ಕರ್ನಾಟಕ

karnataka

ETV Bharat / bharat

3 ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾನೂನು ತಜ್ಞರು ಹೇಳಿದ್ದೇನು? - New Criminal Laws - NEW CRIMINAL LAWS

ಸೋಮವಾರ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿದೆ. ಈ ಕಾನೂನುಗಳ ಕುರಿತು ಕಾನೂನು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

3 ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾನೂನು ತಜ್ಞರು ಹೇಳಿದ್ದೇನು
3 ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾನೂನು ತಜ್ಞರು ಹೇಳಿದ್ದೇನು (ANI)

By Sumit Saxena

Published : Jul 1, 2024, 11:05 PM IST

ನವದೆಹಲಿ: ಇಂದಿನಿಂದ ಐತಿಹಾಸಿಕ ಪುಟವೊಂದು ತೆರೆದುಕೊಂಡಿದೆ. ದೇಶವು ತನ್ನ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಅಧಿಕೃತವಾಗಿ ಇಂದಿನಿಂದ ಪಡೆದುಕೊಂಡಿದೆ. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ ಶತಮಾನದಷ್ಟು ಹಳೆಯದಾದ ವಸಾಹತುಶಾಹಿ ಯುಗದ ಕಾನೂನುಗಳನ್ನು ಬದಲಿಸಿ ಹೊಸ ಹಿಂದೂ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಮೂರು ಹೊಸ ಕ್ರಿಮಿನಲ್ ಕಾನೂನುಗಳು ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC), ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಬದಲಿಸಿ ಹಿಂದೂ ಭಾರತೀಯ ದಂಡ ಸಂಹಿತೆ ಜಾರಿಗೆ ತರಲಾಗಿದೆ.

ಹೊಸ ಕಾನೂನುಗಳು ಹೊರಬಂದಂತೆ, ಇದು ಸ್ವಲ್ಪ ಮಟ್ಟಿಗೆ ಅನಿಶ್ಚಿತತೆಗೆ ಕಾರಣವಾಗಬಹುದು. ದೇಶಾದ್ಯಂತ ವಿವಿಧ ನ್ಯಾಯಾಲಯಗಳ ಮುಂದೆ ವಕೀಲರು ಪ್ರಕರಣಗಳನ್ನು ವಾದಿಸಿದಾಗ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಸುಧಾರಿತ ಸಂಹಿತೆಗಳಿಗೆ ಸಂಬಂಧಿಸಿದಂತೆ ಕಾನೂನು ತಜ್ಞರ ಅಭಿಪ್ರಾಯವನ್ನು ಇಲ್ಲಿ ಸಂಗ್ರಹಿಸಲಾಗಿದೆ.

ವಕೀಲರಿಗೆ ಸವಾಲಾಗಿರುವ ಸುಧಾರಿತ ಸಂಹಿತೆಗಳ ಕುರಿತು ಹಿರಿಯ ವಕೀಲ ರಾಕೇಶ್ ದ್ವಿವೇದಿಮಾತನಾಡಿದ್ದಾರೆ. “ಹೊಸ ಕ್ರಿಮಿನಲ್ ಕಾನೂನುಗಳ ಜಾರಿಯಿಂದ ಉಂಟಾಗುವ ಯಾವುದೇ ಸವಾಲನ್ನು ಎದುರಿಸಲು ವಕೀಲರು ಅಸಮರ್ಥರಾಗಿದ್ದಾರೆಂದು ನಾನು ಭಾವಿಸುವುದಿಲ್ಲ. ಕಳೆದ ಹಲವಾರು ದಶಕಗಳಿಂದ ನಾವು ವಿವಿಧ ಕ್ಷೇತ್ರಗಳಲ್ಲಿ ಹೊಸ ಕಾನೂನುಗಳನ್ನು ಎದುರಿಸುತ್ತಿದ್ದೇವೆ. 1950 ರಲ್ಲಿ ಸಂವಿಧಾನವೇ ಹೊಸದಾಗಿತ್ತು. ಹಾಗಾಗಿ ಯಾವುದೇ ತೊಂದರೆ ಇಲ್ಲ" ಎಂದು ರಾಕೇಶ್​ ದ್ವಿವೇದಿ ಹೇಳಿದ್ದಾರೆ.

