ವಿಧಾನಸೌಧಕ್ಕೆ ತ್ರಿವರ್ಣ ಧ್ವಜ ಬಣ್ಣದ ಮೆರಗು... ದೀಪಾಲಂಕಾರದ ಸೊಬಗು - ಈಟಿವಿ ಭಾರತ ಕರ್ನಾಟಕ
75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಕ್ಕೆ ಈಗಾಗಲೇ ಭರ್ಜರಿ ತಯಾರಿ ಶುರುವಾಗಿದೆ. ಇದರ ಜೊತೆಗೆ ಶನಿವಾರದಿಂದ(ಆ.13 ರಿಂದ) ಹರ್ ಘರ್ ತಿರಂಗಾ ಅಭಿಯಾನ ಆರಂಭವಾಗಿದೆ. ಸ್ವಾತಂತ್ರ್ಯೋತ್ಸವ ಸಂಭ್ರಮದ ಅಂಗವಾಗಿ ದೇಶದ ಪ್ರಮುಖ ಐತಿಹಾಸಿಕ ಕಟ್ಟಡಗಳು, ಸರ್ಕಾರಿ ಕಚೇರಿಗಳು ತ್ರಿವರ್ಣ ಬಣ್ಣಗಳಿಂದ ಕಂಗೊಳಿಸಲು ಶುರುವಾಗಿವೆ. ಇದೀಗ ಬೆಂಗಳೂರಿನಲ್ಲಿರುವ ವಿಧಾನಸೌಧ ಕಟ್ಟಡ ಕೂಡ ತ್ರಿವರ್ಣ ಧ್ವಜದ ಬೆಳಕಿನಿಂದ ಕಂಗೊಳಿಸುತ್ತಿದೆ.