ಕರ್ನಾಟಕ

karnataka

ETV Bharat / bharat

ಶಬರಿಮಲೆ ಭಕ್ತರಿಗೆ 'ಸ್ವಾಮಿ' ಎಐ ಚಾಟ್‌ಬಾಟ್ ನೆರವು: ಇನ್ನಿಲ್ಲ ಯಾವುದೇ ಸಮಸ್ಯೆ!; ಇಂದು ಮಂಡಲ ಪೂಜೆ - SABARIMALA TEMPLE CHATBOT

ಶಬರಿಮಲೆ ಭಕ್ತರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ - WhatsApp ಆಧಾರಿತ AI ಚಾಟ್‌ಬಾಟ್ ಸೇವೆ ಕೂಡಾ ಲಭ್ಯವಿದೆ

Sabarimala Temple Chatbot
ಶಬರಿಮಲೆ ಭಕ್ತರಿಗೆ 'ಸ್ವಾಮಿ' ಎಐ ಚಾಟ್‌ಬಾಟ್ ನೆರವು: ಇನ್ನಿಲ್ಲ ಯಾವುದೇ ಸಮಸ್ಯೆ! (Getty Images)

By ETV Bharat Karnataka Team

Published : Dec 26, 2024, 10:01 AM IST

Sabarimala Temple Chatbot - ಪತ್ತನಂತಿಟ್ಟ, ಕೇರಳ:ಮಂಡಲ - ಮಕರವಿಳಕ್ಕು ಋತುವಿನಲ್ಲಿ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಹೊಸ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗುತ್ತಿದೆ.


ಪ್ರತಿ ವರ್ಷ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣ ಮಾಡುವುದು ದೇವಸ್ಥಾನ ಮಂಡಳಿಗೆ ಕಷ್ಟವಾಗಿದೆ. ಹೀಗಾಗಿ ಕ್ಷೇತ್ರವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಭಕ್ತಾದಿಗಳ ವಸತಿ, ಭದ್ರತೆ ಮತ್ತು ಸರತಿ ಸಾಲು ನಿರ್ವಹಣೆಯೇ ದೊಡ್ಡ ಸಾಹಸ ಎಂಬಂತಾಗಿದೆ. ದೇವಸ್ಥಾನದ ಸಮಯ, ಮಾರ್ಗದ ವಿವರ ಮತ್ತು ಯಾತ್ರಾರ್ಥಿ ಗುಂಪುಗಳ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲದಿದ್ದರೆ ಭಕ್ತರು ಗೊಂದಲಕ್ಕೊಳಗಾಗುತ್ತಾರೆ. ಹೀಗಾಗಿ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ದೇವಸ್ಥಾನ ಮಂಡಳಿ ತಂತ್ರಜ್ಞಾನದ ನೆರವು ಪಡೆದುಕೊಳ್ಳಲು ಈಗಾಗಲೇ ವ್ಯವಸ್ಥೆ ಮಾಡಿದೆ.

ಹವಾಮಾನದ ಮಾಹಿತಿಯ ಕೊರತೆಯಿಂದಾಗಿ ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ ಭಕ್ತರು ಆಗಾಗ್ಗೆ ಅಪಘಾತಗಳಿಗೆ ಈಡಾಗುತ್ತಿದ್ದಾರೆ. ಇವುಗಳ ಜೊತೆಗೆ ಭಾಷಾ ಸಮಸ್ಯೆಗಳೂ ಇವೆ. ಆ ಸವಾಲುಗಳನ್ನು ನಿವಾರಿಸಲು, ಪತ್ತನಂತಿಟ್ಟ ಜಿಲ್ಲಾಧಿಕಾರಿ ಪ್ರೇಮ್ ಕೃಷ್ಣನ್ ನೇತೃತ್ವದಲ್ಲಿ WhatsApp ಆಧಾರಿತ AI ಚಾಟ್‌ಬಾಟ್ ಸೇವೆ ಲಭ್ಯವಾಗುವಂತೆ ಮಾಡಲಾಗಿದೆ. ಈ ಚಾಟ್‌ಬಾಟ್​​ ಗೆ ಅದಕ್ಕೆ ಸ್ವಾಮಿ ಎಂದು ಹೆಸರಿಡಲಾಗಿದೆ. ಈ ಚಾಟ್‌ಬಾಟ್‌ನ ಉದ್ದೇಶವು ಭಕ್ತರಿಗೆ ಪ್ರಮುಖ ಮತ್ತು ನಿಖರವಾದ ಮಾಹಿತಿ ಒದಗಿಸುವುದಾಗಿದೆ.

