಿಂಗ್ (ಗ್ರೇಡ್- 2) 3
- ಅಸಿಸ್ಟಂಟ್ ಮ್ಯಾನೇಜರ್ (ಗ್ರೇಡ್ 3) 8
- ಜೂನಿಯರ್ ಎಕ್ಸಿಕ್ಯೂಟಿವ್- ಎಚ್ ಆರ್ - 6
ವಿದ್ಯಾರ್ಹತೆ: ಅಭ್ಯರ್ಥಿಗಳು ಮೆಕಾನಿಕಲ್, ಎಲೆಕ್ಟ್ರಿಕಲ್, ಆಟೋಮೊಬೈಲ್ನಲ್ಲಿ ಬಿಇ, ಬಿಟೆಕ್ ಪದವಿ ಹಾಗೂ ಎಂಬಿಎ ಪದವಿಯನ್ನು ಪಡೆದಿರಬೇಕು
ವಯೋಮಿತಿ: ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವಯೋಮಿತಿ ಹೊಂದಿದ್ದು, ಗರಿಷ್ಠ ವಯೋಮಿತಿ 45
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ಲಭ್ಯವಾಗುವ ನಿಗದಿತ ಅರ್ಜಿ ಭರ್ತಿ ಮಾಡಿ, ಅದನ್ನು ಅಗತ್ಯ ಮಾಹಿತಿ, ದಾಖಲೆಯೊಂದಿಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪ, ಜಾ, ಪ. ಪಂ, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 500 ರೂ ಶುಲ್ಕ ನಿಗದಿಸಲಾಗಿದೆ.