ಕರ್ನಾಟಕ

karnataka

ETV Bharat / bharat

ಸಾಮೂಹಿಕ ಅತ್ಯಾಚಾರ, ತ್ರಿವಳಿ ಕೊಲೆ ಪ್ರಕರಣ: ಐವರಿಗೆ ಮರಣದಂಡನೆ, ಓರ್ವನಿಗೆ ಜೀವಾವಧಿ ಶಿಕ್ಷೆ - CHHATTISGARH GANGRAPE CASE

ಇದೊಂದು ಅಪರೂಪದಲ್ಲಿ ಅಪರೂಪ ಪ್ರಕರಣ ಆಗಿದ್ದು, ಐವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇನ್ನೋರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

korba-court-sentenced-5-accused-to-death-in-case-of-gang-rape-and-murder-of-minor-and-two-other
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Jan 21, 2025, 1:20 PM IST

ಕೊಬ್ರಾ (ಛತ್ತೀಸ್​ಗಢ) : ಬುಡಕಟ್ಟು ಸಮುದಾಯದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಐವರು ಅಪರಾಧಿಗಳಿಗೆ ಕೊಬ್ರಾ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಮತ್ತೊಬ್ಬ ಅಪರಾಧಿಗೆ ಜೀವವಾಧಿ ಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ : 2021ರಲ್ಲಿ ಪಹಡಿ ಕೊರ್ವಾ ಬುಡಕಟ್ಟು ಸಮುದಾಯಕ್ಕೆ ಸೇರಿದ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿತ್ತು. ಅಲ್ಲದೇ ಈ ಬಾಲಕಿಯ ತಂದೆ ಮತ್ತು ತಂಗಿಯನ್ನು ಕೂಡ ಹತ್ಯೆ ಮಾಡಲಾಗಿತ್ತು.

ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿದ ಫಾಸ್ಟ್​​ ಟ್ರ್ಯಾಕ್​ ಕೋರ್ಟ್,​ ಸೋಮವಾರ ಸಂಜೆ ಈ ಆದೇಶ ನೀಡಿದೆ. ಇದೊಂದು ಅಪರೂಪದಲ್ಲಿ ಅಪರೂಪ ಪ್ರಕರಣ ಆಗಿದ್ದು, ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಕುರಿತು ತೀರ್ಪು ನೀಡಿದ ನ್ಯಾಯಮೂರ್ತಿ ಮಮತಾ ಭೋಜ್ವಾನಿ, ದೈಹಿಕ ತೃಷೆ ತೀರಿಸಿಕೊಳ್ಳಲು ಅಮಾಯಕ ಮತ್ತು ದುರ್ಬಲ ಜನರನ್ನು ಕೊಲ್ಲುವುದು ಅಮಾನವೀಯ ಮತ್ತು ಕ್ರೌರ್ಯದ ಘಟನೆಯಾಗಿದೆ. ಪ್ರಜ್ಞಾವಂತ ಸಮಾಜ ಈ ಘಟನೆಯಿಂದ ಆಘಾತಗೊಂಡಿದೆ. ಜೀವಾವಧಿ ಶಿಕ್ಷೆಗಿಂತ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಆಯ್ಕೆ ಹೊರತಾಗಿ ಬೇರೆ ಆಯ್ಕೆಗಳಿಲ್ಲ ಎಂದು ತಿಳಿಸಿದರು.

ಸರ್ಕಾರಿ ವಕೀಲರಾದ ಸುನೀಲ್​ ಸಿಂಗ್ ಪ್ರಕರಣದ ಕುರಿತು ವಾದ ಮಂಡಿಸಿದರು.

ನಾಲ್ಕು ದಿನ ನರಳಿದ್ದ ಸಂತ್ರಸ್ತೆ : ಲೆಮ್ರು ಪ್ರದೇಶದಲ್ಲಿನ ಗ್ರಾಮವೊಂದರ ಮನೆಯಲ್ಲಿ ಹಸುಗಳನ್ನು ಮೇಯಿಸಿಕೊಂಡು ಈ ಕುಟುಂಬ ನೆಲೆಸಿತ್ತು. ಕುಟುಂಬಕ್ಕೆ ತಿಂಗಳಿಗೆ 8 ಸಾವಿರ ಹಾಗೂ 10 ಕೆಜಿ ಅಕ್ಕಿ ನೀಡುವುದಾಗಿ ಸಂತ್ರಮ್​ ಭರವಸೆ ನೀಡಿದ್ದ.

