ಮಂಜುಗಡ್ಡೆ ರಸ್ತೆಯಲ್ಲಿ 16 ಕಿ.ಮೀ ಕಾಲ್ನಡಿಗೆ ಮೂಲಕ ವೃದ್ಧನನ್ನ ಆಸ್ಪತ್ರೆಗೆ ಕರೆತಂದ ಜನರು - ಮಂಜುಗಡ್ಡೆಯ ರಸ್ತೆಯಲ್ಲಿ ಅನಾರೋಗ್ಯ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದ ಗ್ರಾಮಸ್ಥರು
ಉತ್ತರಕಾಶಿ(ಉತ್ತರಾಖಂಡ): ಇಲ್ಲಿನ ಮೋರಿ ಗ್ರಾಮದ ಜನರು ಅಭಿವೃದ್ಧಿಯಿಂದ ದೂರ ಉಳಿದಿದ್ದು, ಆರೋಗ್ಯ, ಶಿಕ್ಷಣ, ಸಂಪರ್ಕ, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಗ್ರಾಮದಲ್ಲಿ ಆರೋಗ್ಯ ಸೌಲಭ್ಯ ಇಲ್ಲದ ಕಾರಣ ಜನರು ಕಾಲ್ನಡಿಗೆಯಲ್ಲಿ ಕಿ.ಮೀ.ಗಟ್ಟಲೆ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಅಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಕೆಲ ದಿನಗಳಿಂದ ಮೋರಿ ಬ್ಲಾಕ್‌ನ ದೂರದ ಓಸ್ಲಾ ಗ್ರಾಮದಲ್ಲಿ ಕೃಪಾ ಸಿಂಗ್(58) ಎಂಬ ವೃದ್ಧ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ಅವರ ಆರೋಗ್ಯ ಗಂಭೀರಗೊಂಡ ಕಾರಣ ಗ್ರಾಮಸ್ಥರು ಚಳಿ ಲೆಕ್ಕಿಸದೇ ಸುಮಾರು 16 ಕಿ.ಮೀ ಮಂಜುಗಡ್ಡೆಯಲ್ಲಿ ಕ್ರಮಿಸಿ ಮರದ ದಿಮ್ಮಿಗಳ ಸಹಾಯದೊಂದಿಗೆ ವ್ಯಕ್ತಿಯನ್ನು ಪುರೋಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಸದ್ಯ ಉತ್ತರಾಖಂಡದ ಐದನೇ ವಿಧಾನಸಭೆಯ ಮತ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.
Last Updated : Feb 3, 2023, 8:16 PM IST