ಈ ಚಾಟ್‌ಬಾಟ್ ಕೆಲಸ ಹೇಗಿದೆ: ಇದು ಬಳಕೆದಾರ ಸ್ನೇಹಿಯಾಗಿದೆ ಮತ್ತು ಬಹು ಭಾಷೆಗಳಲ್ಲಿ ಸೇವೆಗಳನ್ನು ನೀಡುತ್ತದೆ. ನವೆಂಬರ್ 13 ರಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಅನಾವರಣಗೊಳಿಸಿದರು. ಎಲ್ಲ ಭಕ್ತರನ್ನು ತಲುಪಲು ಮಾಧ್ಯಮಗಳು, ಎಫ್‌ಎಂ ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಮಾಡಲಾಗಿದೆ. ಐದು ವಾರಗಳಲ್ಲಿ 1.5 ಲಕ್ಷ ಭಕ್ತರಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಮಂಡಲ ಪೂಜೆ: ಮಂಡಲ ಪೂಜೆಯ ಸಮಯದಲ್ಲಿ ಶಬರಿಮಲೆಯಲ್ಲಿ ಸ್ವಾಮಿಯನ್ನು ಮೆರವಣಿಗೆಯಲ್ಲಿ ತರಲಾದ ತಂಕ ಅಂಕಿಯಿಂದ ಅಲಂಕರಿಸಲಾಗುತ್ತದೆ. ದೇವಸ್ಥಾನದಲ್ಲಿ ದೀಪಾರಾಧನೆ ನೆರವೇರಿಸಲಾಗಿದೆ. ಇದಕ್ಕೂ ಮುನ್ನ ಮೆರವಣಿಗೆಯಲ್ಲಿ ತರಲಾಗಿದ್ದ ತಂಕ ಅಂಕಿಯನ್ನು ಸಚಿವ ವಿ.ಎನ್.ವಾಸವನ್, ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್, ದೇವಸ್ವಂ ಮಂಡಳಿ ಸದಸ್ಯರು ಹಾಗೂ ಇತರ ಅಧಿಕಾರಿಗಳು ಸನ್ನಿಧಾನದಲ್ಲಿ ಮೆರವಣಿಗೆಗೆ ಭವ್ಯ ಸ್ವಾಗತ ಕೋರಿದರು.

ಮಹಾ ದೀಪಾರಾಧನೆ: ದೇವಸ್ಥಾನದ ಮೆಟ್ಟಿಲುಗಳ ಬಳಿ ತೆರಳಿದ ತಂತ್ರಿ ಕಂದರಾರು ರಾಜೀವರು, ಮೇಲ್ಶಾಂತಿ ಅರುಣ್ ಕುಮಾರ್ ನಂಬೂತಿರಿ ಮತ್ತು ಸಹಾಯಕ ಅರ್ಚಕರು ವಿಧ್ಯುಕ್ತವಾಗಿ ಥಂಕಾ ಅಂಕಿಯನ್ನು ಬರಮಾಡಿಕೊಂಡರು. ಸಂಜೆ 6.30ಕ್ಕೆ ಮಹಾ ದೀಪಾರಾಧನೆ ನಡೆಯಿತು. ಭಕ್ತರಿಗೆ ತಂಕ ಅಂಕಿ ಅಲಂಕರಿಸಿ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ನೇಯಾಭಿಷೇಕದ ದೇವಸ್ಥಾನದ ಬಾಗಿಲು ಮುಚ್ಚಲಿದೆ; ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ವಾರ್ಷಿಕ ಯಾತ್ರೆಯ ಮೊದಲ ಪಾದದ ಅಂತ್ಯವನ್ನು ಸೂಚಿಸುವ ನಿರ್ಣಾಯಕ ಮಂಡಲ ಪೂಜೆ ಇಂದು ನಡೆಯಲಿದೆ. ದೇವಸ್ಥಾನದ ತಂತ್ರಿ ಅಂದರೆ ಮುಖ್ಯ ಅರ್ಚಕ ಕಂದರಾರು ರಾಜೀವರ ನೇತೃತ್ವದಲ್ಲಿ 12.30 ರ ವೇಳೆಗೆ ಪೂಜೆಗಳನ್ನು ನೆರವೇರಿಸಲಿದ್ದಾರೆ. ಡಿಸೆಂಬರ್ 26 ರಂದು ಮಂಡಲ ಪೂಜೆ ಮತ್ತು ನೇಯಾಭಿಷೇಕದ ನಂತರ ರಾತ್ರಿ 11 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ.

ಡಿಸೆಂಬರ್​ 30ಕ್ಕೆ ಮತ್ತೆ ತೆರೆಯಲಿರುವ ಬಾಗಿಲು:ಮಕರವಿಳಕ್ಕು ಉತ್ಸವಕ್ಕಾಗಿ ಡಿಸೆಂಬರ್ 30 ರ ಸಂಜೆ ಮತ್ತೆ ತೆರೆಯಲಾಗುತ್ತದೆ. ಡಿಸೆಂಬರ್ 23 ರ ಹೊತ್ತಿಗೆ ಈ ಋತುವಿನಲ್ಲಿ ಒಟ್ಟು 30,87,049 ಯಾತ್ರಾರ್ಥಿಗಳು ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಅಲ್ಲಿನ ಆಡಳಿತ ಮಂಡಳಿ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 4.46 ಲಕ್ಷ ಭಕ್ತರು ಹೆಚ್ಚು ಭೇಟಿ ನೀಡಿದ್ದಾರೆ.

ಇದನ್ನು ಓದಿ:ಡಿಸೆಂಬರ್ 26 ರಂದು ಮಂಡಲ ಪೂಜೆಗೆ ಶಬರಿಮಲೆ ಸಜ್ಜು: ಅಯ್ಯಪ್ಪನ ದರ್ಶನಕ್ಕೆ ಭಕ್ತರ ದಂಡು

ಕೇರಳ ಪೊಲೀಸರಿಂದ ಶಬರಿಮಲೆ ಸಂಪ್ರದಾಯಕ್ಕೆ ಧಕ್ಕೆ ಆರೋಪ: ವಿವಾದ ಸೃಷ್ಟಿಸಿದ ವೈರಲ್ ಫೋಟೋ

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಓಪನ್: ಮಂಡಲ ಪೂಜೆ, ದರ್ಶನ ಪ್ರಾರಂಭ

ABOUT THE AUTHOR

...view details