ಕರ್ನಾಟಕ

karnataka

ETV Bharat / business

4ನೇ ತಲೆಮಾರಿನ ಹೊಸ ಮಾರುತಿ ಸ್ವಿಫ್ಟ್​ ಕಾರು ಬಿಡುಗಡೆ: ಬೆಲೆ 6.49 ಲಕ್ಷದಿಂದ ಆರಂಭ.. ಕಾರಿನ ವಿನ್ಯಾಸ ಹೇಗಿದೆ ಗೊತ್ತಾ? - MARUTI SUZUKI SWIFT - MARUTI SUZUKI SWIFT

ಮಾರುತಿ ಸುಜುಕಿ ತನ್ನ ಹೊಸ ಎಪಿಕ್ ನ್ಯೂ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ.

Maruti Suzuki launches 4th-gen Swift
Maruti Suzuki launches 4th-gen Swift ((image : ians))

By ETV Bharat Karnataka Team

Published : May 9, 2024, 6:37 PM IST

ನವದೆಹಲಿ: ದೇಶದ ಪ್ರಖ್ಯಾತ ಕಾರು ಕಂಪನಿ ಮಾರುತಿ ಸುಜುಕಿ ಗುರುವಾರ 4 ನೇ ತಲೆಮಾರಿನ ಎಪಿಕ್ ನ್ಯೂ ಸ್ವಿಫ್ಟ್ (4th generation Epic New Swift) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಸ್ವಿಫ್ಟ್​ ಕಾರು 6.49 ಲಕ್ಷ ರೂಪಾಯಿ ಎಕ್ಸ್​ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. ಈ ಕಾರು ಸಿಜ್ಲಿಂಗ್ ರೆಡ್, ಪರ್ಲ್ ಆರ್ಕಟಿಕ್ ವೈಟ್, ಮ್ಯಾಗ್ಮಾ ಗ್ರೇ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಜೊತೆಗೆ ಲಸ್ಟರ್ ಬ್ಲೂ ಮತ್ತು ನೋವೆಲ್ ಆರೆಂಜ್ ನಂತಹ ಡೈನಾಮಿಕ್ ವಿನ್ಯಾಸಕ್ಕೆ ಪೂರಕವಾದ ವ್ಯಾಪಕ ಶ್ರೇಣಿಯ ಬಣ್ಣಗಳಲ್ಲಿ ಲಭ್ಯವಿದೆ.

ಮಿಡ್ ನೈಟ್ ಬ್ಲ್ಯಾಕ್ ರೂಫ್​ನೊಂದಿಗೆ ಲಸ್ಟರ್ ಬ್ಲೂ, ಮಿಡ್ ನೈಟ್ ಬ್ಲ್ಯಾಕ್ ರೂಫ್​​ನೊಂದಿಗೆ ಸಿಜ್ಲಿಂಗ್ ರೆಡ್ ಮತ್ತು ಮಿಡ್ ನೈಟ್ ಬ್ಲ್ಯಾಕ್ ರೂಫ್​ನೊಂದಿಗೆ ಪರ್ಲ್ ಆರ್ಕಟಿಕ್ ವೈಟ್ ಎಂಬ ಮೂರು ಡ್ಯುಯಲ್ - ಟೋನ್ ಬಣ್ಣ ಆಯ್ಕೆಗಳು ಸಹ ಲಭ್ಯವಿವೆ ಎಂದು ಕಂಪನಿ ತಿಳಿಸಿದೆ.

ಹೊಸ ಕಾರಿನ ಬಗ್ಗೆ ಮಾತನಾಡಿದ ಮಾರುತಿ ಸುಜುಕಿ ಇಂಡಿಯಾದ ಎಂಡಿ ಮತ್ತು ಸಿಇಒ ಹಿಸಾಶಿ ಟಕುಚಿ, "ಸ್ವಿಫ್ಟ್ ಪ್ರಿಯರು ಮತ್ತು ಚಾಲನಾ ಉತ್ಸಾಹಿಗಳಿಗೆ ಕಾರು ಚಲನೆಯ ಸಂತೋಷವನ್ನು ಮರು ವ್ಯಾಖ್ಯಾನಿಸುವ ಮೂಲಕ ಕಂಪನಿಯ ಬಲವಾದ ಪರಂಪರೆಯನ್ನು ನಿರ್ಮಿಸುವುದು ಎಪಿಕ್ ನ್ಯೂ ಸ್ವಿಫ್ಟ್ ಬಿಡುಗಡೆಯ ನಮ್ಮ ದೃಷ್ಟಿಕೋನವಾಗಿದೆ" ಎಂದು ಹೇಳಿದರು.

