ಕರ್ನಾಟಕ

karnataka

ETV Bharat / bharat

ರೈತರಿಗೆ ಸಿಹಿಸುದ್ದಿ: ದ್ರವರೂಪದ Nano Urea+​ ಉತ್ಪಾದನೆ ಘೋಷಿಸಿದ ಇಫ್ಕೋ - Nano Urea plus - NANO UREA PLUS

ನ್ಯಾನೋ ಯೂರಿಯಾ ಪ್ಲಸ್​ ಎಂಬ ಹೊಸ ಮಾದರಿಯ ಯೂರಿಯಾವನ್ನು ಇಫ್ಕೋ ಉತ್ಪಾದನೆ ಮಾಡುವುದಾಗಿ ಘೋಷಿಸಿದೆ.

Nano Urea+​
Nano Urea+​

By ETV Bharat Karnataka Team

Published : Apr 17, 2024, 10:27 AM IST

ನವದೆಹಲಿ:ಎಲ್ಲ ಬೆಳೆಗಳಿಗೆ ಅಗತ್ಯವಾಗಿ ಬೇಕಿರುವ ಯೂರಿಯಾ ರಸಗೊಬ್ಬರದ ಕೊರತೆ ಪ್ರತಿವರ್ಷವೂ ರೈತರನ್ನು ಕಾಡುತ್ತಿದೆ. ಇದನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಭಾರತೀಯ ರೈತರ ರಸಗೊಬ್ಬರ ಸಹಕಾರಿ (IFFCO) ಸಹಭಾಗಿತ್ವದಲ್ಲಿ ದ್ರವರೂಪದ ಯೂರಿಯಾ ರಸಗೊಬ್ಬರ ಉತ್ಪಾದನೆ ಮಾಡುವುದಾಗಿ ಘೋಷಿಸಿದೆ.

ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಇಫ್ಕೋ ಸಹಯೋಗದಲ್ಲಿ ಮುಂದಿನ ಮೂರು ವರ್ಷಗಳ ಕಾಲ ನ್ಯಾನೊ ಯೂರಿಯಾ ಪ್ಲಸ್ (ದ್ರವರೂಪ) ಉತ್ಪಾದಿಸಲಾಗುವುದು. ಇದು ಸಹಜ ಯೂರಿಯಾದಂತೆಯೇ ಇರಲಿದೆ. ನ್ಯಾನೋ ಯೂರಿಯಾ+ ಯೂರಿಯಾದ ಸುಧಾರಿತ ಮಾದರಿಯಾಗಿದೆ. ಇದರಲ್ಲಿ ಬೆಳೆಗಳಿಗೆ ನಿರ್ಣಾಯಕ ಹಂತದಲ್ಲಿ ಬೇಕಾದ ಸಾರಜನಕ ಹೇರಳವಾಗಿ ಇರಲಿದೆ. ಬೆಳೆಗೆ ಪೂರೈಸುವ ಪೌಷ್ಟಿಕಾಂಶವು ಇದರಲ್ಲಿ ಇರಲಿದೆ. ಇದನ್ನು ಸಾಂಪ್ರದಾಯಿಕ ಯೂರಿಯಾ ಮತ್ತು ಇತರ ಸಾರಜನಕ ರಸಗೊಬ್ಬರಗಳ ಬದಲಿಗೆ ಬಳಸಬಹುದು ಎಂದು ಇಫ್ಕೋದ ಸಿಇಒ,ಎಂಡಿ ಡಾ.ಅವಸ್ಥಿ ಅವರು ತಿಳಿಸಿದ್ದಾರೆ.

ಪರಿಸರ, ಬೆಳೆಗೆ ಹಾನಿಯಿಲ್ಲ:ನ್ಯಾನೋ ಯೂರಿಯಾದಲ್ಲಿ ಶೇಕಡಾ 16 ರಷ್ಟು ನೈಟ್ರೋಜನ್​ (ಸಾರಜನಕ) ಇರಲಿದೆ. ಸಾಂಪ್ರದಾಯಿಕ ರಸಗೊಬ್ಬರದಲ್ಲಿ ಇರುವ 20 ಪ್ರತಿಶತ ಸಾರಕ್ಕೆ ಇದು ಸಮವಾಗಿರುತ್ತದೆ. ಇದು ಮಣ್ಣಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಲಿದೆ. ರೈತರಿಗೆ ಲಾಭದಾಯಕವಲ್ಲದೇ, ಸುಸ್ಥಿರ ಪರಿಸರಕ್ಕೆ ಸಹಾಯವಾಗಲಿದೆ. ಇದು ಸೂಕ್ಷ್ಮ ಪೋಷಕಾಂಶಗಳ ಲಭ್ಯತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಈ ನ್ಯಾನೋ ಯೂರಿಯಾ ಕ್ಲೋರೊಫಿಲ್ ಚಾರ್ಜರ್, ಇಳುವರಿ ಹೆಚ್ಚಳ ಮತ್ತು ಹವಾಮಾನ ಬದಲಾವಣೆಗೆ ತಕ್ಕಂತೆ ಕೃಷಿಗೆ ಸಹಾಯ ಮಾಡುತ್ತದೆ. ಹೊಸದಾಗಿ ಪರಿಚಯಿಸಲಾದ ನ್ಯಾನೋ ಯೂರಿಯಾ ಪ್ಲಸ್‌ಗೆ IFFCO ಯಾವುದೇ ಬೆಲೆಯನ್ನು ಹೆಚ್ಚಿಸಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಇರುವ 500 ಎಂಎಲ್​ ಬಾಟಲಿಯ 225 ರೂಪಾಯಿಗೆ ಇದು ಲಭ್ಯವಾಗಲಿದೆ.

ಇದೀಗ ದೇಶಾದ್ಯಂತ ರೈತರು ನ್ಯಾನೋ ಯೂರಿಯಾವನ್ನು ಬಳಸುತ್ತಿರುವುದು ಗಮನಾರ್ಹ ಬದಲಾವಣೆಯಾಗಿದೆ. ಈ ವರ್ಧಿತ ಆವೃತ್ತಿಯು ಪರಿಸರಕ್ಕೆ ಹಾನಿಯಾಗದಂತೆ ಆರೋಗ್ಯಕರ ಬೆಳೆಗೆ ಸಹಾಯ ಮಾಡುತ್ತದೆ ಎಂದು ಅವಸ್ಥಿ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಕುದುರೆಯಲ್ಲಿ ಗ್ಲಾಂಡರ್ಸ್ ರೋಗೋದ್ರೇಕ ಪತ್ತೆ: ಡಿ.ಜೆ.ಹಳ್ಳಿ ಸುತ್ತಮುತ್ತ ರೋಗಪೀಡಿತ ವಲಯ ಘೋಷಣೆ - Glanders Disease

ABOUT THE AUTHOR

...view details