ಕರ್ನಾಟಕ

karnataka

ಆಕ್ಸಿಸ್​ ಬ್ಯಾಂಕ್​ ದರೋಡೆ: 90 ಲಕ್ಷ ರೂ ಲೂಟಿ ಮಾಡಿ ಪರಾರಿಯಾದ ದುಷ್ಕರ್ಮಿಗಳು

By ETV Bharat Karnataka Team

Published : Jan 23, 2024, 5:51 PM IST

Updated : Jan 23, 2024, 6:35 PM IST

ಗ್ರಾಹಕರಂತೆ ಬ್ಯಾಂಕ್​​ಗೆ ನುಗ್ಗಿದ ದರೋಡೆಕೋರರು ಹಣ ದೋಚಿ ಪರಾರಿ ಆಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

Etv Bharat
Etv Bharat

ಪಾಟ್ನಾ:ಶಸ್ತ್ರಸಜ್ಜಿತ ದರೋಡೆಕೋರರ ಗುಂಪೊಂದು ಆಕ್ಸಿಸ್​ ಬ್ಯಾಂಕ್​ಗೆ ನುಗ್ಗಿ ಕನಿಷ್ಠ 90 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಘಟನೆಯ ವಿವರ: ನಿನ್ನೆ ಮಧ್ಯಾಹ್ನ 11 ಗಂಟೆ ಸುಮಾರಿಗೆ ಶಸ್ತ್ರಸಜ್ಜಿತ ದರೋಡೆಕೋರರು ಗ್ರಾಹಕರ ಸೋಗಿನಲ್ಲಿ ನಗರದ ಎಡಿಬಿ ಚೌಕ್‌ನಲ್ಲಿರುವ ಆಕ್ಸಿಸ್ ಬ್ಯಾಂಕ್ ಶಾಖೆಗೆ ನುಗ್ಗಿದ್ದಾರೆ. ಬಳಿಕ ಬ್ಯಾಂಕ್​ನಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿಗೆ ಮಾರಕಾಸ್ತ್ರಗಳಿಂದ ಬೆದರಿಸಿದ ದುಷ್ಕರ್ಮಿಗಳು ಎರಡು ಸುತ್ತಿನ ಗುಂಡು ಹಾರಿಸಿ ಕೋಣೆಯೊಂದರಲ್ಲಿ ಅವರನ್ನು ಬೀಗ ಹಾಕಿ ಬಂಧಿಸಿದ್ದಾರೆ. ತದನಂತರ ಬ್ಯಾಂಕ್‌ನ ಕ್ಯಾಶ್ ಕೌಂಟರ್​ನಿಂದ ಅಂದಾಜು 90 ಲಕ್ಷ ರೂಪಾಯಿ ನಗದು ಲೂಟಿ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಘಟನೆಯ ಬಗ್ಗೆ ಬ್ಯಾಂಕ್ ಸಿಬ್ಬಂದಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬ್ಯಾಂಕ್​ನ ಹೊರಗೆ ಮತ್ತು ಒಳಗಡೆ ಅಳವಡಿಸಲಾಗಿರುವ ಸಿಸಿಟಿವಿಗಳನ್ನೂ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.

ಘಟನೆ ಬಗ್ಗೆ ಎಸ್ಪಿ ಹೇಳಿದ್ದಿಷ್ಟು: "ಎಡಿಬಿ ಚೌಕ್‌ನಲ್ಲಿರುವ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ದರೋಡೆ ನಡೆದಿದೆ. ಶಾಖಾ ವ್ಯವಸ್ಥಾಪಕರು ಮತ್ತು ಉದ್ಯೋಗಿಗಳೊಂದಿಗೆ ಮಾತನಾಡಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಅಪರಾಧಿಗಳನ್ನು ಬಂಧಿಸಲಾಗುವುದು" ಎಂದು ಅರಾರಿಯಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮಣಿಪುರದಲ್ಲೂ ನಡೆದಿದ್ದ ಘಟನೆ:ಮುಸುಕು ದಾರಿ ದರೋಡೆಕೋರರ ಗುಂಪೊಂದು ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ನುಗ್ಗಿ ಹಣ​ ದೋಚಿ ಪರಾರಿಯಾಗಿದ್ದ ಘಟನೆ ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು. ಮುಖವಾಡ ಧರಿಸಿದ್ದ ದುಷ್ಕರ್ಮಿಗಳು ಶಸ್ತ್ರಸಜ್ಜಿತವಾಗಿ ಬ್ಯಾಂಕ್​ಗೆ ನುಗ್ಗಿ ಬರೋಬ್ಬರಿ 18.85 ಕೋಟಿ ರೂಪಾಯಿ ಲೂಟಿ ಮಾಡಿದ್ದರು. ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ 10 ಜನರ ಅಪರಿಚಿತ ಮುಸುಕುಧಾರಿಗಳ ಗುಂಪು ಸಂಜೆ ಸಮಯ ​ಬ್ಯಾಂಕ್‌ಗೆ ನುಗ್ಗಿ ತಮ್ಮ ಬಳಿಯಿದ್ದ ಬಂದೂಕುಗಳನ್ನು ತೋರಿಸಿ ಸಿಬ್ಬಂಯನ್ನು ಎಲ್ಲಿಯೂ ಕದಲದಂತೆ ತಡೆದಿದ್ದರು, ಉಳಿದ ದರೋಡೆಕೋರರು ನಗದು ಸಂಗ್ರಹಿಸಿ ಬಳಿಕ ಅಲ್ಲಿಂದ ಪರಾರಿಯಾಗಿದ್ದರು.

ನವದೆಹಲಿಯ ಗಾಜಿಯಾಬಾದ್‌ನ ನಂದ್​ಗ್ರಾಮದಲ್ಲೂ ಹಾಡಹಗಲೇ ದುಷ್ಕರ್ಮಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಮೀಣ ಶಾಖೆಗೆ ನುಗ್ಗಿ ಲೂಟಿ ಮಾಡಿದ್ದರು. ನಾಲ್ವರು ದುಷ್ಕರ್ಮಿಗಳು ಬ್ಯಾಂಕ್‌ಗೆ ನುಗ್ಗಿ ಅಲ್ಲಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿ 12 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದರು.

ಇದನ್ನೂ ಓದಿ:ಬೆಂಗಳೂರಲ್ಲಿ ಅಪಘಾತವೆಸಗಿದ್ದಕ್ಕೆ ವಾಗ್ವಾದ: ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನ ಎಳೆದೊಯ್ದ ಚಾಲಕ

Last Updated : Jan 23, 2024, 6:35 PM IST

ABOUT THE AUTHOR

...view details