ಕರ್ನಾಟಕ

karnataka

ETV Bharat / bharat

ಸೈಬರ್ ವಂಚಕರ ವಿರುದ್ಧ 'ಆಪರೇಷನ್ ತಿರೈನೀಕು': ತಮಿಳುನಾಡು ಪೊಲೀಸರಿಂದ 70 ಶಂಕಿತರ ಬಂಧನ - CRACKDOWN ON CYBERCRIMINALS

ತಮಿಳು ನಾಡು ಪೊಲೀಸರು ವಿಶೇಷ ಕಾರ್ಯಾಚರಣೆಯಲ್ಲಿ 70 ಆರೋಪಿಗಳನ್ನು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Dec 9, 2024, 12:58 PM IST

ಚೆನ್ನೈ: ಸೈಬರ್ ಕ್ರಿಮಿನಲ್​ಗಳ ವಿರುದ್ಧ ತಮಿಳುನಾಡು ಪೊಲೀಸರು ಸಮರ ಸಾರಿದ್ದು, ಆರೋಪಿಗಳ ಬಂಧನಕ್ಕೆ ರಾಜ್ಯಾದ್ಯಂತ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ. 'ಆಪರೇಷನ್ ತಿರೈನೀಕು' ಎಂದು ಹೆಸರಿಸಲಾದ ಈ ಕಾರ್ಯಾಚರಣೆಯ ಭಾಗವಾಗಿ ಇಲ್ಲಿಯವರೆಗೆ ರಾಜ್ಯಾದ್ಯಂತ ದಾಖಲಾದ 135 ದೂರುಗಳಿಗೆ ಸಂಬಂಧಿಸಿದಂತೆ 70 ಸೈಬರ್ ವಂಚಕರನ್ನು ಬಂಧಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ ರಚಿಸಲಾದ ವಿಶೇಷ ತಂಡಗಳು ಈ ವಿಶೇಷ ಕಾರ್ಯಾಚರಣೆಯನ್ನು ನಡೆಸಿದ್ದು, ಇದನ್ನು ರಾಜ್ಯ ಸೈಬರ್ ಅಪರಾಧ ವಿಭಾಗ (ಸಿಸಿಡಬ್ಲ್ಯೂ) ಯೋಜಿಸಿದೆ. ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಎಡಿಜಿಪಿ (ಸೈಬರ್ ಅಪರಾಧ) ಸಂದೀಪ್ ಮಿತ್ತಲ್ ವಹಿಸಿದ್ದಾರೆ.

ರಾಜ್ಯದಲ್ಲಿ ಸಂಘಟಿತ ಸೈಬರ್ ಅಪರಾಧ ಜಾಲಗಳನ್ನು ನಿರ್ಮೂಲನೆ ಮಾಡುವಲ್ಲಿ ಈ ಬಂಧನಗಳು ಮಹತ್ವದ ಯಶಸ್ಸಾಗಿವೆ ಎಂದು ತಮಿಳುನಾಡು ಪೊಲೀಸರು ಹೇಳಿಕೆಯಲ್ಲಿ ಬಣ್ಣಿಸಿದ್ದಾರೆ. "ಈ ಕಾರ್ಯಾಚರಣೆಯು ಭಾರತದಲ್ಲಿ ಈ ರೀತಿಯ ಅತಿದೊಡ್ಡ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಇದು ಸೈಬರ್ ಕ್ರೈಮ್ ನೆಟ್ ವರ್ಕ್​ನ ಬೆನ್ನೆಲುಬನ್ನೇ ಮುರಿಯಲಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಸೈಬರ್ ಅಪರಾಧ ವರದಿ (ಎನ್​ಸಿಆರ್​ಪಿ) ಪೋರ್ಟಲ್, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (ಐ 4 ಸಿ) ಡೇಟಾಬೇಸ್​ಗಳು ಮತ್ತು ಸೈಬರ್ ಅಪರಾಧ ನೆಟ್ ವರ್ಕ್​​ಗಳ ಹಣಕಾಸು ದತ್ತಾಂಶ ವಿಶ್ಲೇಷಣೆಯನ್ನು ಬಳಸಿಕೊಂಡು ಆರೋಪಿಗಳ ಪ್ರೊಫೈಲಿಂಗ್ ತಯಾರಿಸಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.

2024 ರ ಜನವರಿ ಮತ್ತು ಆಗಸ್ಟ್ ನಡುವೆ ಒಟ್ಟು 1,679 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿನ 1,589 ದೂರುಗಳು ಹಣಕಾಸು ವಂಚನೆಗಳಿಗೆ ಸಂಬಂಧಿಸಿವೆ. ಈ ಹಗರಣಗಳಿಂದ ಜನತೆ ಸುಮಾರು 189 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ಗ್ರೇಟರ್ ಚೆನ್ನೈ ನಗರ ಪೊಲೀಸರು ವರದಿ ಮಾಡಿದ್ದಾರೆ.

ಕೊಯಮತ್ತೂರಿನಲ್ಲಿ ವಂಚಕರು ಈ ವರ್ಷವೊಂದರಲ್ಲೇ ಜನತೆಯ 93 ಕೋಟಿ ರೂ. ದೋಚಿದ್ದಾರೆ. ಈ ವಂಚನೆಯ ಪ್ರಮಾಣ 2021 ರಲ್ಲಿ 3 ಕೋಟಿ ರೂ., 2022 ರಲ್ಲಿ 13 ಕೋಟಿ ರೂ. ಮತ್ತು 2023 ರಲ್ಲಿ 48 ಕೋಟಿ ರೂ. ಆಗಿತ್ತು ಎಂದು ನಗರ ಪೊಲೀಸ್ ಆಯುಕ್ತ ವಿ ಬಾಲಕೃಷ್ಣನ್ ಹೇಳಿದರು.

ನವೆಂಬರ್ 2024 ರ ವೇಳೆಗೆ 98 ಕೋಟಿ ರೂ.ಗಳಷ್ಟು ವಂಚನೆಯನ್ನು ಒಳಗೊಂಡ ದೂರುಗಳು ಬಂದಿವೆ. ಇದರಲ್ಲಿನ ಸುಮಾರು 50 ಪ್ರತಿಶತದಷ್ಟು ಮೊತ್ತವನ್ನು (49.25 ಕೋಟಿ ರೂ.) ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿ ವಾಪಸು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯವ್ಯಾಪಿ, ಸೈಬರ್ ಕ್ರೈಮ್ ಘಟಕಕ್ಕೆ ಈ ವರ್ಷ 6,798 ದೂರುಗಳು ಬಂದಿದ್ದು, 255 ಎಫ್ಐಆರ್ ದಾಖಲಿಸಲಾಗಿದೆ. ಒಟ್ಟು 93.04 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಸಂತ್ರಸ್ತರು ದೂರು ಸಲ್ಲಿಸಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 41 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ 7 ಜನರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.

ಇದನ್ನೂ ಓದಿ: ಕೋಚಿಂಗ್​ ಸೆಂಟರ್​ ಕೋಟಾ ಖಾಲಿ ಖಾಲಿ: ಫಜೀತಿ ತಂದ ವಿದ್ಯಾರ್ಥಿಗಳ 'ಆತ್ಮಹತ್ಯೆ'

ABOUT THE AUTHOR

...view details