ಕರ್ನಾಟಕ

karnataka

ETV Bharat / bharat

ದೇಶದ ಬಹುಸಂಖ್ಯಾತರು ಮುಂದೊಂದು ದಿನ ಅಲ್ಪಸಂಖ್ಯಾತರಾಗುವ ದಿನ ಬರುತ್ತದೆ: ಅಲಹಾಬಾದ್‌ ಹೈಕೋರ್ಟ್‌ ಕಳವಳ - Religious Conversions - RELIGIOUS CONVERSIONS

ಕಾನೂನುಬಾಹಿರ ಮತಾಂತರ ಪ್ರಕರಣವೊಂದರಲ್ಲಿ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌, ಮತಾಂತರ ಪ್ರಕ್ರಿಯೆಗಳು ಇದೇ ವೇಗದಲ್ಲಿ ಮುಂದುವರೆದರೆ ದೇಶದಲ್ಲಿ ಮುಂದೊಂದು ದಿನ ಬಹುಸಂಖ್ಯಾತರೇ ಅಲ್ಪಸಂಖ್ಯಾತರಾಗುತ್ತಾರೆ ಎಂದು ಹೇಳಿದೆ.

Religious congregations where conversions take place must be stopped: Allahabad HC
ಅಲಹಾಬಾದ್‌ ಹೈಕೋರ್ಟ್‌ (ETV Bharat)

By ETV Bharat Karnataka Team

Published : Jul 3, 2024, 7:07 AM IST

Updated : Jul 3, 2024, 8:34 AM IST

ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಮತಾಂತರ ಉದ್ದೇಶದಿಂದ ನಡೆಸುವ ಧಾರ್ಮಿಕ ಸಭೆಗಳನ್ನು ತಕ್ಷಣವೇ ನಿಲ್ಲಿಸದೇ ಹೋದರೆ ಮುಂದೊಂದು ದಿನ ದೇಶದಲ್ಲಿರುವ ಬಹುಸಂಖ್ಯಾತ ಜನರು ಅಲ್ಪಸಂಖ್ಯಾತರಾಗಲಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ಮತಾಂತರ ಕೆಲಸದಲ್ಲಿ ಭಾಗಿಯಾಗಿದ್ದ ಗಂಭೀರ ಆರೋಪದಡಿ ಕೈಲಾಶ್ ಎಂಬ ವ್ಯಕ್ತಿ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿ ರೋಹಿತ್ ರಾಜನ್ ಅಗರ್‌ವಾಲ್ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಇಲ್ಲಿ 'ಪ್ರಸಾರ' ಎಂಬ ಪದದ ಅರ್ಥ ಪ್ರೋತ್ಸಾಹಿಸು, ಬೆಂಬಲಿಸು ಎಂಬುದು. ಆದರೆ, ಇದು ಯಾವುದೇ ಜನರನ್ನು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಿಸುವುದು ಎಂಬ ಅರ್ಥ ನೀಡುವುದಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿತು.

ಈ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಆರೋಪಿಯ ಮೇಲೆ ಗಂಭೀರ ಸ್ವರೂಪದ ಆರೋಪಗಳಿವೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿ ತನ್ನ ಸಹೋದರ ಹಾಗು ಗ್ರಾಮದ ಕೆಲವರನ್ನು ಕರೆದುಕೊಂಡು ಹೋಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಿದ್ದಾರೆ ಎಂದು ಮಾಹಿತಿದಾರ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹೀಗೆ ಮನೆ ಬಿಟ್ಟು ಹೋದ ಆಕೆಯ ಸಹೋದರ ಇದುವರೆಗೂ ವಾಪಸ್‌ ಬಂದಿಲ್ಲ ಎಂದು ಕೋರ್ಟ್ ಹೇಳಿದೆ.

"ಒಂದು ವೇಳೆ ನಾವು ಇಂಥ ಪ್ರಕ್ರಿಯೆಗಳನ್ನು ನಡೆಯಲು ಬಿಟ್ಟರೆ, ದೇಶದಲ್ಲಿರುವ ಬಹುಸಂಖ್ಯಾತ ಜನರು ಮುಂದೊಂದು ದಿನ ಅಲ್ಪಸಂಖ್ಯಾತರಾಗುವ ದಿನ ಬಂದೇ ಬರುತ್ತದೆ. ಮತಾಂತರದಲ್ಲಿ ತೊಡಗುವ ಇಂಥ ಧಾರ್ಮಿಕ ಕಾರ್ಯಕ್ರಮಗಳನ್ನು ತಕ್ಷಣ ನಿಲ್ಲಿಸುವ ಅಗತ್ಯವಿದೆ" ಎಂದು ಕೋರ್ಟ್ ತಿಳಿಸಿದೆ.

