ಮಥುರಾ: ಶ್ರೀ ಹಿತ್ ರಾಧಾ ಕೇಲಿ ಕುಂಜ್ ಟ್ರಸ್ಟ್ ಭಕ್ತರಿಗೆ 7 ಅಂಶಗಳ ಸಲಹೆಯೊಂದನ್ನು ನೀಡಿದೆ. ಸಂತ ಪ್ರೇಮಾನಂದ ಮಹಾರಾಜರ ಹೆಸರಿನಲ್ಲಿ ಯಾವುದೇ ರೀತಿಯ ವಂಚನೆ ನಡೆಯದಂತೆ ಭಕ್ತರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಜನರನ್ನು ಜಾಗೃತಗೊಳಿಸಲಾಗಿದೆ.
ಸಂತ ಪ್ರೇಮಾನಂದ ಮಹಾರಾಜರಿಗೆ ಕೋಟಿಗಟ್ಟಲೆ ಅನುಯಾಯಿಗಳಿದ್ದಾರೆ. ಅವರ ದರ್ಶನಕ್ಕಾಗಿ ಅಪಾರ ಸಂಖ್ಯೆಯ ಭಕ್ತರು ಆಶ್ರಮಕ್ಕೆ ಆಗಮಿಸುತ್ತಾರೆ. ಅವರ ಸಂಭಾಷಣೆಗಳು ಮತ್ತು ಸತ್ಸಂಗಗಳು ಯೂಟ್ಯೂಬ್‌ನಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿವೆ. ಭಕ್ತರು ನಿರಂತರವಾಗಿ ಆಶ್ರಮ ಭೇಟಿ ನೀಡುತ್ತಾರೆ ಮತ್ತು ಪ್ರಶ್ನೆಗಳ ಮೂಲಕ ತಮ್ಮ ಅಧ್ಯಾತ್ಮಿಕ ಕುತೂಹಲಗಳ ಬಗ್ಗೆ ತಿಳಿದುಕೊಳ್ಳುತ್ತಿರುತ್ತಾರೆ. ಮಹಾರಾಜರು ಅತ್ಯಂತ ಸರಳವಾದ ಭಾಷೆಯಲ್ಲಿ ಭಕ್ತರಿಗೆ ತಮ್ಮ ಮಾರ್ಗದರ್ಶನ ನೀಡುವ ಮೂಲಕ ಭಕ್ತಿ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತಾರೆ.
ಹೌದು ಈ ಜನ ಮನ್ನಣೆಯೇ ಈಗ ಸಂಕಷ್ಟವನ್ನು ತಂದೊಡ್ಡಿದೆ. ಕೆಲವರು ಸಂತರ ಜನಪ್ರಿಯತೆಯ ಲಾಭ ಪಡೆದು ಜನರನ್ನು ವಂಚಿಸಲು ಯತ್ನಿಸುತ್ತಿದ್ದಾರೆ. ಶ್ರೀ ಹಿತ್ ರಾಧಾ ಕೆಲ್ಲಿ ಕುಂಜ್ ಟ್ರಸ್ಟ್ ಈ ಬಗ್ಗೆ ಭಕ್ತರಿಗೆ ಕೆಲವು ಸಲಹೆಗಳನ್ನು ನೀಡಿದೆ.
ಟ್ರಸ್ಟ್ನ 7 ಸಲಹೆಗಳು ಹೀಗಿವೆ:
- 1- ಶ್ರೀ ಹಿತ ರಾಧಾ ಕೆಲ್ಲಿ ಕುಂಜ್ ಟ್ರಸ್ಟ್ ಆಶ್ರಮ ಮಥುರಾದ ವೃಂದಾವನ (ಉತ್ತರ ಪ್ರದೇಶ) ಬಿಟ್ಟು ಬೇರೆಲ್ಲೂ ಯಾವುದೇ ಶಾಖೆಯನ್ನು ಹೊಂದಿಲ್ಲ.
