ಅಜ್ನಾಲಾ (ಪಂಜಾಬ್):ಆಧುನಿಕ ಕಾಲದಲ್ಲಿ ವರನು ತನ್ನ ವಧುವನ್ನು ಮದುವೆಗೆ ಕರೆತರಲು ದುಬಾರಿ ಹೈಟೆಕ್ ವಾಹನಗಳು ಅಥವಾ ಹೆಲಿಕಾಪ್ಟರ್‌ಗಳ ಮೊರೆ ಹೋಗುವುದನ್ನ ನಾವೆಲ್ಲರೂ ನೋಡಿರುತ್ತೇವೆ. ಆದ್ರೆ, ಪಂಜಾಬ್ ರಾಜ್ಯದ ಅಜ್ನಾಲಾದಲ್ಲಿ ಪ್ರಾಚೀನ ಕಾಲದ ರಾಜ-ಮಹಾರಾಜರುಗಳ ಸಂಪ್ರಾಯದಂತೆ ಒಂಟೆಯ ಮೇಲೆ ಬಂದ ವರ, ತನ್ನ ವಧುವನ್ನು ವರಿಸಿ ಗಮನ ಸೆಳೆದಿದ್ದಾನೆ.
ಮೆರುವಣಿಗೆ ವೀಕ್ಷಿಸಿ ಫುಲ್ ಖುಷ್ ಆದ ಸ್ಥಳೀಯರು:ಡಾಲಿ ಹೆಸರಿನ ಒಂಟೆಯ ಮೇಲೆ ವರನು ತನ್ನ ವಧುವನ್ನು ಕರೆದುಕೊಂಡು ಬಂದಿರುವ ದೃಶ್ಯ ಜನಮನ ಸೆಳೆಯಿತು. ಅಷ್ಟೇ ಅಲ್ಲ ವರನ ಕುಟುಂಬಸ್ಥರು ಕೂಡ ಆನೆಯ ಮೇಲೆ ಸವಾರಿ ಮಾಡಿ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಮಾರುಕಟ್ಟೆಯಲ್ಲಿರುವ ಜನರು, ಈ ಮದುವೆ ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರುವಣಿಗೆ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಫುಲ್ ಖುಷ್ ಆದರು.
ಹಳೆಯ ಸಂಸ್ಕೃತಿಯನ್ನು ಮತ್ತೊಮ್ಮೆ ತೋರಿಸಬೇಕೆಂದು ಮದುವೆ ಮನೆಯವರು ಹಳೆಯ ಕಾಲದ ರಾಜ - ಮಹಾರಾಜರಂತೆ ಒಂಟೆ, ಆನೆಗಳ ಮೇಲೆ ತಮ್ಮ ಮದುವೆ ಕಾರ್ಯಕ್ರಮದ ನಿಮಿತ್ತ ಮೆರವಣಿಗೆ ನಡೆಸಿದರು. ಇಂದಿನ ಯುಗದಲ್ಲಿ ಸಾಮಾನ್ಯವಾಗಿ ಕಾರುಗಳಲ್ಲಿ ಮದುವೆ ಮೆರವಣಿಗೆ ನಡೆಸುತ್ತಾರೆ. ಆದರೆ, ನಮ್ಮ ಹಳೆಯ ಸಂಸ್ಕೃತಿಯನ್ನು ಕಳೆದುಕೊಳ್ಳಲು ಬಿಡುತ್ತಿಲ್ಲ ಎಂದು ಮದುವೆ ಮನೆಯವರು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯ ಮದುವೆಯ ದಿನವನ್ನು ವಿಶೇಷವಾಗಿ ಮತ್ತು ಸ್ಮರಣೀಯವಾಗಿಸಲು ಏನನ್ನಾದರೂ ಮಾಡಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಗುರುದಾಸ್‌ಪುರ ಜಿಲ್ಲೆಯ ಸರ್ಚುರ್ ಗ್ರಾಮದ ಯುವಕ ಸತ್ನಾಮ್ ಸಿಂಗ್ ಅವರು ಹಳೆ ಸಂಪ್ರದಾಯವನ್ನು ಮರುಕಳಿಸುವ ಕಾರ್ಯದಲ್ಲಿ ತೊಡಗಿಸಿದ್ದಾರೆ. ವರ ಸತ್ನಾಮ್ ಸಿಂಗ್ ತನ್ನ ವಧುವನ್ನು ಮದುವೆಯಾಗಲು ತನ್ನ ಪೂರ್ವಜರ ಸಂಪ್ರದಾಯದಂತೆ ಒಂಟೆಯ ಮೇಲೆ ಸವಾರಿ ಮಾಡುತ್ತಾ ಅಜ್ನಾಲಾದಲ್ಲಿನ ಖಾಸಗಿ ಪ್ಯಾಲೆಸ್ಗೆ ಕರೆದುಕೊಂಡು ಬಂದಿದ್ದಾರೆ.
