ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಹಕ್ಕು ಸ್ಥಾಪಿಸಲು ನ್ಯಾಷನಲ್ ಕಾನ್ಫರೆನ್ಸ್ಗೆ ಇಂದು ಸಂಜೆಯೊಳಗೆ ಬೆಂಬಲ ಪತ್ರ ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ.
ಜೆಕೆಪಿಸಿಸಿ ಅಧ್ಯಕ್ಷ ತರೀಖ್ ಹಮೀದ್ ಕರ್ರಾ ಮಾತನಾಡಿ, "ಎನ್‌ಸಿಗೆ ಬೆಂಬಲ ಪತ್ರವನ್ನು ಇಂದು ಸಂಜೆಯೊಳಗೆ ನೀಡಲಾಗುವುದು. ಇದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಬಳಿಕ ಈ ನಿರ್ಣಯವನ್ನು ಹೈಕಮಾಂಡ್ಗೆ ತಲುಪಿಸಲಾಗುವುದು" ಎಂದರು.
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ 6 ಸ್ಥಾನ ಗೆದ್ದಿದೆ. ಇದೀಗ ಎನ್ಸಿ ಜೊತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಯಾರು ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಎನ್‌ಸಿಗೆ ಕಾಂಗ್ರೆಸ್ ಬೆಂಬಲ ಪತ್ರ ನೀಡಲಿದೆ. ಆದರೆ ಪಕ್ಷ ಯಾವುದೇ ನಿರ್ದಿಷ್ಟ ಷರತ್ತು ವಿಧಿಸಿಲ್ಲ ಎಂದು ಹಮೀದ್ ಹೇಳಿದ್ದಾರೆ.