ಪಾಟ್ನಾ, ಬಿಹಾರ: ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಬಿಹಾರ ರಾಜಕೀಯದಲ್ಲಿ ಸದಾ ಸುದ್ದಿಯಲ್ಲಿರುವ ರಾಜಕೀಯ ನೇತಾರ. 2024ರ ಲೋಕಸಭಾ ಚುನಾವಣೆಯಲ್ಲಿ ಪೂರ್ಣಿಯಾದಿಂದ ಸ್ಪರ್ಧಿಸುವುದಕ್ಕಾಗಿ ಅವರು ತಮ್ಮ ಪಕ್ಷ ಜನ್ ಅಧಿಕಾರ್ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದರು. ಆದರೆ, ಆರ್‌ಜೆಡಿ ಬಿಮಾ ಭಾರತಿ ಅವರನ್ನು ಪೂರ್ಣಿಯಾದಿಂದ ಕಣಕ್ಕಿಳಿಸಿದ್ದರಿಂದ ಪಪ್ಪು ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅವರ ಪತ್ನಿ ರಂಜಿತಾ ರಂಜನ್ ಅವರು, ಪಪ್ಪು ಯಾದವ್ ಅವರು ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರದ ಹಿಂದಿನ ಶಕ್ತಿ ಎಂದು ಹೇಳಲಾಗಿದೆ. ಇನ್ನು ವಿಶೇಷ ಎಂದರೆ ರಂಜಿತ್ ರಂಜನ್ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈಗ ಈ ಇಬ್ಬರೂ ಒಟ್ಟಾಗಿ ಎರಡೂ ಸದನಗಳನ್ನು ಪ್ರತಿನಿಧಿಸಲಿದ್ದಾರೆ.
ಪುರ್ಣಿಯಾದಿಂದ ಗೆದ್ದ ಪಪ್ಪು ಯಾದವ್ : 2024 ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಅತ್ಯಂತ ಆಸಕ್ತಿದಾಯಕ ಪೈಪೋಟಿ ಕಂಡು ಬಂದಿದ್ದು, ಪೂರ್ಣಿಯಾ ಲೋಕಸಭಾ ಕ್ಷೇತ್ರದಲ್ಲಿ. ಪೂರ್ಣಿಯಾ ಲೋಕಸಭಾ ಸ್ಥಾನಕ್ಕೆ ಬಿಮಾ ಭಾರತಿ ಆರ್‌ಜೆಡಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಕಾಂಗ್ರೆಸ್ ಸೇರಿದ್ದ ಪಪ್ಪು ಯಾದವ್, ಕೊನೆ ಕ್ಷಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದರೂ ಗಾಂಧಿ ಕುಟುಂಬಕ್ಕೆ ಅವರ ನಿಕಟತೆಯನ್ನು ಉಲ್ಲೇಖಿಸಿದ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರು. ಆರಂಭದಲ್ಲಿ ಪೂರ್ಣಿಯಾ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಹಣಾಹಣಿ ಏರ್ಪಟ್ಟಿತ್ತು, ಆದರೆ ಅಂತಿಮವಾಗಿ ಜೆಡಿಯು ಸಂಸದ ಸಂತೋಷ್ ಕುಶ್ವಾಹ ನಡುವೆ ನೇರ ಸ್ಪರ್ಧೆ ನಡೆದು ಪೂರ್ಣಿಯಾದಲ್ಲಿ ಪಪ್ಪು ಗೆಲುವಿನ ನಗೆ ಬೀರಿದರು.
ಸಂಸತ್ನಲ್ಲಿ ಪತಿ ಮತ್ತು ಪತ್ನಿ: ಪಪ್ಪು ಯಾದವ್ ಪೂರ್ಣಿಯಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದ ನಂತರ ಲೋಕಸಭೆ ಪ್ರವೇಶಿಸಿದ್ದಾರೆ. ಅವರು ನಾಲ್ಕನೇ ಬಾರಿಗೆ ಪೂರ್ಣಿಯಾದಿಂದ ಸಂಸದರಾಗಿದ್ದಾರೆ. ಅವರ ಪತ್ನಿ ರಂಜಿತ್ ರಂಜನ್ ಅವರು ಕಾಂಗ್ರೆಸ್‌ನ ರಾಜ್ಯಸಭಾ ಸಂಸದರಾಗಿದ್ದಾರೆ. ಹೀಗಾಗಿ ಪತಿ - ಪತ್ನಿ ಇಬ್ಬರೂ 18ನೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಪಪ್ಪು ಯಾದವ್ ಲೋಕಸಭೆಯಲ್ಲಿ ಕಾಣಿಸಿಕೊಂಡರೆ, ಅವರ ಪತ್ನಿ ರಂಜಿತ್ ರಂಜನ್ ರಾಜ್ಯಸಭೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಹಾರ ರಾಜಕೀಯದಲ್ಲಿ ಒಂದೇ ಅವಧಿಯಲ್ಲಿ ಎರಡನೇ ಬಾರಿಗೆ ಸದನದಲ್ಲಿ ಕಾಣಿಸಿಕೊಳ್ಳುವ ಏಕೈಕ ರಾಜಕೀಯ ದಂಪತಿಗಳಿವರಾಗಿದ್ದಾರೆ.