ಒಂಟೆ, ಆನೆಯ ಮೇಲೆ ಪ್ಯಾಲೆಸ್ಗೆ ತೆರಳಿ ಕುಟುಂಬ:ವರ ಸತ್ನಾಮ್ ಸಿಂಗ್ ತನ್ನ ತಾಯಿ ಮತ್ತು ಸೊಸೆಯರೊಂದಿಗೆ ಒಂಟೆಯ ಮೇಲೆ ಸವಾರಿ ಮಾಡುತ್ತಿದ್ದರೆ, ಅವರ ಉಳಿದ ಸಂಬಂಧಿಕರು ಮತ್ತೊಂದು ಒಂಟೆ ಮತ್ತು ಆನೆಯ ಮೇಲೆ ಪ್ಯಾಲೆಸ್ಗೆ ತೆರಳಿದ್ದಾರೆ. ಈ ಮೆರವಣಿಗೆಯು ಒಂಟೆ ಮತ್ತು ಆನೆಗಳ ಮೂಲಕ ಸ್ಥಳೀಯ ಮಾರುಕಟ್ಟೆ ಪ್ರದೇಶಕ್ಕೆ ತಲುಪಿದಾಗ, ರಸ್ತೆಯಲ್ಲಿ ನಿಂತಿದ್ದ ಸ್ಥಳೀಯರು ಹಾಗೂ ದಾರಿಹೋಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ವಿಶಿಷ್ಟ ದೃಶ್ಯವನ್ನು ಸೆರೆಹಿಡಿದರು.
ವರ ಹೇಳಿದ್ದು ಹೀಗೆ:ಸಂಸಿ ಸಮುದಾಯಕ್ಕೆ ಸೇರಿದ ರಾಜ್ ಕುಮಾರ್ ಅವರ ಪುತ್ರ ಸತ್ನಾಮ್ ಸಿಂಗ್ ಮಾತನಾಡಿ, ''ತಮ್ಮ ಪೂರ್ವಜರು ಕೂಡ ಒಂಟೆ ಮತ್ತು ಆನೆಗಳ ಮೇಲೆ ಸವಾರಿ ಮಾಡಿದ ನಂತರ ಮದುವೆಯಾಗುತ್ತಿದ್ದರು. ತಾನೂ ಕೂಡ ತನ್ನ ಪೂರ್ವಜರಂತೆ ಒಂಟೆಯ ಮೇಲೆ ಸವಾರಿ ಮಾಡುವ ಮೂಲಕ ತನ್ನ ವಧುವನ್ನು ಮದುವೆಯಾಗಬೇಕು ಎನ್ನುದು ತಮ್ಮ ಆಸೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಟೊಮೆಟೊ ಬಾಕ್ಸ್ನಲ್ಲಿ ಈರುಳ್ಳಿ ಕಳ್ಳಸಾಗಣೆ: 82.93 ಮೆಟ್ರಿಕ್ ಟನ್ ಉಳ್ಳಾಗಡ್ಡಿ ವಶಪಡಿಸಿಕೊಂಡ ಕಸ್ಟಮ್ಸ್