ತುಮಕೂರು: ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋದ ಯುವಕ - ತುಮಕೂರು ಮಳೆ ಸುದ್ದಿ
ತುಮಕೂರು: ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಟಗೆರೆ - ವಡ್ಡಗೆರೆ ಮುಖ್ಯ ರಸ್ತೆಯ ಮಲಪ್ಪನಹಳ್ಳಿ ಗ್ರಾಮದ ದೊಡ್ಡ ಹಳ್ಳ ತುಂಬಿ ರಸ್ತೆ ಮೇಲೆ ಹರಿಯುತ್ತಿತ್ತು. ಈ ನೀರಿನಲ್ಲಿ ಬೈಕ್ ಜೊತೆ ಹೋಗುತ್ತಿದ್ದ ಯುವಕ, ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದ. ಬಳಿಕ ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ದು, ಬೈಕ್ ಕೊಚ್ಚಿಕೊಂಡು ಹೋಗಿದೆ.