ಹೈದರಾಬಾದ್:ಸಿಂಗಾಪುರ ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದು. ಇಲ್ಲಿ ಜೂಲಾಜಿಕಲ್ ಗಾರ್ಡನ್ಸ್, ಉದ್ಯಾನವನಗಳಿವೆ. ಇದರಿಂದಾಗಿ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಅದ್ಭುತ ದೇಶಕ್ಕೆ ಹೋಗಲು ನೀವು ಯೋಜಿಸುತ್ತಿದ್ದೀರಾ? ಅಥವಾ ದೂರದ ಊರಿಗೆ ಹೇಗೆ ಹೋಗುವುದು ಎಂದು ಗೊತ್ತಿಲ್ಲವಾ?. ಹಾಗಿದ್ದರೆ, ಚಿಂತೆ ಬೇಡ. ಇಂಡಿಯನ್ ರೈಲ್ವೆ ಇದಕ್ಕೆ ಪರಿಹಾರ ನೀಡುತ್ತದೆ.
ಆಗ್ನೇಯ ಏಷ್ಯಾದ ರಾಷ್ಟ್ರವಾದ ಸಿಂಗಾಪುರ, ಮಲೇಷ್ಯಾ ದೇಶಗಳನ್ನು ಕಡಿಮೆ ದರದಲ್ಲಿ ಸುತ್ತಾಡಿ ಬರಲು ಬಯಸುವವರಿಗೆ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(ಐಆರ್ಸಿಟಿಸಿ) ಅತ್ಯುತ್ತಮ ಪ್ಯಾಕೇಜ್ ಪ್ರಕಟಿಸಿದೆ. ಈ ಪ್ಯಾಕೇಜ್ ಎಷ್ಟು ದಿನಗಳು? ಯಾವ ಸ್ಥಳಗಳನ್ನು ನೋಡಬಹುದು? ಬೆಲೆ ಎಷ್ಟು? ಪ್ರಯಾಣ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
'ಮ್ಯಾಜಿಕಲ್ ಮಲೇಷಿಯಾ ವಿತ್ ಸಿಂಗಾಪುರ್ ಸೆನ್ಸೇಷನ್' ಎಂಬ ಹೆಸರಿನಲ್ಲಿ IRCTC ಪ್ಯಾಕೇಜ್ ಘೋಷಿಸಿದೆ. ಈ ಪ್ರವಾಸವು 6 ರಾತ್ರಿಗಳು ಮತ್ತು 7 ಹಗಲುಗಳವರೆಗೆ ಇರುತ್ತದೆ. ಈ ಪ್ರವಾಸವನ್ನು ಹೈದರಾಬಾದ್ ವಿಮಾನ ನಿಲ್ದಾಣದಿಂದ ಆರಂಭವಾಗುತ್ತದೆ.
ಮೊದಲ ದಿನ,ಮಧ್ಯರಾತ್ರಿ 12:30ಕ್ಕೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಪ್ರಯಾಣ ಆರಂಭವಾಗುತ್ತದೆ. ಅದೇ ದಿನ ಬೆಳಗ್ಗೆ 7:30ಕ್ಕೆ ಮಲೇಷ್ಯಾದ ಕೌಲಾಲಂಪುರದಲ್ಲಿ ವಿಮಾನ ಇಳಿಯಲಿದೆ. ಬಳಿಕ, ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ. ಬೆಳಗ್ಗೆ ಉಪಹಾರದ ಬಳಿಕ ಮಧ್ಯಾಹ್ನದವರೆಗೆ ವಿಶ್ರಾಂತಿ ಇರುತ್ತದೆ. ಊಟದ ನಂತರ ಶಾಪಿಂಗ್ ಮತ್ತು ಖ್ಯಾತ ಪುತ್ರಜಯ ಸ್ಥಳವನ್ನು ಭೇಟಿ ಮಾಡಬಹುದು. ಆ ರಾತ್ರಿ ಊಟವು ಭಾರತೀಯ ರೆಸ್ಟೋರೆಂಟ್‌ನಲ್ಲಿ ಇರಲಿದೆ. ಬಳಿಕ ಅಲ್ಲಿಯೇ ತಂಗಬೇಕು.
ಎರಡನೇ ದಿನ,ಹೋಟೆಲ್‌ನಲ್ಲಿ ಉಪಹಾರದ ನಂತರ, ಬಟು ಗುಹೆಗಳಿಗೆ ಭೇಟಿ ಇರಲಿದೆ. ನಂತರ ಜೆಂಟಿಂಗ್ ಹೈಲ್ಯಾಂಡ್ಸ್‌ಗೆ ಭೇಟಿ, ಬಳಿಕ ಕೌಲಾಲಂಪುರಕ್ಕೆ ವಾಪಸ್. ರಾತ್ರಿ ನಿಗದಿತ ಹೋಟೆಲ್‌ನಲ್ಲಿ ಉಳಿಯಬೇಕು.
ಮೂರನೇ ದಿನ,ಬೆಳಗ್ಗೆ ಉಪಹಾರದ ನಂತರ, ಕೌಲಾಲಂಪುರದ ನಗರ ಪ್ರವಾಸ ಇರಲಿದೆ. ಇಂಡಿಪೆಂಡೆನ್ಸ್ ಸ್ಕೇರ್, ಕಿಂಗ್ಸ್ ಪ್ಯಾಲೇಸ್, ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ. ನಂತರ ಪೆಟ್ರೋನಾಸ್ ಟ್ವಿನ್ ಟವರ್ (ಸ್ಕೈ ಬ್ರಿಡ್ಜ್ ಎಂಟ್ರಿ) ಗೆ ಭೇಟಿ. ಮಧ್ಯಾಹ್ನದ ಊಟದ ನಂತರ ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ. ಬರ್ಗಿಯಾ ಟೈಮ್ಸ್ ಸ್ಕ್ವೇರ್‌ನಲ್ಲಿ ಶಾಪಿಂಗ್ಗೆ ಅವಕಾಶ. ಅಂದು ರಾತ್ರಿ ಕೌಲಾಲಂಪುರದಲ್ಲಿ ಊಟ ಮಾಡಿ ಅಲ್ಲಿಯೇ ವಿಶ್ರಾಂತಿ.