ಕರ್ನಾಟಕ

karnataka

ETV Bharat / bharat

₹ 10,371 ಕೋಟಿ ವೆಚ್ಚದ ಇಂಡಿಯಾ ಎಐ ಮಿಷನ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ - India AI Mission

ಮೇಕಿಂಗ್ ಎಐ ಇನ್ ಇಂಡಿಯಾ ಮತ್ತು ಮೇಕಿಂಗ್ ಎಐ ವರ್ಕ್ ಫಾರ್ ಇಂಡಿಯಾದ ಪರಿಕಲ್ಪನೆ ನಿಟ್ಟಿನಲ್ಲಿ 10,371.92 ಕೋಟಿ ರೂ.ಗಳ ವೆಚ್ಚದೊಂದಿಗೆ ಸಮಗ್ರ ರಾಷ್ಟ್ರೀಯ ಮಟ್ಟದ ಇಂಡಿಯಾ ಎಐ ಮಿಷನ್​ಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

Govt's Major Artificial Intelligence Push: Cabinet approves India AI Mission
₹ 10,371 ಕೋಟಿ ವೆಚ್ಚದ ಇಂಡಿಯಾ ಎಐ ಮಿಷನ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

By ETV Bharat Karnataka Team

Published : Mar 7, 2024, 10:35 PM IST

ನವದೆಹಲಿ: ಐದು ವರ್ಷಗಳಿಗಾಗಿ 10,371 ಕೋಟಿ ರೂ.ಗಳ ವೆಚ್ಚದ 'ಇಂಡಿಯಾ ಎಐ (Artificial Intelligence) ಮಿಷನ್‌'ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಅನುಮೋದಿತ ಯೋಜನೆಯು ದೊಡ್ಡ ಕಂಪ್ಯೂಟಿಂಗ್ ಮೂಲ ಸೌಕರ್ಯ ಸೃಷ್ಟಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, 10,000 ಜಿಪಿಯು ಒಳಗೊಂಡಿರುವ ಸೂಪರ್‌ಕಂಪ್ಯೂಟಿಂಗ್ ಸಾಮರ್ಥ್ಯವು ಎಐ ಪರಿಸರ ವ್ಯವಸ್ಥೆಯನ್ನು ರಚಿಸಲು ವಿವಿಧ ಪಾಲುದಾರರಿಗೆ ಲಭ್ಯವಾಗಲಿದೆ. ಇಂಡಿಯಾ ಎಐ ಮಿಷನ್ ಅಡಿ ಸ್ಥಾಪಿಸಲಾದ ಎಐ ಸೂಪರ್‌ಕಂಪ್ಯೂಟಿಂಗ್ ಮೂಲಸೌಕರ್ಯಕ್ಕೆ ಸ್ಟಾರ್ಟ್‌ಅಪ್‌ಗಳು, ಅಕಾಡೆಮಿಗಳು, ಸಂಶೋಧಕರು ಮತ್ತು ಉದ್ಯಮಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ದತ್ತಾಂಶದ ಗುಣಮಟ್ಟವನ್ನು ಸುಧಾರಿಸಲು ಮತ್ತು ಎಐ ಅಭಿವೃದ್ಧಿ ಮತ್ತು ಅದು ಲಭ್ಯವಾಗುವಂತೆ ಮಾಡಲು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸಲು ರಾಷ್ಟ್ರೀಯ ಡೇಟಾ ನಿರ್ವಹಣಾ ಅಧಿಕಾರಿ ನೇಮಿಸಲಾಗುವುದು ಎಂದು ಹೇಳಿದರು.

ಮೇಕಿಂಗ್ ಎಐ ಇನ್ ಇಂಡಿಯಾ ಮತ್ತು ಮೇಕಿಂಗ್ ಎಐ ವರ್ಕ್ ಫಾರ್ ಇಂಡಿಯಾದ ಪರಿಕಲ್ಪನೆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು 10,371.92 ಕೋಟಿ ರೂ.ಗಳ ವೆಚ್ಚದೊಂದಿಗೆ ಸಮಗ್ರ ರಾಷ್ಟ್ರೀಯ ಮಟ್ಟದ ಇಂಡಿಯಾ ಎಐ ಮಿಷನ್​ಗೆ ಅನುಮೋದಿಸಿದೆ. ಇಂಡಿಯಾ ಎಐ ಮಿಷನ್ ಸಾರ್ವಜನಿಕ ಮತ್ತು ಖಾಸಗಿ ವಲಯಗಳಾದ್ಯಂತ ಕಾರ್ಯತಂತ್ರದ ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳ ಮೂಲಕ ಎಐ ಆವಿಷ್ಕಾರವನ್ನು ವೇಗಗೊಳಿಸುವ ಸಮಗ್ರ ಪರಿಸರ ವ್ಯವಸ್ಥೆ ಸ್ಥಾಪಿಸುತ್ತದೆ.