- 2- ಆಶ್ರಮದಿಂದ ಯಾವುದೇ ರೀತಿಯ ಭೂಮಿ, ಪ್ಲಾಟ್, ಕಟ್ಟಡ ನಿರ್ಮಾಣ ಇತ್ಯಾದಿಗಳನ್ನು ಮಾರಾಟ ಮಾಡುವುದಿಲ್ಲ.
- 3- ಆಶ್ರಮದಲ್ಲಿ ಎಲ್ಲಿಯೂ ಹೋಟೆಲ್, ರೆಸ್ಟೋರೆಂಟ್, ಢಾಬಾ, ಯಾತ್ರಿಕರ ವಿಶ್ರಾಂತಿ ನಿಲ್ದಾಣ, ಆಸ್ಪತ್ರೆ, ಗುರುಕುಲ ಶಾಲೆ ಇಲ್ಲ.
- 4- ಆಶ್ರಮದಲ್ಲಿ ಗೋಶಾಲೆಯೂ ಇಲ್ಲ.
- 5- ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಯಾವುದೇ ರೀತಿಯ ಕಂಠಿ - ಜಪಮಾಲೆ, ಚಿತ್ರ, ಪೂಜೆ, ಆಶ್ರಮದ ಮೇಕಪ್ ವಸ್ತುಗಳ ಯಾವುದೇ ಅಂಗಡಿಗಳು ಇರುವುದಿಲ್ಲ.
- 6- ಆಶ್ರಮದಿಂದ ಯಾವುದೇ ರೀತಿಯ ಜಾಹೀರಾತುಗಳನ್ನು ಮಾಡಲಾಗುವುದಿಲ್ಲ.
- 7-ಆಶ್ರಮ ಆವರಣದಲ್ಲಿ ಖಾಸಗಿ ಸಂಭಾಷಣೆ, ಸತ್ಸಂಗ-ಕೀರ್ತನೆ, ಭಾಷಣ ಪಾಠಗಳಲ್ಲಿ ಭಾಗವಹಿಸುವುದು ಸಂಪೂರ್ಣ ಉಚಿತ. ಇದಕ್ಕಾಗಿ ಒಂದು ದಿನ ಮುಂಚಿತವಾಗಿ ಆಶ್ರಮಕ್ಕೆ ಬಂದು ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ಆಶ್ರಮದ ಸೇವಾ ಭವನದಿಂದಲೇ ಮಾಹಿತಿ ಪಡೆಯಿರಿ: ಶ್ರೀ ಹಿತ ಪ್ರೇಮಾನಂದ ಗೋವಿಂದ್ ಶರಣ್ ಜಿ ಮಹಾರಾಜ್ ಮತ್ತು ಶ್ರೀ ಹಿತ ರಾಧಾ ಕೆಲ್ಲಿ ಕುಂಜ್ ಆಶ್ರಮದ ಹೆಸರನ್ನು ಸೇರಿಸುವ ಮೂಲಕ ಯಾವುದೇ ವ್ಯಕ್ತಿ/ಶಿಷ್ಯ ಪರಿಕರ್/ಸಂತ ವೇಷ ಧರಿಸಿ ಯಾವುದೇ ವಿಚಾರದಲ್ಲಿ ನಿಮ್ಮನ್ನು ದಾರಿ ತಪ್ಪಿಸಿದರೆ ಅಂತಹವರ ಬಗ್ಗೆ ಎಚ್ಚರದಿಂದಿರಿ ಎಂದು ಸಲಹೆಯ ಕೊನೆಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಹೀಗಾಗಿ ಆಶ್ರಮ ಅಥವಾ ಪ್ರೇಮಾನಂದ ಮಹಾರಾಜ ಅವರ ಹೆಸರು ಹೇಳಿಕೊಂಡು ಬರುವವರ ಬಲೆಗೆ ಬೀಳಬೇಡಿ. ಶ್ರೀ ಹಿತ ರಾಧಾ ಕೆಲ್ಲಿ ಕುಂಜ್ ಆಶ್ರಮದ ಸೇವಾ ಭವನ ಅಥವಾ ವಿಚಾರಣಾ ಕೇಂದ್ರದಿಂದ ಮಾತ್ರ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಸೂಚಿಸಲಾಗಿದೆ.