ಹೊಸ ಕಾರು ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್, 22.86 ಸೆಂ.ಮೀ (9 ಇಂಚಿನ) ಸ್ಮಾರ್ಟ್ ಪ್ಲೇ ಪ್ರೊ + ಇನ್ಫೋಟೈನ್ ಮೆಂಟ್ ಸಿಸ್ಟಂ, ಫಾಸ್ಟ್ ಚಾರ್ಜಿಂಗ್ ಎ ಮತ್ತು ಸಿ ಟೈಪ್ ಯುಎಸ್ ಬಿ ಪೋರ್ಟ್​ಗಳು, ಹಿಂಭಾಗದ ಎಸಿ ವೆಂಟ್ ಗಳು, ಕ್ರೂಸ್ ಕಂಟ್ರೋಲ್, 60:40 ಹಿಂಭಾಗದ ಸ್ಪ್ಲಿಟ್ ಸೀಟುಗಳು ಮತ್ತು ಕೀಲೆಸ್ ಎಂಟ್ರಿಯನ್ನು ಹೊಂದಿದೆ.

"ಎಪಿಕ್ ನ್ಯೂ ಸ್ವಿಫ್ಟ್ ಅನ್ನು ಪರಿಚಯಿಸುವುದರೊಂದಿಗೆ ನಾವು ಶ್ರೀಮಂತ ಪರಂಪರೆ ನಿರ್ಮಿಸುತ್ತಿದ್ದೇವೆ ಮತ್ತು ಮಾನದಂಡವನ್ನು ಹೆಚ್ಚಿಸುತ್ತಿದ್ದೇವೆ. ಕ್ರಾಂತಿಕಾರಿ ಝಡ್-ಸೀರಿಸ್ ಎಂಜಿನ್ ಹೆಚ್ಚಿನ ಇಂಧನ ದಕ್ಷತೆ ಮತ್ತು ಕಡಿಮೆ ಇಂಗಾಲದ ಹೊರಸೂಸುವಿಕೆಯೊಂದಿಗೆ ಕಾರ್ಯಕ್ಷಮತೆಯನ್ನು ಸಂಯೋಜಿಸುವ ಮೂಲಕ ವಿಶ್ವದ ಅತ್ಯುತ್ತಮ ಅನುಭವವನ್ನು ಇದು ನೀಡುತ್ತದೆ" ಎಂದು ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಹೇಳಿದರು.

ಹೊಸ ಸ್ವಿಫ್ಟ್ 1.2 ಲೀಟರ್ ಎಂಜಿನ್ ಹೊಂದಿದ್ದು, 6 ಏರ್ ಬ್ಯಾಗ್​​ಗಳು, ರಿಮೈಂಡರ್​ಗಳೊಂದಿಗೆ ಎಲ್ಲಾ ಸೀಟುಗಳಿಗೆ 3-ಪಾಯಿಂಟ್ ಸೀಟ್ ಬೆಲ್ಟ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ + (ಇಎಸ್ ಪಿ), ಹಿಲ್ ಹೋಲ್ಡ್ ಅಸಿಸ್ಟ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಮತ್ತು ಬ್ರೇಕ್ ಅಸಿಸ್ಟ್ ನೊಂದಿಗೆ ವರ್ಧಿತ ಸುರಕ್ಷತೆಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ : ಸ್ಟಾರ್ಟ್​ಅಪ್​ಗಳಲ್ಲಿ ಉದ್ಯೋಗ ನೇಮಕಾತಿ ಶೇ 9ರಷ್ಟು ಹೆಚ್ಚಳ: ಫ್ರೆಶರ್ಸ್‌ಗೆ ಆದ್ಯತೆ - Startup Hiring

ABOUT THE AUTHOR

...view details