ಕರ್ನಾಟಕ

karnataka

ETV Bharat / bharat

ಬಿಜೆಪಿ ಹಿರಿಯ ನಾಯಕ ಎಲ್​ ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿರ - L K ADVANI HOSPITALISED

97 ವರ್ಷದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಶನಿವಾರ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

BJP Veteran Lal Krishna Advani
ಬಿಜೆಪಿ ಹಿರಿಯ ನಾಯಕ ಎಲ್​ ಕೆ ಅಡ್ವಾಣಿ (IANS)

By ETV Bharat Karnataka Team

Published : 4 hours ago

Updated : 4 hours ago

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯ ಹದಗೆಟ್ಟ ಕಾರಣ ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿಯ ಮುಂಚೂಣಿ ನಾಯಕ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಶುಕ್ರವಾರ ತಡರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ದಾಖಲಾಗಲು ಕಾರಣ ತಿಳಿದಿಲ್ಲವಾದರೂ, ಅಡ್ವಾಣಿ ಅವರನ್ನು ನಿಗಾದಲ್ಲಿರಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


97 ವರ್ಷದ ಲಾಲ್​ ಕೃಷ್ಣ ಅಡ್ವಾಣಿ ಅವರು ಕೆಲವು ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಅಡ್ವಾಣಿ ಅವರು ನಾಲ್ಕನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಾಜಿ ಗೃಹ ಸಚಿವರಾಗಿದ್ದ ಅವರಿಗೆ ಈ ವರ್ಷ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ'ವನ್ನು ನೀಡಲಾಯಿತು. ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹಿರಿಯ ನಾಯಕ ಅಡ್ವಾಣಿ ಅವರಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ, ಅವರ ಮನೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಲಾಲ್ ಕೃಷ್ಣ ಅಡ್ವಾಣಿ ಬಿಜೆಪಿಯ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯ. 1990 ರ ಸೆಪ್ಟೆಂಬರ್‌ನಲ್ಲಿ ರಾಮ ಮಂದಿರದ ಪರವಾಗಿ ಬೆಂಬಲ ಕ್ರೋಢೀಕರಿಸಲು ಸೋಮನಾಥದಿಂದ ಆರಂಭಿಸಿದ್ದ ರಥಯಾತ್ರೆ ಆರಂಭಿಸಿ ಜನಪ್ರಿಯ ರಾದವರು. ನವೆಂಬರ್​ 8 ರಂದು ತಮ್ಮ 97ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಲಾಲ್​ ಕೃಷ್ಣ ಅಡ್ವಾಣಿ ಅವರಿಗೆ ಪ್ರಧಾನಿ ಮೋದಿ ಮನೆಗೆ ತೆರಳಿ ಶುಭಾಶಯಗಳನ್ನು ತಿಳಿಸಿದ್ದರು.

ಇದನ್ನೂ ಓದಿ:ಹುಟ್ಟೂರಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಎಸ್‌.ಎಂ.ಕೃಷ್ಣ ಅಂತ್ಯಕ್ರಿಯೆ; ಅಪರೂಪದ ರಾಜಕೀಯ ಮುತ್ಸದ್ಧಿಗೆ ಭಾವಪೂರ್ಣ ವಿದಾಯ

Last Updated : 4 hours ago

ABOUT THE AUTHOR

...view details