ಪ್ರವಾಹ ಬೇಧಿಸಲು ಹೋದವ ಕ್ಷಣಾರ್ಧದಲ್ಲಿ ಕೊಚ್ಚಿ ಹೋದ: ಭಯಾನಕ ವಿಡಿಯೋ ನೋಡಿ - ಈಟಿವಿ ಭಾರತ ಕನ್ನಡ ನ್ಯೂಸ್
ಉತ್ತರಾಖಂಡದದಲ್ಲಿ ಮಳೆ ಇಳಿದರೂ ಪ್ರವಾಹ ಇನ್ನೂ ತಣಿದಿಲ್ಲ. ನದಿ, ಹಳ್ಳ, ಕೆರೆಗಳು ಭೋರ್ಗರೆಯುತ್ತಿವೆ. ಇಲ್ಲಿನ ಹಲ್ದ್ವಾನಿಯಲ್ಲಿ ಯುವಕನೊಬ್ಬ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನು ದಾಟುವಾಗ ಕೊಚ್ಚಿಕೊಂಡು ಹೋಗಿದ್ದಾನೆ. ಅಪಾಯಕಾರಿಯಾಗಿ ನೀರು ಹರಿಯುತ್ತಿದ್ದರೂ ಲೆಕ್ಕಿಸದೇ ನೀರನ್ನೇ ಬೇಧಿಸಲು ಹೋದಾಗ ಯುವಕನನ್ನು ಗಂಗೆ ಸೆಳೆದೊಯ್ದಿದ್ದಾಳೆ. ಈವರೆಗೂ ಯುವಕ ಪತ್ತೆಯಾಗಿಲ್ಲ. ಈತ ಕೊಚ್ಚಿ ಹೋಗುತ್ತಿದ್ದುದು ಆತನ ಸಹೋದರಿಯೇ ವಿಡಿಯೋ ಮಾಡಿದ್ದಾಳೆ. ಎನ್ಡಿಆರ್ಎಫ್ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.