ತಿರುಪತಿಯಲ್ಲಿ ಮಹಾರಾಷ್ಟ್ರದ ಶ್ರೀಮಂತ ಕುಟುಂಬ (ETV Bharat) ಆಂಧ್ರ ಪ್ರದೇಶ:ಮಹಾರಾಷ್ಟ್ರದ ಸಿರಿವಂತ ಕುಟುಂಬವೊಂದು ಮೈಮೇಲೆ ಭಾರೀ ಪ್ರಮಾಣದ ಚಿನ್ನಾಭರಣ ಧರಿಸಿ ಇಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ್ದರು. ಮುಂಬೈನಿಂದ ತಿರುಮಲಕ್ಕೆ ಆಗಮಿಸಿದ್ದ ಮೂವರು ಸದಸ್ಯರಿದ್ದ ಈ ಕುಟುಂಬ, ದೇವರ ದರ್ಶನ ಪಡೆದರು.
ಮೈತುಂಬಾ ಚಿನ್ನಾಭರಣ ಧರಿಸಿ ದೇವಸ್ಥಾನಕ್ಕೆ ಆಗಮಿಸಿದ್ದನ್ನು ಕಂಡು ಅಲ್ಲಿದ್ದ ಭಕ್ತರು ಅಚ್ಚರಿಗೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಯಾರಿವರು?:ಪುಣೆಯ ನಾನಾ ಸಾಹೇಬ್ ವಾಗ್ಮೋರೆ ಕುಟುಂಬ ಇದಾಗಿದ್ದು, ಇಬ್ಬರು ತಲಾ 10 ಕೆ.ಜಿ ಹಾಗೂ ಮತ್ತೊಬ್ಬರು 5 ಕೆ.ಜಿ ಸೇರಿದಂತೆ ಒಟ್ಟು 15 ಕೋಟಿ ರೂ. ಮೌಲ್ಯದ ಚಿನ್ನ ಧರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಖ್ಯಾತ ಉದ್ಯಮಿಯೂ ಆಗಿರುವ ಈ ಕುಟುಂಬ, ಬಾಲಿವುಡ್ನ ಹಲವು ಚಿತ್ರ ನಿರ್ಮಾಪಕರಿಗೆ ಆರ್ಥಿಕ ಸಹಾಯ ಕೂಡ ಮಾಡಿದೆಯಂತೆ.
ಭಕ್ತರು ದೇವಸ್ಥಾನದ ಮುಂದೆ ಈ ಶ್ರೀಮಂತ ಕುಟುಂಬದೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಚಿನ್ನಾಭರಣ ಧರಿಸಿದ್ದ ಕುಟುಂಬದ ರಕ್ಷಣೆಗೆ ಸುಮಾರು 15 ಮಂದಿ ಭದ್ರತಾ ಸಿಬ್ಬಂದಿ ಆಗಮಿಸಿದ್ದರು ಎಂಬುದು ಇನ್ನೂ ವಿಶೇಷ.
ಇದನ್ನೂ ಓದಿ:ಕಡಿಮೆ ದರದಲ್ಲಿ ತಿರುಪತಿಗೆ ಹೋಗಬೇಕೆಂದು ಬಯಸಿದ್ದೀರಾ?: ಹಾಗಾದ್ರೆ ಇಲ್ಲಿದೆ ನೋಡಿ IRCTC ಬೆಸ್ಟ್ ಪ್ಯಾಕೇಜ್ - Tirupati Tour Package