ಕರ್ನಾಟಕ

karnataka

ETV Bharat / bharat

ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್​ಗೆ​ ಮುನ್ನಡೆ; ತಾಯಿಯನ್ನು ಈಶ್ವರ ಸ್ವರೂಪ ಎಂದ ನಟಿ - Lok sabha Election Results 2024

ರಂಭಿಕ ಸುತ್ತಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿವಿಕ್ರಮಾಧಿತ್ಯ ಸಿಂಗ್​ ಅವರನ್ನು ಹಿಂದಿಕ್ಕಿ ಅವರು ಮುನ್ನಡೆ ಸಾಧಿಸಿದ್ದಾರೆ

By ANI

Published : Jun 4, 2024, 12:53 PM IST

Updated : Jun 4, 2024, 1:42 PM IST

Kangana Ranaut leading in Mandi himachal pradesh
ತಾಯಿಯ ಆಶೀರ್ವಾದ ಪಡೆದ ಕಂಗನಾ (ಫೋಟೋ ಕೃಪೆ: ಐಎಎನ್​ಎಸ್​)

ಮಂಡಿ (ಹಿಮಾಚಲ ಪ್ರದೇಶ): ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್​​​ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ತಮ್ಮ ಮೊದಲ ಚುನಾವಣಾ ಪರೀಕ್ಷೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿರುವ ಅವರು, ತಮ್ಮ ತಾಯಿಯ ಆಶೀರ್ವಾದ ಪಡೆದಿದ್ದು, ಅವರು ಈಶ್ವರನ ಸ್ವರೂಪ ಎಂದು ಬಣ್ಣಿಸಿದ್ದಾರೆ.

ಆರಂಭಿಕ ಸುತ್ತಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿವಿಕ್ರಮಾಧಿತ್ಯ ಸಿಂಗ್​ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ತಾಯಿಯೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ತಾಯಿಯಿಂದ ಸಿಹಿ ತಿನ್ನಿಸಿಕೊಳ್ಳುತ್ತಿದ್ದಾರೆ. ಎರಡನೇ ಫೋಟೋದಲ್ಲಿ ಅವರಿಂದ ಆಶೀರ್ವಾದ ಪಡೆಯುತ್ತಿದ್ದು, ತಾಯಿಯು ಈಶ್ವರನ ಸ್ವರೂಪ ಎಂದಿದ್ದಾರೆ.

ಈ ನಡುವೆ ಎಎನ್​ಐಗೆ ಮಾತನಾಡಿರುವ ಅವರು, ಗೆಲುವಿನ ಆತ್ಮವಿಶ್ವಾಸ ಹೊಂದಿರುವುದಾಗಿ ತಿಳಿಸಿದ್ದಾರೆ. ಮಂಡಿ ಕ್ಷೇತ್ರದ ಜನರು ತಮ್ಮ ಮಗಳಿಗೆ ಅವಮಾನ ಮಾಡುವುದಿಲ್ಲ. ಹಿಮಾಚಲ ಪ್ರದೇಶ ನನ್ನ ಜನ್ಮಭೂಮಿಯಾಗಿದ್ದು, ಇಲ್ಲಿನ ಜನರ ಸೇವೆ ಮಾಡುವೆ. ನಾನು ಎಲ್ಲಿಗೆ ಹೋಗುವುದಿಲ್ಲ. ಬೇರೆಯವರು ಬೇಕಾದಲ್ಲಿ ತಮ್ಮ ಬ್ಯಾಗ್​ ಹಿಡಿದು ಕ್ಷೇತ್ರ ತೊರೆಯಬಹುದು ಎಂದು ತಮ್ಮನ್ನು ಟೀಕಿಸಿದವರಿಗೆ ಉತ್ತರ ನೀಡಿದ್ದಾರೆ.

ಚುನಾವಣಾ ಆಯೋಗದ ಆರಂಭಿಕ ಟ್ರೆಂಡ್​ ಅನುಸಾರ, ಕಂಗನಾ, ಕಾಂಗ್ರೆಸ್​ ಅಭ್ಯರ್ಥಿ ವಿಕ್ರಮಾಧಿತ್ಯ ಅವರಿಗಿಂತ 5 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಕಳೆದ ಶನಿವಾರ ಮೇ 25ರಂದು ಮತದಾನದ ಬಳಿಕ ಮಾತನಾಡಿದ್ದ ಅವರು, ಮಂಡಿ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ. ರಾಜ್ಯದ ನಾಲ್ಕು ಸ್ಥಾನಗಳಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಮಂಡಿ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್​ ಪ್ರಾಬಲ್ಯವನ್ನು ಸಾಧಿಸಿತು. (ಐಎಎನ್​ಎಸ್​/ಎಎನ್​ಐ)

ಇದನ್ನೂ ಓದಿ: ವಾರಾಣಸಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಪ್ರಧಾನಿ ಮೋದಿಗೆ 72 ಸಾವಿರ ಮತಗಳ ಮುನ್ನಡೆ

Last Updated : Jun 4, 2024, 1:42 PM IST

ABOUT THE AUTHOR

...view details