"ಇದಲ್ಲದೇ, ಕ್ರಿಮಿನಲ್ ಕಾನೂನಿನ ಮೂಲಭೂತ ತತ್ವಗಳು ಈ ಬಗ್ಗೆ ಮಾರ್ಗದರ್ಶನ ನೀಡುತ್ತವೆ. ನ್ಯಾಯಾಲಯಗಳು ಹೊಸ ಸಮಸ್ಯೆಗಳನ್ನು ನಿಭಾಯಿಸಲು ಸುಸಜ್ಜಿತವಾಗಿವೆ. ಇತ್ತೀಚಿನ ದಿನಗಳಲ್ಲಿ, ಅನುವಾದಗಳು ವೇಗ ಪಡೆದುಕೊಂಡಿವೆ. ದಕ್ಷಿಣದ ರಾಜ್ಯಗಳು ಇಂಗ್ಲಿಷ್ ಅನ್ನು ಮಾತನಾಡುತ್ತವೆ ಮತ್ತು ಅದರ ಬಳಕೆಗೆ ಒಲವು ಹೊಂದಿವೆ. ವೈಯಕ್ತಿಕವಾಗಿ, ನಾನು ಹೊಸ ಕಾನೂನುಗಳನ್ನು ಸ್ವಾಗತಿಸುತ್ತೇನೆ. ” ಎಂದು ದ್ವಿವೇದಿ ಹೇಳಿದ್ದಾರೆ.

ಹಿರಿಯ ವಕೀಲ ಸಂಜಯ್ ಹೆಗ್ಡೆ ಪ್ರತಿಕ್ರಿಯಿಸಿದ್ದು, ಹೊಸ ಕಾನೂನುಗಳ ಅಧ್ಯಯನ ಮತ್ತು ವಾಸ್ತವಕ್ಕೆ ಹೊಂದಿಕೊಳ್ಳುವ ಸವಾಲಿಗೆ ವಕೀಲರು ಮತ್ತು ನ್ಯಾಯಾಧೀಶರು ಇಬ್ಬರೂ ಒಂದೇ ಎಂಬುದರಲ್ಲಿ ಸಂಶಯವಿಲ್ಲ. "ಆದಾಗ್ಯೂ ಕೆಲವು ನಿಬಂಧನೆಗಳಲ್ಲಿ ಬಳಸಲಾದ ಅಸ್ಪಷ್ಟ ಮತ್ತು ಮಿತಿಮೀರಿದ ಭಾಷೆಯಿಂದ ಸಮಸ್ಯೆಗಳು ಉದ್ಭವಿಸುತ್ತವೆ, ಇದು ಅನಿಶ್ಚಿತತೆಗೆ ಕಾರಣವಾಗುತ್ತದೆ. ಈ ಸಮಸ್ಯೆಗಳು ವ್ಯವಸ್ಥೆಯ ಮೂಲಕ ಸಾಗುತ್ತವೆ ಮತ್ತು ದಶಕಗಳ ದಾವೆಗಳ ನಂತರ ಮಾತ್ರ ಪರಿಹರಿಸಲ್ಪಡುತ್ತವೆ. ಇತ್ಯರ್ಥಗೊಂಡ ಕಾನೂನು, ತಕ್ಷಣವೇ ಗ್ರಹಿಸಲಾಗದ ಪರಿಣಾಮಗಳನ್ನು ಹೊಂದಿದೆ. ಆದರೆ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ" ಎಂದು ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಹಳೆಯ IPC, CrPC, ಮತ್ತು ಮೂರು ಹೊಸ ಕಾನೂನುಗಳ ಬಗ್ಗೆ ಹಿರಿಯ ವಕೀಲ ಸುನಿಲ್ ಫರ್ನಾಂಡಿಸ್ಮಾತನಾಡಿದ್ದಾರೆ “ನಿಸ್ಸಂದೇಹವಾಗಿ ನಾನು ಮೂರು ಕ್ರಿಮಿನಲ್ ಕಾನೂನುಗಳ ಬಗ್ಗೆ ತರಾತುರಿ ಅನುಷ್ಠಾನದಿಂದಾಗಿ ಬಹಳಷ್ಟು ಸಮಸ್ಯೆಗಳನ್ನು ನಿರೀಕ್ಷಿಸುತ್ತೇನೆ. ಕಾನೂನುಗಳು, ವಕೀಲರಿಗೆ ಮಾತ್ರವಲ್ಲದೆ ನ್ಯಾಯಾಧೀಶರು, ಪೊಲೀಸರು ಮತ್ತು ಸಾರ್ವಜನಿಕರಿಗೂ ಸಹ ಇದರಿಂದ ಕೆಲ ಕಾಲ ಗೊಂದಲ ಉಂಟಾಗುವುದರಲ್ಲಿ ಯಾವುದೇ ಸಂದೇಶವಿಲ್ಲ