1. ಇಂಡಿಯಾ ಎಐ ಕಂಪ್ಯೂಟ್ ಸಾಮರ್ಥ್ಯ (IndiaAI Compute Capacity): ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಎಐ ಸ್ಟಾರ್ಟ್ಅಪ್‌ಗಳು ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯಿಂದ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಇಂಡಿಯಾ ಎಐ ಕಂಪ್ಯೂಟ್​ ಉನ್ನತ ಮಟ್ಟದ ಸ್ಕೇಲೆಬಲ್ ಎಐ ಕಂಪ್ಯೂಟಿಂಗ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಸಾರ್ವಜನಿಕ, ಖಾಸಗಿ ಸಹಭಾಗಿತ್ವದ ಮೂಲಕ ನಿರ್ಮಿಸಲಾದ 10,000 ಅಥವಾ ಹೆಚ್ಚಿನ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್‌ಗಳ (Graphics Processing Units - GPUs) ಎಐ ಕಂಪ್ಯೂಟ್ ಮೂಲಸೌಕರ್ಯ ಒಳಗೊಂಡಿರುತ್ತದೆ. ಇದಲ್ಲದೇ, ಎಐ ಅನ್ನು ಸೇವೆಯಾಗಿ ನೀಡಲು ಮತ್ತು ಎಐ ನವೋದ್ಯಮಿಗಳಿಗೆ ಪೂರ್ವ ತರಬೇತಿ ಪಡೆದ ಮಾದರಿಗಳನ್ನು ನೀಡಲು ಎಐ ಮಾರುಕಟ್ಟೆ ಸ್ಥಳವನ್ನು ವಿನ್ಯಾಸಗೊಳಿಸಲಾಗುತ್ತದೆ. ಎಐ ಆವಿಷ್ಕಾರಕ್ಕೆ ನಿರ್ಣಾಯಕ ಸಂಪನ್ಮೂಲಗಳಿಗೆ ಇದೊಂದು ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.

2. ಇಂಡಿಯಾ ಎಐ ಇನ್ನೋವೇಶನ್ ಸೆಂಟರ್ (IndiaAI Innovation Centre): ಇಂಡಿಯಾ ಎಐ ಇನ್ನೋವೇಶನ್ ಸೆಂಟರ್ ಸ್ಥಳೀಯ ದೊಡ್ಡ ಮಲ್ಟಿಮೋಡಲ್ ಮಾದರಿಗಳು (Large Multimodal Models - LMMs) ಮತ್ತು ಡೊಮೇನ್ ನಿರ್ದಿಷ್ಟ ಅಡಿಪಾಯ ಮಾದರಿಗಳ ಅಭಿವೃದ್ಧಿ ಮತ್ತು ನಿಯೋಜನೆಯನ್ನು ನಿರ್ಣಾಯಕ ವಲಯಗಳಲ್ಲಿ ಕೈಗೊಳ್ಳುತ್ತದೆ.

3. ಇಂಡಿಯಾ ಎಐ ಡೇಟಾಸೆಟ್ಸ್ ಪ್ಲಾಟ್‌ಫಾರ್ಮ್ (IndiaAI Datasets Platform):​ಇಂಡಿಯಾ ಎಐ ಡೇಟಾಸೆಟ್ಸ್ ಪ್ಲಾಟ್‌ಫಾರ್ಮ್ ಎಐ ಇನ್ನೋವೇಶನ್‌ಗಾಗಿ ಗುಣಮಟ್ಟದ ವೈಯಕ್ತಿಕವಲ್ಲದ ಡೇಟಾಸೆಟ್‌ಗಳಿಗೆ ಪ್ರವೇಶವನ್ನು ಸುವ್ಯವಸ್ಥಿತಗೊಳಿಸುತ್ತದೆ. ಭಾರತೀಯ ಸ್ಟಾರ್ಟ್‌ ಅಪ್‌ಗಳು ಮತ್ತು ಸಂಶೋಧಕರಿಗೆ ವೈಯಕ್ತಿಕವಲ್ಲದ ಡೇಟಾಸೆಟ್‌ಗಳಿಗೆ ತಡೆರಹಿತ ಪ್ರವೇಶಕ್ಕಾಗಿ ಒಂದು ತಾಣದ ಪರಿಹಾರ ಒದಗಿಸಲು ಏಕೀಕೃತ ಡೇಟಾ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಲಾಗುತ್ತದೆ.

