ಹರಿದ್ವಾರ (ಉತ್ತರಾಖಂಡ):ನಾನಕಮಟ್ಟಾ ಸಾಹಿಬ್ ಗುರುದ್ವಾರದ ದೇರಾ ಕರ್ ಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಯನ್ನು ಎಸ್‌ಟಿಎಫ್ ಎನ್‌ಕೌಂಟರ್ ಮಾಡಿದೆ. ಈ ಎನ್‌ಕೌಂಟರ್‌ನಲ್ಲಿ ಒಬ್ಬ ಕ್ರಿಮಿನಲ್ ಸಾವನ್ನಪ್ಪಿದ್ದಾನೆ. ಈತನನ್ನು ಅಮರಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಎಸ್‌ಟಿಎಫ್ ಹೇಳಿದೆ.
ಮಾರ್ಚ್ 28ರಂದು ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಹಾಡಹಗಲೇ ನಡೆದ ಹತ್ಯೆಯಿಂದ ಪೊಲೀಸ್ ಇಲಾಖೆ ಕೂಡ ಬೆಚ್ಚಿ ಬಿದ್ದಿತ್ತು. ಇದೀಗ ಎಸ್‌ಟಿಎಫ್ ಮತ್ತು ಹರಿದ್ವಾರ ಪೊಲೀಸರು ಕಾರ್ಯಾಚರಣೆ ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎನ್‌ಕೌಂಟರ್‌ನಲ್ಲಿ ಆರೋಪಿ ಅಮರಜೀತ್ನನ್ನು ಹೊಡೆದುರುಳಿಸಿದ್ದಾರೆ. ಈ ವಿಷಯವನ್ನು ಉತ್ತರಾಖಂಡ ಡಿಜಿಪಿ ಅಭಿನವ್ ಕುಮಾರ್ ಖಚಿತಪಡಿಸಿದ್ದಾರೆ. ಎರಡನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಎಸ್‌ಟಿಎಫ್ ಮತ್ತು ಪೊಲೀಸರು ಶೋಧ ಕಾರ್ಯ ಮುಂದುವರೆದಿದೆ.