ಕರ್ನಾಟಕ

karnataka

ETV Bharat / bharat

58 ಕ್ಷೇತ್ರಗಳಿಗೆ ಮತದಾನ ಆರಂಭ: ವಿದೇಶಾಂಗ ಸಚಿವ, ಕೇಂದ್ರ ಸಚಿವರಿಂದ ಮೊದಲ ಮತ - POLLING FOR LOK SABHA ELECTION - POLLING FOR LOK SABHA ELECTION

ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಆರಂಭವಾಗಿದೆ. ವಿವಿಧೆಡೆ ಜನರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ.

8 ರಾಜ್ಯಗಳ 58 ಕ್ಷೇತ್ರಗಳಿಗೆ ಮತದಾನ ಆರಂಭ
8 ರಾಜ್ಯಗಳ 58 ಕ್ಷೇತ್ರಗಳಿಗೆ ಮತದಾನ ಆರಂಭ (ETV Bharat)

By PTI

Published : May 25, 2024, 8:05 AM IST

Updated : May 25, 2024, 11:16 AM IST

ನವದೆಹಲಿ:ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನ ಆರಂಭವಾಗಿದೆ. 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಕ್ಷೇತ್ರಗಳಿಗೆ ಜನರು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಮತದಾನಕ್ಕೆ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಮಾಡಿದ್ದು, ಇಂದು ಸಂಜೆ 7 ಗಂಟೆವರೆಗೂ ವೋಟ್​ ಮಾಡುವ ಅವಕಾಶ ಇದೆ.

ದೆಹಲಿಯ ಎಲ್ಲ 7 ಕ್ಷೇತ್ರಗಳು, ಬಿಹಾರದ 8, ಹರಿಯಾಣದ ಎಲ್ಲ 10 ಕ್ಷೇತ್ರ, ಜಾರ್ಖಂಡ್‌ನ 4, ಒಡಿಶಾದ 6, ಉತ್ತರ ಪ್ರದೇಶದ 14, ಪಶ್ಚಿಮ ಬಂಗಾಳದ 8, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಏಕೈಕ ಲೋಕಸಭಾ ಸ್ಥಾನಕ್ಕೆ ಮತದಾನ ಆರಂಭವಾಗಿದೆ.

ವಿದೇಶಾಂಗ ಸಚಿವ ಎಸ್​.ಜೈಶಂಕರ್​, ಹರಿಯಾಣ ಸಿಎಂ ನಯಾಬ್​ ಸಿಂಗ್​, ಕೇಂದ್ರ ಸಚಿವ ಹರ್​ದೀಪ್​ ಸಿಂಗ್​ ಪುರಿ, ಹರಿಯಾಣದ ಮಾಜಿ ಸಿಎಂ ಮತ್ತು ಬಿಜೆಪಿ ಅಭ್ಯರ್ಥಿಯಾಗಿರುವ ಮನೋಹರ್​ಲಾಲ್ ಖಟ್ಟರ್​ ಅವರು ನಿಗದಿತ ಮತಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು.

ಮತದಾನ ಮಾಡಿದ ನಂತರ ಮಾತನಾಡಿದ ಕರ್ನಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೋಹರ್ ಲಾಲ್ ಖಟ್ಟರ್ ಅವರು, "ನಾನು ಮತವನ್ನು ಚಲಾಯಿಸಿದ್ದೇನೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲು ಜನರಲ್ಲಿ ಮನವಿ ಮಾಡುತ್ತೇನೆ. ಮೊದಲ ವೋಟರ್​ ಆಗಿ ಅವರು ಮತ ನೀಡಿದರು.

ಮತದಾನಕ್ಕಾಗಿ ಪ್ರಧಾನಿ ಮೋದಿ ಮನವಿ:ನಡೆಯುತ್ತಿರುವ 6ನೇ ಹಂತದ ಮತದಾನದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, 2024ರ ಲೋಕಸಭೆ ಚುನಾವಣೆಯ 6ನೇ ಹಂತದ ಚುನಾವಣೆಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ. ಜನರು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಮತ್ತು ಸಕ್ರಿಯವಾಗಿದ್ದಾಗ ಪ್ರಜಾಪ್ರಭುತ್ವದ ಅಸ್ತಿತ್ವ ಬೆಳಗುತ್ತದೆ. ಮಹಿಳಾ ಮತದಾರರು ಮತ್ತು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ವಿಶೇಷವಾಗಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಮೊದಲ ಮತ ನೀಡಿದ ಜೈಶಂಕರ್​:ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಅವರು, ದೆಹಲಿಯ ಮತಗಟ್ಟೆಯಲ್ಲಿ ಮೊದಲ ಮತದಾರರಾಗಿ ವೋಟ್​ ಮಾಡಿದರು. ಬೆರಳಿಗೆ ಹಾಕಿದ ಶಾಯಿಯ ಗುರುತನ್ನು ತೋರಿಸಿ ಮಾತನಾಡಿದ ಅವರು, ನಾನು ಈಗಷ್ಟೇ ಮತ ಚಲಾಯಿಸಿದ್ದೇನೆ. ನಾನು ಈ ಬೂತ್‌ನಲ್ಲಿ ಮೊದಲ ಪುರುಷ ಮತದಾರನಾಗಿದ್ದೇನೆ. ಮತದಾನ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕವಾಗಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಬೇಕೆಂದು ನಾವು ಕೋರುತ್ತೇನೆ. ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:6ನೇ ಹಂತದ ಲೋಕ ಸಮರ: 58 ಕ್ಷೇತ್ರಗಳಿಗೆ ಮತದಾನ; ಪ್ರಮುಖ ಅಭ್ಯರ್ಥಿಗಳು ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ... - Lok Sabha Election 2024

Last Updated : May 25, 2024, 11:16 AM IST

ABOUT THE AUTHOR

...view details