ಆಗ್ರಾ(ಉತ್ತರ ಪ್ರದೇಶ):ಇಂಗ್ಲೆಂಡ್ನ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ನಾರಾಯಣ ಮೂರ್ತಿ ಅವರು ಎರಡು ದಿನಗಳ ಭೇಟಿಗಾಗಿ ಶನಿವಾರ ಆಗ್ರಾಕ್ಕೆ ಆಗಮಿಸುತ್ತಿದ್ದಾರೆ. ರಾತ್ರಿ ಇಲ್ಲೇ ತಂಗಲಿರುವ ಈ ದಂಪತಿ ಭಾನುವಾರ ತಮ್ಮ ನಿಯೋಗದೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದಾರೆ.
ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿಯವರ ಎರಡು ದಿನಗಳ ಆಗ್ರಾ ಭೇಟಿಯ ವೇಳಾಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಮಾಜಿ ಪ್ರಧಾನಿ ರಿಷಿ ಸುನಕ್, ಅವರ ಪತ್ನಿ ಮತ್ತು ನಿಯೋಗ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಶನಿವಾರ ಎರಡು ದಿನಗಳ ಭೇಟಿಗಾಗಿ ಆಗ್ರಾಕ್ಕೆ ಆಗಮಿಸಲಿದೆ.
ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಖೇರಿಯಾ ಸಿವಿಲ್ ಏರ್‌ಪೋರ್ಟ್‌ಗೆ ಶನಿವಾರ ಆಗಮಿಸಲಿದ್ದಾರೆ. ಅಲ್ಲಿಂದ ಅವರು ಶಿಲ್ಪಗ್ರಾಮ್ ಬಳಿ ಇರುವ ಹೋಟೆಲ್ ಒಬೆರಾಯ್ ತಲುಪಲಿದ್ದು, ಅಲ್ಲೇ ರಾತ್ರಿ ಉಳಿಯುತ್ತಾರೆ. ಭಾನುವಾರ ಬೆಳಗ್ಗೆ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದಾರೆ. ಇದರೊಂದಿಗೆ ಇತರ ಸ್ಮಾರಕಗಳಿಗೂ ಭೇಟಿ ಕೊಡಲಿದ್ದಾರೆ ಎಂದು ಡಿಎಂ ಅರವಿಂದ ಮಲ್ಲಪ್ಪ ಬಂಗಾರಿ ತಿಳಿಸಿದ್ದಾರೆ.