ಆದರೆ, ಸಂತ್ರಮ್​ ಈ ಕುಟುಂಬಕ್ಕೆ ಪ್ರಾಣಿಗಳನ್ನು ಮೇಯಿಸಿದ್ದಕ್ಕೆ ಕೇವಲ 600 ರೂ. ಹಣ ಮತ್ತು 10 ಕೆಜಿ ಅಕ್ಕಿ ನೀಡುತ್ತಿದ್ದ. ಇದರಿಂದಾಗಿ ಜನವರಿ 29ರಂದು ಕುಟುಂಬ ಕೆಲಸವನ್ನು ತೊರೆದು ಹೋಯಿತು. ಕುಟುಂಬ ಸದಸ್ಯರು ಸತ್ರೆಂಗ ಬಸ್​ ನಿಲ್ದಾಣದಲ್ಲಿ ನಿಂತಿದ್ದಾಗ ಅವರ ಬಳಿ ಬಂದ ಸಂತ್ರಮ್​, ಬೈಕ್​ನಲ್ಲಿ ಅವರನ್ನು ಮನೆಗೆ ತಲುಪಿಸುತ್ತೇನೆ ಎಂದು ಭರವಸೆ ನೀಡಿ ಹತ್ತಿಸಿಕೊಂಡಿದ್ದ.

ಬಾಲಕಿಯ ತಂದೆ ಮತ್ತು ಆತನ 16 ಮತ್ತು 4 ವರ್ಷದ ಹೆಣ್ಣುಮಕ್ಕಳನ್ನು ಬೈಕ್​ನಲ್ಲಿ ಅರಣ್ಯಕ್ಕೆ ಕರೆದುಕೊಂಡು ಹೋದ ಸಂತ್ರಮ್​, ಅಲ್ಲಿ ತನ್ನ ಐವರು ಸಹಚರರೊಂದಿಗೆ, ಬಾಲಕಿಯ ತಂದೆಯನ್ನು ಕಲ್ಲು ಮತ್ತು ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದರು. ಇದಾದ ಬಳಿಕ ಅವರನ್ನು ಅಲ್ಲಿಯೇ ಬಿಟ್ಟು ಆರು ಮಂದಿ ಹೋದರು.

ಸಾವನ್ನಪ್ಪಿದ ವ್ಯಕ್ತಿಯ ಮಗ, ತನ್ನ ತಂದೆ ಮತ್ತು ಸಹೋದರಿಯರು ಕಾಣದ ಹಿನ್ನೆಲೆ ಫೆಬ್ರವರಿ 2ರಂದು ಲೆಮ್ರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಅದೇ ದಿನ ಆರು ಮಂದಿಯನ್ನು ಬಂಧಿಸಿದ್ದರು.

ಆರೋಪಿಗಳ ಹೇಳಿಕೆ ಆಧರಿಸಿ ಕೃತ್ಯ ನಡೆದ ಸ್ಥಳಕ್ಕೆ ತಲುಪಿದರು. ಈ ವೇಳೆ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಇನ್ನು ಬದುಕಿದ್ದು, ಆಕೆಯ ತಂದೆ ಮತ್ತು 4 ವರ್ಷದ ಸಹೋದರಿ ಸಾವನ್ನಪ್ಪಿದ್ದಳು. ತಕ್ಷಣಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರು ಮುಂದಾದರು. ಆದರೆ, ಬಾಲಕಿ ಮಾರ್ಗ ಮಧ್ಯೆ ಸಾವನ್ನಪ್ಪಿದಳು.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 302 (ಕೊಲೆ), 376 (2)ಜಿ (ಸಾಮೂಹಿಕ ಅತ್ಯಾಚಾರ)ಮ ಪೋಕ್ಸೊ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ಬದ್ಲಾಪುರ್​​ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಾವಿಗೆ ಪೊಲೀಸರೇ ಹೊಣೆ: ತನಿಖಾ ವರದಿ

ABOUT THE AUTHOR

...view details