4. ಇಂಡಿಯಾ ಎಐ ಅಪ್ಲಿಕೇಶನ್ ಡೆವಲಪ್‌ಮೆಂಟ್ ಇನಿಶಿಯೇಟಿವ್ (IndiaAI Application Development Initiative):ಇದು ಕೇಂದ್ರ ಸಚಿವಾಲಯಗಳು, ರಾಜ್ಯ ಇಲಾಖೆಗಳು ಮತ್ತು ಇತರ ಸಂಸ್ಥೆಗಳಿಂದ ಪಡೆದ ಸಮಸ್ಯೆಗಳಿಗಾಗಿ ನಿರ್ಣಾಯಕ ವಲಯಗಳಲ್ಲಿ ಎಐ ಅಪ್ಲಿಕೇಶನ್‌ಗಳನ್ನು ಉತ್ತೇಜಿಸುತ್ತದೆ. ಈ ಕ್ರಮವು ದೊಡ್ಡ ಪ್ರಮಾಣದ ಸಾಮಾಜಿಕ-ಆರ್ಥಿಕ ರೂಪಾಂತರಗಳನ್ನು ವೇಗಗೊಳಿಸುವ ಸಾಮರ್ಥ್ಯದೊಂದಿಗೆ ಪ್ರಭಾವಶಾಲಿ ಎಐ ಪರಿಹಾರಗಳ ಅಭಿವೃದ್ಧಿ/ಸ್ಕೇಲಿಂಗ್/ಅಳವಡಿಕೆಯನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

5.ಇಂಡಿಯಾ ಎಐ ಫ್ಯೂಚರ್ ಸ್ಕಿಲ್ಸ್ (IndiaAI FutureSkills): ಇದನ್ನು ಎಐ ಕಾರ್ಯಕ್ರಮಗಳಿಗೆ ಪ್ರವೇಶಿಸಲು ಅಡೆತಡೆಗಳನ್ನು ತಗ್ಗಿಸಲು ಪರಿಕಲ್ಪನೆ ಮಾಡಲಾಗಿದೆ. ಎಐ ಕಾರ್ಯಕ್ರಮಗಳಿಗೆ ಅವಕಾಶ ಮತ್ತು ಸ್ನಾತಕಪೂರ್ವ, ಸ್ನಾತಕೋತ್ತರ ಮತ್ತು ಪಿಎಚ್​.ಡಿ. ಮಟ್ಟದಲ್ಲಿ ಎಐ ಕೋರ್ಸ್‌ಗಳನ್ನು ಹೆಚ್ಚಿಸುತ್ತದೆ. ಇದಲ್ಲದೇ, ನೆಲಮಟ್ಟದ ಕೋರ್ಸ್‌ಗಳನ್ನು ನೀಡಲು ಭಾರತದಾದ್ಯಂತ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ಡೇಟಾ ಮತ್ತು ಎಐ ಲ್ಯಾಬ್‌ಗಳನ್ನು ಅನುಕೂಲವಾಗಲಿದೆ.

6. ಇಂಡಿಯಾ ಎಐ ಸ್ಟಾರ್ಟ್‌ಅಪ್ ಫೈನಾನ್ಸಿಂಗ್ (IndiaAI Startup Financing): ಡೀಪ್-ಟೆಕ್ ಎಐ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ಮತ್ತು ವೇಗಗೊಳಿಸಲು ಮತ್ತು ಫ್ಯೂಚರಿಸ್ಟಿಕ್ ಎಐ ಪ್ರಾಜೆಕ್ಟ್‌ಗಳನ್ನು ಸಕ್ರಿಯಗೊಳಿಸಲು ನಿಧಿಗೆ ಸುವ್ಯವಸ್ಥಿತ ಪ್ರವೇಶ ಒದಗಿಸುವುದು ಇದರ ಪರಿಕಲ್ಪನೆಯಾಗಿದೆ.

7. ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಐ (Safe & Trusted AI):ಇದು ಎಐಯ ಜವಾಬ್ದಾರಿಯುತ ಅಭಿವೃದ್ಧಿ, ನಿಯೋಜನೆ ಮತ್ತು ಅಳವಡಿಕೆಯನ್ನು ಮುನ್ನಡೆಸಲು ಸಾಕಷ್ಟು ಗಾರ್ಡ್‌ರೈಲ್‌ಗಳ ಅಗತ್ಯವನ್ನು ಗುರುತಿಸುವುದು, ಸ್ವದೇಶಿ ಉಪಕರಣಗಳು ಮತ್ತು ಅದರ ಚೌಕಟ್ಟುಗಳ ಅಭಿವೃದ್ಧಿ, ನವೋದ್ಯಮಿಗಳಿಗಾಗಿ ಮೌಲ್ಯಮಾಪನ ಪರಿಶೀಲನಾಪಟ್ಟಿಗಳು ಮತ್ತು ಇತರ ಮಾರ್ಗಸೂಚಿಗಳು ಮತ್ತು ಆಡಳಿತ ಚೌಕಟ್ಟುಗಳು ಸೇರಿದಂತೆ ಜವಾಬ್ದಾರಿಯುತ ಎಐ ಯೋಜನೆಗಳ ಅನುಷ್ಠಾನವನ್ನು ಸಕ್ರಿಯಗೊಳಿಸುತ್ತದೆ.

ಇದನ್ನೂ ಓದಿ:ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್​​ ಭವಿಷ್ಯದ ಉದ್ಯೋಗ ಭರವಸೆಗಳು

ABOUT THE AUTHOR

...view details