ಕೈಲಾಶ್ ಎಂಬಾತ ಮತಾಂತರ ಉದ್ದೇಶದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜನರನ್ನು ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದ ವಿಚಾರ ಪೊಲೀಸ್ ಅಧಿಕಾರಿ ದಾಖಲಿಸಿರುವ ಹೇಳಿಕೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

ಉತ್ತರ ಪ್ರದೇಶದಾದ್ಯಂತ ಎಸ್‌ಸಿ/ಎಸ್‌ಸಿ ಸಮುದಾಯದ ಜನರು, ಇತರೆ ಜಾತಿಗಳವರು ಹಾಗು ಆರ್ಥಿಕವಾಗಿ ಹಿಂದುಳಿದವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಬಹಳ ವೇಗವಾಗಿ ಮತಾಂತರಿಸುತ್ತಿರುವ ಕುರಿತು ಹಲವು ಪ್ರಕರಣಗಳ ಮೂಲಕ ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ, ಪ್ರಕರಣದಲ್ಲಿ ಆರೋಪಿ ಜಾಮೀನು ಪಡೆಯಲು ಅರ್ಹನಲ್ಲ ಎಂದು ಕೋರ್ಟ್‌ ಹೇಳಿತು.

ಕೈಲಾಶ್ ವಿರುದ್ಧ ಐಪಿಸಿ ಸೆಕ್ಷನ್ 365 (ಅಪಹರಣ), ಉತ್ತರ ಪ್ರದೇಶ ಕಾನೂನುಬಾಹಿರವಾಗಿ ಮತಾಂತರಿಸುವಿಕೆ ಕಾಯ್ದೆಯಡಿ ಹಮೀರ್‌ಪುರ್‌ ಜಿಲ್ಲೆಯ ಮೌದಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಎಫ್‌ಐಆರ್ ಪ್ರಕಾರ, ಮಾಹಿತಿದಾರೆ ರಾಮ್‌ಕಲಿ ಪ್ರಜಾಪತಿ ಎಂಬವರ ಸಹೋದರ ರಾಂಪಾಲ್ ಎಂಬವರನ್ನು ಕೈಲಾಶ್ ಎಂಬಾತ ಸಾಮಾಜಿಕ ಕಾರ್ಯಕ್ರಮದ ನೆಪದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿದ್ದಾನೆ. ಈತ ಮಾತ್ರವಲ್ಲದೇ, ಇದೇ ಗ್ರಾಮದ ಹಲವು ಜನರನ್ನು ಕೂಡಾ ಇದೇ ಸಂದರ್ಭದಲ್ಲಿ ಕರೆದುಕೊಂಡು ಹೋಗಿ ಮತಾಂತರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ನಿಮ್ಮ ಸಹೋದರ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಗ್ರಾಮಕ್ಕೆ ಒಂದು ವಾರದೊಳಗೆ ವಾಪಸ್‌ ಕರೆದುಕೊಂಡು ಬರುತ್ತೇನೆ ಎಂದು ಕೈಲಾಶ್‌ ತಾನು ದೆಹಲಿಗೆ ಕರೆದುಕೊಂಡು ಹೋದ ಯುವಕನ ಸಹೋದರಿಗೆ ಸುಳ್ಳು ಹೇಳಿದ್ದ. ಆದರೆ, ಇದುವರೆಗೂ ಸಹೋದರ ಮರಳಿ ಗ್ರಾಮ ಸೇರಿಲ್ಲ. ಅಂತಿಮವಾಗಿ, ಸಹೋದರ ಮರಳಿ ಬಾರದೇ ಇದ್ದುದರಿಂದ ತೀವ್ರ ಆತಂಕಗೊಂಡ ಆಕೆ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ:ಅಪರೂಪದಲ್ಲಿ ಅಪರೂಪದ ತೀರ್ಪು: ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದ ಹೈಕೋರ್ಟ್, ಕಾರಣ? - Odisha HC Sensational Verdict

Last Updated : Jul 3, 2024, 8:34 AM IST

ABOUT THE AUTHOR

...view details