ಮೇಡ್ಚಲ್ (ತೆಲಂಗಾಣ): ಆಸ್ತಿಗಾಗಿ ಪತ್ನಿಯೇ ಪತಿಯನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಮನೆಯ ಕೋಣೆಯೊಂದರಲ್ಲಿ ಬಂಧಿಸಿರುವ ಘಟನೆ ಮೇಡ್ಚಲ ಜಿಲ್ಲೆಯ ಘಟ್‌ಕೇಸರ್‌ನಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ. ಘಟಕೇಸರ್‌ನ ಅಂಬೇಡ್ಕರ್ ನಗರದ ಕೇಂದ್ರೀಯ ಒಕ್ಕೂಟದ ಪಟ್ಟಿ ನರಸಿಂಹ ಎಂಬಾತನ ಪತ್ನಿ ಭಾರತಮ್ಮ ಕೃತ್ಯ ಎಸಗಿದ್ದಾಳೆ.
ಘಟನೆ ವಿವರ:ನರಸಿಂಹ ಅವರು ತನ್ನ ಪತ್ನಿಯ ಹೆಸರಿನಲ್ಲಿದ್ದ ಜಮೀನಿನಲ್ಲಿ ಸಾಲ ಮಾಡಿ ಮನೆ ಕಟ್ಟಿಸಿದ್ದರು. ಮಾಡಿದ ಸಾಲವನ್ನು ತೀರಿಸಲು ನರಸಿಂಹ ತನ್ನ ಹೆಸರಿನಲ್ಲಿದ್ದ ಜಮೀನು ಮಾರಾಟ ಮಾಡುವುದಾಗಿ ಪತ್ನಿಗೆ ತಿಳಿಸಿದ್ದಾನೆ. ಇದಕ್ಕೆ ಒಪ್ಪದ ಪತ್ನಿ ಜಗಳವಾಡಿದ್ದಾಳೆ. ಅಂದಿನಿಂದ ದಂಪತಿ ನಡುವೆ ಜಗಳ ನಡೆಯುತ್ತಲೇ ಇದೆ. ಇದರಿಂದ ನೊಂದ ನರಸಿಂಹ ಕಳೆದ ವರ್ಷ ಮನೆಯನ್ನೂ ತೊರೆದಿದ್ದ.
ಕಳೆದ ತಿಂಗಳು 30 ರಂದು ಭಾರತಮ್ಮ ಅವರಿಗೆ ತನ್ನ ಪತಿ ನರಸಿಂಹ, ಯಾದಾದ್ರಿ ಭುವನಗಿರಿ ಜಿಲ್ಲೆಯ ಪಡಮಟಿ ಸೋಮರಂನಲ್ಲಿರುವ ವಿಷಯ ತಿಳಿದು ಬರುತ್ತದೆ. ಆಗ ಭಾರತಮ್ಮ ತನ್ನ ಮಕ್ಕಳೊಂದಿಗೆ ಹೋಗಿ ಮನೆಗೆ ತನ್ನ ಗಂಡನನ್ನು ಬಲವಂತವಾಗಿ ಕರೆತಂದಿದ್ದಾಳೆ. ಬಳಿಕ ನರಸಿಂಹನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಕೋಣೆಯಲ್ಲಿ ಬಂಧಿಸಿದ್ದಾಳೆ.