ವಿಡಿಯೋ: ಬರಗಾಲದಿಂದ ಅನ್ನದಾತನ ಕಣ್ಣೀರು.. ಬೆಳೆಯ ಮಧ್ಯೆ ಬಿದ್ದು ಗೊಳಾಡಿದ ರೈತ! - ಬಿಹಾರದಲ್ಲಿ ಅನ್ನದಾತರ ಗೋಳಾಟ
ಪಾಟ್ನಾ(ಬಿಹಾರ): ಕೆಲ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರ ಮಧ್ಯೆ ಬಿಹಾರದಲ್ಲಿ ಬರಗಾಲ ಪರಸ್ಥಿತಿ ನಿರ್ಮಾಣಗೊಂಡಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ರೈತನೊಬ್ಬ ತಾನು ಬೆಳೆದ ಖಾರಿಫ್ ಬೆಳೆಯ ಮಧ್ಯೆ ಬಿದ್ದು ಗೊಳಾಡಿದ್ದಾನೆ. ಅದರ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆದರೆ, ಯಾವಾಗ ಈ ಘಟನೆ ನಡೆದಿದೆ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಮಳೆಯ ಅಭಾವದಿಂದ ರೈತ ಭತ್ತದ ಗದ್ದೆಯಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ. ಬಿಹಾರದಲ್ಲಿ ಜೂನ್ 15ರ ಬಳಿಕ ಮಳೆ ಆರಂಭಗೊಂಡಿದೆ. ಆದರೆ,ಜುಲೈ ತಿಂಗಳಲ್ಲಿ ಮಳೆ ಕೈಕೊಟ್ಟ ಕಾರಣ ಖಾರಿಫ್ ಬೆಳೆಗಳು ಒಣಗಲು ಶುರುವಾಗಿವೆ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.