ಈ ಮೂರು ಕಾನೂನುಗಳಲ್ಲಿ ಹೊಸದೇನೂ ಇಲ್ಲ ಮತ್ತು ಸರಿಸುಮಾರು 90 ಪ್ರತಿಶತದಷ್ಟು ಹೊಸ ಕಾನೂನುಗಳು ಹಳೆಯ ಕಾನೂನುಗಳ ಪುನರುಜ್ಜೀವನವಾಗಿದೆ ಮತ್ತು ವಿಭಾಗಗಳನ್ನು ಮಾತ್ರ ನೆನಪಿಸಿಕೊಳ್ಳಲಾಗುತ್ತದೆ, ಇದು ಎಲ್ಲಾ ಮಧ್ಯಸ್ಥಗಾರರಿಗೆ ಪ್ರಚಂಡ ಮತ್ತು ಅನಗತ್ಯ ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.

ನೀವು ಎಲ್ಲಾ ಕ್ರಿಮಿನಲ್ ಕಾನೂನುಗಳನ್ನು ರದ್ದುಗೊಳಿಸಿ ಹೊಸ ಕಾನೂನುಗಳನ್ನು ತರುವ ಅಗತ್ಯವಿಲ್ಲ. ಸಮುದಾಯ ಸೇವೆ ಇತ್ಯಾದಿ ಕ್ರಮಗಳನ್ನು ಪರಿಚಯಿಸಲು, ಅವುಗಳನ್ನು ಅಸ್ತಿತ್ವದಲ್ಲಿರುವ ಶಾಸನಗಳಲ್ಲಿ ತಿದ್ದುಪಡಿಗಳ ಮೂಲಕ ಪರಿಚಯಿಸಬಹುದಿತ್ತು. ಈ ಎಲ್ಲಾ ದಶಕಗಳಿಂದ ಸುಪ್ರೀಂ ಕೋರ್ಟ್ ತನ್ನ ತೀರ್ಪುಗಳ ಮೂಲಕ ಇತ್ಯರ್ಥಪಡಿಸಿದ ಕಾನೂನುಗಳು ಈ ಹೊಸ ಕಾನೂನುಗಳಿಂದ ನಿಷ್ಪರಿಣಾಮಕಾರಿಯಾಗುತ್ತವೆ ಎ.ದಿ ಫರ್ನಾಂಡಿಸ್​ ಹೇಳಿದ್ದಾರೆ.

ಜುಲೈ 1 ರಿಂದ ಜಾರಿಗೆ ಬಂದಿರುವ ಹೊಸ ಕ್ರಿಮಿನಲ್ ಕಾನೂನುಗಳು ಸದ್ಯಕ್ಕೆ ದೇಶದ ವಕೀಲರು ಮತ್ತು ನ್ಯಾಯಾಲಯಗಳಿಗೆ ಮತ್ತು ಮುಖ್ಯವಾಗಿ ಪೊಲೀಸರಿಗೆ ಸವಾಲಾಗಿರುವುದರಲ್ಲಿ ಯಾವುದೇ ಸಂದೇಶವಿಲ್ಲ. ಹೊಸ ಕಾನೂನುಗಳ ಅನುಷ್ಠಾನವು ಪ್ರಸ್ತುತ ಎರಡು ಸಮಾನಾಂತರಗಳನ್ನು ಸೃಷ್ಟಿಸಿದೆ ಎಂದು ಹಿರಿಯ ವಕೀಲ ಬಲ್ಬೀರ್ ಸಿಂಗ್ ಹೇಳಿದ್ದಾರೆ.

