Interest Calculation Method: ಬಡ್ಡಿ ಲೆಕ್ಕಾಚಾರ ಎನ್ನುವುದು ಕೆಲವರಿಗೆ ಕಬ್ಬಿಣದ ಕಡಲೆ. ಬಡ್ಡಿ ಲೆಕ್ಕಾಚಾರಗಳನ್ನು ಬೆರಳುಗಳ ಮೇಲೆಯೂ ಲೆಕ್ಕ ಹಾಕಬಹುದು. ಲೇವಾದೇವಿಗಾರರು ಒಂದು ರೂಪಾಯಿ ಬಡ್ಡಿ, ಎರಡು ರೂಪಾಯಿ ಬಡ್ಡಿ ಮತ್ತು ಹತ್ತು ರೂಪಾಯಿ ಬಡ್ಡಿಗೆ ಸಾಲ ಕೊಡುತ್ತಾರೆ.
ವ್ಯಾಪಾರಿಗಳು ನೀಡುವ ಸಾಲದ ಬಡ್ಡಿ ಒಂದು ರೂಪಾಯಿ, 2 ರೂಪಾಯಿ ಮತ್ತು 3 ರೂಪಾಯಿ. ಅದೇ ಬ್ಯಾಂಕ್‌ಗಳಲ್ಲಿ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ತೆಗೆದುಕೊಳ್ಳುವಾಗ ಬಡ್ಡಿ ದರವನ್ನು ಶೇಕಡಾವಾರು ಲೆಕ್ಕ ಹಾಕಲಾಗುತ್ತದೆ. ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿಯ ಬಡ್ಡಿ ದರಗಳನ್ನು ಶೇ 3 , ಶೇ7 ,ಶೇ11 ,ಶೇ12 ಮತ್ತು ಶೇ 18ರಷ್ಟು ಎಂದು ಲೆಕ್ಕ ಹಾಕಲಾಗುತ್ತದೆ. ಈ ಶೇಕಡಾವಾರನ್ನು ರೂಪಾಯಿಗೆ ಪರಿವರ್ತಿಸುವುದು ಹೇಗೆ ಎಂದು ಅನೇಕರಿಗೆ ತಿಳಿದಿಲ್ಲ. ಆ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ
ಹೀಗಿದೆ ಲೆಕ್ಕಾಚಾರ:ಬ್ಯಾಂಕ್‌ಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ವಿಮಾ ಕಂಪನಿಗಳು ಪಾವತಿಸುವ ಬಡ್ಡಿಯು ಮಾಸಿಕವಾಗಿ ಲೆಕ್ಕ ಹಾಕುವುದಿಲ್ಲ. ಅವೆಲ್ಲವನ್ನು ವಾರ್ಷಿಕವಾಗಿ ಲೆಕ್ಕ ಹಾಕಲಾಗುತ್ತದೆ. ಅಂದರೆ 12 ತಿಂಗಳ ಲೆಕ್ಕದಲ್ಲಿ ಲೆಕ್ಕಾಚಾರ ಹಾಕಲಾಗುತ್ತದೆ.
ಉದಾಹರಣೆಗೆ, ಶೇ 6ರ ಬಡ್ಡಿಯನ್ನು ರೂಪಾಯಿಗೆ ಪರಿವರ್ತಿಸಲು, ವರ್ಷದಲ್ಲಿ 12 ತಿಂಗಳುಗಳಿರುವುದರಿಂದ 6/12 ರಿಂದ ಭಾಗಿಸಬೇಕಾಗುತ್ತದೆ. ಆಗ ಅದರ ಮೌಲ್ಯ ರೂ. 0.50 ಆಗಿರುತ್ತದೆ. ರೂಪಾಯಿ ಅಥವಾ ಪೈಸೆಯಲ್ಲಿನ ಮೌಲ್ಯವನ್ನು ಒಂದು ತಿಂಗಳವರೆಗೆ ಪರಿಗಣಿಸಬೇಕು. 6ರಷ್ಟು ಬಡ್ಡಿ ಎಂದರೆ 50 ಪೈಸೆ. ಶೇ.12ರ ಬಡ್ಡಿಯಾದರೆ ಅದು 1ರೂ.ಆಗುತ್ತದೆ, ಶೇ.18ರ ಬಡ್ಡಿ ಅಂತಾ ಎಂದರೆ ರೂಪಾಯಿ ಲೆಕ್ಕದಲ್ಲ ಒಂದೂವರೆ ರೂ.(1.50), ಶೇ.24ರ ಬಡ್ಡಿಯಾದರೆ ರೂ.2 ಬಡ್ಡಿ ಎಂದು ಅರ್ಥ ಮಾಡಿಕೊಳ್ಳಬೇಕು.
ಅದೇ ರೀತಿ ಶೇ1ರಷ್ಟು ಬಡ್ಡಿ = 0.0833
ಶೇ2 = 0.1666
ಶೇ3 = 0.25
ಶೇ4 = 0.3333
ಶೇ5 = 0.4166
ಶೇ6 = 0.50