ಕರ್ನಾಟಕ

karnataka

ETV Bharat / bharat

ಸೂರ್ಯಪೇಟ್​ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ; ಐವರು ಸಾವು - ODISHA MIGRANT WORKERS DIED

ಖಾಸಗಿ ಬಸ್​ ಹೆದ್ದಾರಿ ಬಳಿ ನಿಲ್ಲಿಸಿದ ಮರಳು ತುಂಬಿಕೊಂಡು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ನತದೃಷ್ಟ ಬಸ್​​​​​​​​​ ಒಡಿಶಾದಿಂದ ಹೈದರಾಬಾದ್​ಗೆ ಉದ್ಯೋಗದ ನಿಮಿತ್ತ ಬರುತ್ತಿದ್ದ ವಲಸಿಗ ಕಾರ್ಮಿಕರನ್ನು ಕರೆದುಕೊಂಡು ಬರುತ್ತಿತ್ತು.

odisha-migrant-workers-died-in-road-accident-in-suryapet-district
ಅಪಘಾತದ ದೃಶ್ಯ (ಈಟಿವಿ ಭಾರತ್​​)

By ETV Bharat Karnataka Team

Published : Jan 10, 2025, 3:47 PM IST

ಸೂರ್ಯಪೇಟ್​ (ತೆಲಂಗಾಣ):ಸೂರ್ಯಪೇಟ್​- ಖಮ್ಮಂ ಹೆದ್ದಾರಿಯಲ್ಲಿನ ಚಿವೆನ್ಲಾ ಮಂಡದಲ್ಲಿನ ಆಲಿಪುರಂನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ

ಖಾಸಗಿ ಬಸ್​ ಹೆದ್ದಾರಿ ಬಳಿ ನಿಲ್ಲಿಸಿದ ಮರಳು ತುಂಬಿದ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬಸ್​ನಲ್ಲಿ ಒಡಿಶಾದಿಂದ ಹೈದರಾಬಾದ್​ಗೆ ಉದ್ಯೋಗಕ್ಕಾಗಿ ವಲಸಿಗ ಕಾರ್ಮಿಕರನ್ನು ಕರೆತರಲಾಗುತ್ತಿತ್ತು.

ಸಾವನ್ನಪ್ಪಿದ ಐವರು ಒಡಿಶಾದ ವಲಸಿಗ ಕಾರ್ಮಿಕರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡವನ್ನು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್​ ವೈದ್ಯಕೀಯ ಘಟಕಕ್ಕೆ ಸ್ಥಳಾಂತರಿಸಲಾಗಿದೆ.

ಗುರುವಾರ 2.30ಕ್ಕೆ ಒಡಿಶಾದ ನೌಪಡ ಜಿಲ್ಲೆಯಲ್ಲಿನ ಸಿನಪಲ್ಲಿಯಿಂದ ಈ ಬಸ್​ ಹೈದರಾಬಾದ್​ಗೆ ಪ್ರಯಾಣಿಸುತ್ತಿತ್ತು. ಇನ್ನು ಕೊವ್ವುರ್​ನಿಂದ ಕೊಹಿರ್​​ಗೆ ಸಾಗುತ್ತಿದ್ದ ಮರಳು ತುಂಬಿದ ಲಾರಿ ಟೈರ್​ ಬಸ್ಟ್​ ಆದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಆದರೆ, ವೇಗವಾಗಿ ಬರುತ್ತಿದ್ದ ಬಸ್​ ಈ ಲಾರಿಗೆ ಗುದ್ದಿದೆ.

ಇದನ್ನೂ ಓದಿ: ಭೀಕರ ಕೊಲೆ! ನೆಲದ ಮೇಲೆ ದಂಪತಿ, ಬೆಡ್​ಬಾಕ್ಸ್​​ನಲ್ಲಿ 1 ವರ್ಷದ ಮಗು ಸೇರಿ ಮೂವರು ಬಾಲಕಿಯರ ಶವ ಪತ್ತೆ

ABOUT THE AUTHOR

...view details