ಕರ್ನಾಟಕ

karnataka

ETV Bharat / bharat

ಸಹಪಾಠಿಯಿಂದ ಕೊಲೆಗೀಡಾದ 10ನೇ ತರಗತಿ ಬಾಲಕ; ಬಿಗಿ ಭದ್ರತೆಯಲ್ಲಿಂದು ಅಂತ್ಯ ಸಂಸ್ಕಾರ - UDAIPUR SCHOOL BOY STABBED - UDAIPUR SCHOOL BOY STABBED

ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕ ನೋಟ್​ ಬುಕ್​ ಹಂಚಿಕೊಳ್ಳುವ ಕ್ಷುಲ್ಲಕ ಕಾರಣಕ್ಕೆ ತನ್ನ ಸಹಪಾಠಿಯಿಂದ ಆಗಸ್ಟ್​ 16ರಂದು ಚಾಕು ಇರಿತಕ್ಕೆ ಒಳಗಾಗಿದ್ದ.

udaipur-school-boy-stabbed-to-death-funeral-procession
ಅಂತಿಮ ಯಾತ್ರೆ (ಈಟಿವಿ ಭಾರತ್​​)

By ETV Bharat Karnataka Team

Published : Aug 20, 2024, 11:57 AM IST

ಉದಯಪುರ (ರಾಜಸ್ಥಾನ): ಕಳೆದ ವಾರ ಕ್ಷುಲ್ಲಕ ಕಾರಣಕ್ಕಾಗಿ ಸಹಪಾಠಿಯಿಂದ ಚಾಕು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ 15 ವರ್ಷದ ಶಾಲಾ ಬಾಲಕನ ಅಂತ್ಯ ಸಂಸ್ಕಾರ ಇಂದು ಬಿಗಿ ಭದ್ರತೆಯಲ್ಲಿ ನಡೆದಿದೆ. ಅಶೋಕ ನಗರದ ಮೋಕ್ಷಧಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತ ವಿದ್ಯಾರ್ಥಿಯ ಪಾರ್ಥಿವ ಶರೀರದ ಯಾತ್ರೆಯಲ್ಲಿ ಜನಸಾಗರ ಸೇರಿದ್ದು, ಯಾವುದೇ ದುರ್ಘಟನೆ ಸಂಭವಿಸದಂತೆ ಬಿಗಿ ಬಂದೋಬಸ್ತ್​​ ಕೈಗೊಳ್ಳಲಾಗಿದೆ.

ಏನಿದು ಘಟನೆ: ಗಿರ್ವಾ ಪ್ರದೇಶದ ಭಟ್ಟಿಯಾನಿ ಚೌಹಟ್ಟಾದಲ್ಲಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕ ನೋಟ್​ ಬುಕ್​ ಹಂಚಿಕೊಳ್ಳುವ ಕ್ಷುಲ್ಲಕ ವಿಷಯಕ್ಕೆ ತನ್ನ ಸಹಪಾಠಿಯಿಂದ ಆಗಸ್ಟ್​ 16ರಂದು ಚಾಕು ಇರಿತಕ್ಕೆ ಒಳಗಾಗಿದ್ದ.

ಈ ವಿಚಾರ ತಿಳಿಯುತ್ತಿದ್ದಂತೆ ಜನರು ಸ್ಥಳದಲ್ಲಿ ಜಮಾಯಿಸಲು ಆರಂಭಿಸಿದ್ದರು. ಅಲ್ಲದೇ ಶೀಘ್ರದಲ್ಲೇ ಈ ಘಟನೆ ಹಿಂಸಾಚಾರಕ್ಕೆ ತಿರುಗಿತು. ವಾಹನ ಮತ್ತು ಶಾಪಿಂಗ್​ ಮಾಲ್​ ಮೇಲೆ ಹಾನಿ ನಡೆಸುವ ಕೃತ್ಯಗಳು ಜರುಗಿದ್ದು, ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತ್ತು.

ಘಟನೆ ವಿಕೋಪಕ್ಕೆ ತಿರುಗಿದ ಹಿನ್ನೆಲೆ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಿದರು. ಬಾಲಕನ ಪ್ರಾಣರಕ್ಷಣೆಗೆ ವೈದ್ಯರ ತಂಡವನ್ನು ಉದಯಪುರಕ್ಕೆ ಕಳುಹಿಸಲಾಯಿತು.

