ಹೈದರಾಬಾದ್:2019ರಲ್ಲಿ ಗೋರಖ್‌ಪುರದಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಗಳ ವಿಡಿಯೋವನ್ನು ಇತ್ತೀಚಿಗೆ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಈ ವಿಡಿಯೋಗೆ ಮತ್ತು ಇತ್ತೀಚಿಗೆ ಸಂಭಾಲ್ ನಡೆದ ಹಿಂಸಾಚಾರಕ್ಕೆ ಯಾವುದೇ ಸಂಬಂಧವಿಲ್ಲ.
ವೈರಲ್ ವಿಡಿಯೋದಲ್ಲಿ ಇರುವುದೇನು?:ಪ್ರತಿಭಟನಾಕಾರರನ್ನು ಪೊಲೀಸರು ಬೆನ್ನಟ್ಟಿ ಥಳಿಸುತ್ತಿರುವುದನ್ನು ತೋರಿಸುವ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿನ ದೃಶ್ಯಗಳನ್ನು ಸಂಭಾಲ್ ನಗರದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ಸಂಭಾಲ್‌ನಲ್ಲಿ ಪ್ರತಿಭಟನಾಕಾರರ ವಿರುದ್ಧ ಯುಪಿ ಪೊಲೀಸರು ಕೈಗೊಂಡ ಕ್ರಮ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಗಲಭೆಕೋರರ ವಿರುದ್ಧದ ಪೊಲೀಸ್ ಈ ಕ್ರಮವನ್ನು ನೀವು ಬೆಂಬಲಿಸಿದರೆ ರೀಪೋಸ್ಟ್ ಮಾಡಿ. ಇದರ ಇಂತಹದ್ದೇ ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿವೆ ಎಂದು ಪೋಸ್ಟ್ ಹಾಕಿದ್ದಾರೆ.
ನವೆಂಬರ್ 24 ರಂದು ಸಂಭಾಲ್‌ನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯ ನಂತರ ಈ ವಿಡಿಯೋ ವೈರಲ್ ಆಗಲು ಪ್ರಾರಂಭಿಸಿತು. ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆಗಾಗಿ ಸಮೀಕ್ಷಾ ತಂಡವು ಶಾಹಿ ಜಾಮಾ ಮಸೀದಿಗೆ ಆಗಮಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು ಮತ್ತು ಸುಮಾರು 20 ಮಂದಿ ಪೊಲೀಸರಿಗೆ ಗಾಯಗಳಾಗಿದ್ದವು.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿನ ದೃಶ್ಯವನ್ನು ಗೋರಖ್‌ಪುರದಲ್ಲಿ 2019ರಲ್ಲಿ ಸಿಎಎ ವಿರೋಧಿ ನಡೆದ ಪ್ರತಿಭಟನೆ ವೇಳೆ ಸೆರೆ ಹಿಡಿದಿರುವುದಾಗಿ ನಮ್ಮ ತನಿಖೆಯಿಂದ ತಿಳಿದು ಬಂದಿದೆ.
ಸತ್ಯ ಏನು?:ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ ಇದರಲ್ಲಿನ ತುಣುಕುಗಳನ್ನು ಹಲವು ಬಳಕೆದಾರರೇ ಸೃಷ್ಟಿಸಿರುವುದು ಗೊತ್ತಾಗಿದೆ. ಅಂತಿಮವಾಗಿ ಈ ವಿಡಿಯೋದಲ್ಲಿನ ದೃಶ್ಯ 2019ರ ಡಿಸೆಂಬರ್ನಲ್ಲಿ ಗೋರಖ್‌ಪುರದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯದ್ದು ಎಂದು ಸ್ಪಷ್ಟವಾಗುತ್ತದೆ.
ಅಂತಹ ಒಂದು ವಿಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) '@imMAK02' ಎಂಬ ಸಾಮಾಜಿಕ ಮಾಧ್ಯಮ ಎಕ್ಸ್ ಬಳಕೆದಾರ 2019 ಡಿಸೆಂಬರ್ 31 ರಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಉತ್ತರ ಪ್ರದೇಶದ ಗೋರಖ್‌ಪುರದ್ದು, ಯುಪಿ ಪೊಲೀಸರು ನಿರಾಯುಧ ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಕ್ರೂರವಾಗಿ ಬಲ ಪ್ರಯೋಗ ಮಾಡುತ್ತಿದ್ದಾರೆ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.