ನವದೆಹಲಿ: ಭಾರತದಲ್ಲಿನ ಮ್ಯೂಚುವಲ್ ಫಂಡ್ ಯೋಜನೆಗಳು ಸೆಪ್ಟೆಂಬರ್‌ನಲ್ಲಿ ಸರಾಸರಿ ಆಸ್ತಿ ನಿರ್ವಹಣೆಯ ಅಡಿ ಶೇ 2.97 ಬೆಳವಣಿಗೆಯನ್ನು ಕಂಡಿದೆ ಎಂದು ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ ಅಂಕಿ ಅಂಶಗಳು ತಿಳಿಸಿದೆ.
ಮ್ಯೂಚುವಲ್ ಫಂಡ್ ಉದ್ಯಮದ ನಿವ್ವಳ ಆಸ್ತಿ ನಿರ್ವಹಣೆ ಕೂಡ ಶೇ 0.58ರಷ್ಟು ಹೆಚ್ಚಳ ವಾಗಿದೆ. ಆಗಸ್ಟ್ನಲ್ಲಿ 66,70,305.14 ಕೋಟಿ ಇದ್ದ ನಿರ್ವಹಣಾ ಮೌಲ್ಯ ಸೆಪ್ಟೆಂಬರ್‌ನಲ್ಲಿ 67,09,259 ಕೋಟಿಯಷ್ಟಾಗಿದೆ.
ಈ ವಲಯದ ನಿಧಿಗಳು 22,244 ಕೋಟಿಯಷ್ಟು ಹೆಚ್ಚಿನ ಒಳಹರಿವನ್ನು ಹೊಂದಿದೆ. ಒಟ್ಟಾರೆ ಪೋರ್ಟ್ ಪೊಲಿಯೋ ಮೌಲ್ಯಗಳು 21.05 ಕೋಟಿಯಾಗಿದ್ದು, ಇದು ಸರ್ವಕಾಲಿಕ ಗರಿಷ್ಠವಾಗಿದೆ. ಉದ್ಯಮ ತಜ್ಞರ ಪ್ರಕಾರ, ಇದು ದೇಶೀಯ ಹೂಡಿಕೆಗೆ ತುಂಬಾ ಉತ್ತೇಜನಕಾರಿಯಾಗಿದೆ.
ಈ ಬಗ್ಗೆ ಐಟಿಐ ಮ್ಯೂಚುವಲ್ ಫಂಡನ್ ಕಾರ್ಯಕಾರಿ ಸಿಇಒ ಹಿತೇಶ್ ಥಕ್ಕರ್ ಮಾತನಾಡಿ, ಮಾರುಕಟ್ಟೆಯಲ್ಲಿನ ಅಲ್ಪಾವಧಿಯ ಏರಿಳಿತವು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಯ ಪ್ರಯಾಣವಾಗಿದೆ. ಇದೇ ಕಾರಣಕ್ಕೆ ಆರ್ಥಿಕ ಸಂಪತ್ತಿನ ಹಂಚಿಕೆಯೂ ವೇಗವಾಗಿ ಹೆಚ್ಚುತ್ತಿದೆ. ಮ್ಯೂಚುವಲ್ ಪಾಲು ಕ್ರಮೇಣ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.
ಮ್ಯೂಚುವಲ್ ಫಂಡ್ ಯೋಜನೆಗಳು ಆಸ್ತಿ ನಿರ್ವಹಣೆ ಕೂಡ ಸೆಪ್ಟೆಂಬರ್‌ನಲ್ಲಿ ಸರಾಸರಿ ಶೇ 2.97ರಷ್ಟು ಬೆಳವಣಿಗೆಯನ್ನು ಕಂಡಿವೆ. ಇವು ಪ್ರಾಥಮಿಕವಾಗಿ ಮಾರುಕಟ್ಟೆಯ ಚಲನೆಗೆ ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.