ಮೃತದೇಹ ಪಡೆಯಲು ನಿರಾಕರಿಸಿದ ಕುಟುಂಬ: ಚಾಕು ಇರಿತದಿಂದ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಾಲಕ ಚಿಕಿತ್ಸೆ ಫಲಿಸದೆ ಸೋಮವಾರ (ಆ.19) ಸಾವನ್ನಪ್ಪಿದ. ಈ ಘಟನೆಯಿಂದ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆಗಳು ಆರಂಭವಾದವು. ಅಲ್ಲದೇ ಮೃತ ಬಾಲಕನ ಕುಟುಂಬ ಕೃತ್ಯ ಎಸಗಿದ ಬಾಲಕನಿಗೆ ಕಠಿಣ ಶಿಕ್ಷೆ ವಿಧಿಸುವಂತೆ, ಕುಟುಂಬಕ್ಕೆ ಸರ್ಕಾರಿ ಕೆಲಸದ ಭರವಸೆ ಮತ್ತು 1 ಕೋಟಿ ರೂ. ಪರಿಹಾರ ನೀಡುವಂತೆ ಪಟ್ಟು ಹಿಡಿಯಿತು. ತಮ್ಮ ಬೇಡಿಕೆ ಈಡೇರದೇ ಶವವನ್ನು ಪಡೆಯುವುದಿಲ್ಲ ಎಂದು ಪಟ್ಟುಹಿಡಿದರು. ಬಳಿಕ ಪೊಲೀಸ್​ ಅಧಿಕಾರಿಗಳ ಮನವೊಲಿಕೆ ನಂತರ, 51 ಲಕ್ಷ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಗುತ್ತಿಗೆ ಆಧಾರಿತ ಕೆಲಸಕ್ಕೆ ಒಪ್ಪಿಗೆ ನೀಡಿ ಬಳಿಕ ಯುವಕನ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ರಾಜ್ಯ ಸಚಿವ ಜವಾಹರ್ ಸಿಂಗ್ ಬೇಧಮ್ ವಿದ್ಯಾರ್ಥಿಯ ಸಾವಿಗೆ ಸಂತಾಪ ಸೂಚಿಸಿದ್ದು, ಸರ್ಕಾರದ ಸಾಕಷ್ಟು ಪ್ರಯತ್ನದ ಬಳಿಕ ಬಾಲಕನನ್ನು ಉಳಿಸಲು ಸಾಧ್ಯವಾಗಲಿಲ್ಲ. ಜನರು ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಇಂಟರ್​ನೆಟ್​​ ಸ್ಥಗಿತ: ಬಾಲಕನ ಈ ಕೊಲೆಯಿಂದ ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆ ಇಂದು ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ಮುಂದಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿನ ಎಲ್ಲಾ ಶಾಲಾ ಮತ್ತು ಕಾಲೇಜಿಗೆ ರಜೆ ನೀಡಲಾಗಿದೆ.

ಬಿಗಿ ಭದ್ರತೆಯ ನಡುವೆ ಬಾಲಕನ ಮನೆಯಿಂದ ಬೆಳಗ್ಗೆ ಶವಯಾತ್ರೆ ಹೊರಟಿದ್ದು, ಮೆರವಣಿಗೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೂ ಕೂಡ ಭಾಗಿಯಾಗಿ, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ನಗರದಲ್ಲಿ ನಿಷೇಧಾಜ್ಞೆ ಮುಂದುವರೆದಿದ್ದು, ಜನರು ಗುಂಪುಗೂಡಲು ನಿರ್ಬಂಧಿಸಲಾಗಿದೆ. ನಗರದೆಲ್ಲೆಡೆ ಬಿಗಿಬಂದೋಬಸ್ತ್​​ ನಡೆಸಲಾಗಿದ್ದು, ಪರಿಸ್ಥಿತಿ ಪರಿಶೀಲನೆಗೆ ನಗರದಲ್ಲಿ ಡ್ರೋನ್​ ಕಣ್ಗಾವಲು ಇರಿಸಲಾಗಿದೆ. ಜೊತೆಗೆ ತಾತ್ಕಾಲಿಕವಾಗಿ ಇಂಟರ್​ನೆಟ್​ ಸೇವೆಯನ್ನು ಬಂದ್​ ಮಾಡಲಾಗಿದೆ.

ಇದನ್ನೂ ಓದಿ: ಸಂಜೆ ವೇಳೆ ಸ್ನ್ಯಾಕ್ಸ್​ ಆಗಿ ಸಮೋಸ ತಿಂದ ಮೂವರು ಅನಾಥ ಮಕ್ಕಳು ಸಾವು

ABOUT THE AUTHOR

...view details