"ಆದಾಗ್ಯೂ, ಹೊಸ ಕಾನೂನುಗಳಲ್ಲಿ ಕ್ರಿಮಿನಲ್ ಕಾನೂನಿನ ತತ್ವವು ಅಖಂಡವಾಗಿ ಉಳಿದಿದೆ ಮತ್ತು ಕೆಲವು ಹೊಸ ನಿಬಂಧನೆಗಳ ಪರಿಚಯವು ಕೆಲವು ಸಣ್ಣ ಅಪರಾಧಗಳ ತ್ವರಿತ ವಿಲೇವಾರಿಗೆ ಸಹಾಯ ಮಾಡುತ್ತದೆ. ನಮ್ಮ ದೇಶವು ಈ ಹಿಂದೆ ಹಳೆಯ ಕಂಪನಿಗಳ ಕಾಯಿದೆ, 1956 ರಿಂದ ಹೊಸ ಕಂಪನಿಗಳ ಕಾಯಿದೆ, 2013 ಗೆ ಪರಿವರ್ತನೆಯನ್ನು ಕಂಡಿದೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ ಈ ಬದಲಾವಣೆಯನ್ನು ನಿಭಾಯಿಸಲು ಎಲ್ಲಾ ಪಾಲುದಾರರು ಸಜ್ಜುಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು" ಎಂದು ಸಿಂಗ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕಾರಂಜಾವಾಲಾ ಮತ್ತು ಕಂಪನಿಯ ಪ್ರಿನ್ಸಿಪಾಲ್ ಅಸೋಸಿಯೇಟ್, ನಿಹಾರಿಕಾ ಕರಂಜಾವಾಲಾಹೊಸ ಕಾನೂನಿನ ಬಗ್ಗೆ ಮಾತನಾಡಿ, "ಇಂತಹ ಕಾನೂನುಗಳ ಪ್ರಮುಖ ಕೂಲಂಕಷ ಪರೀಕ್ಷೆಯೊಂದಿಗೆ, ವ್ಯವಸ್ಥಾಪನಾ ಅಡೆತಡೆಗಳು ಅನಿವಾರ್ಯವಾಗಿದೆ ಮತ್ತು ಅನುಷ್ಠಾನದಲ್ಲಿನ ಸಮಸ್ಯೆಗಳನ್ನು ತಪ್ಪಿಸಲು ಸಮರ್ಥವಾಗಿ ಮತ್ತು ತ್ವರಿತವಾಗಿ ವ್ಯವಹರಿಸಬೇಕಾದ ಅಗತ್ಯತೆ ಇದೆ. ಪ್ರಾದೇಶಿಕ ಭಾಷೆಗಳಿಗೆ ಅನುವಾದವು ಅಂತಹ ಒಂದು ಅಡಚಣೆಗಳಲ್ಲಿ ಒಂದಾಗಿದೆ. ಆದಾಗ್ಯೂ, ಹೊಸ ಶಾಸನಗಳ ನಿಜವಾದ ಮತ್ತು ನಿಖರವಾದ ಭಾಷಾಂತರಗಳನ್ನು ಮಾಡಲಾಗಿದೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಕ್ರಮಗಳನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ ಎಂದು ಅವರು ಇದೇ ವೇಳೆ ಒತ್ತಿ ಹೇಳಿದ್ದಾರೆ. ಒಂದೊಮ್ಮೆ ಹಾಗೆ ಮಾಡಲು ವಿಫಲವಾದರೆ ಖಂಡಿತವಾಗಿಯೂ ಹೊಸ ಕಾನೂನುಗಳ ಅನುಷ್ಠಾನಕ್ಕೆ ಅಡಚಣೆ ಆಗಲಿದೆ ಎಂದಿದ್ದಾರೆ.

ಇದನ್ನೂ ಓದಿ:ಹೊಸ ಕ್ರಿಮಿನಲ್​ ಕಾನೂನಗಳಡಿ ಯುಪಿಯಲ್ಲಿ ಮೊದಲ ಪ್ರಕರಣ ದಾಖಲು - New Criminal Law

ABOUT THE AUTHOR

...view details